Anushree-Dhananjay: ಆ್ಯಂಕರ್ ಅನುಶ್ರೀ ಮದುವೆ ಆದ್ಮೇಲೆ ನನ್ನ ಮದುವೆ; ಡಾಲಿ ಧನಂಜಯ್ ಘೋಷಣೆ
ನಾಯಕ ನಟ-ನಟಿ ವಿವಾಹದ ಬಗ್ಗೆ ಜನರಲ್ಲಿ ಭಾರೀ ಕುತೂಹಲವಿರುತ್ತದೆ. ಯಾವಾಗ ಮದುವೆಯಾಗ್ತೀರಾ, ಲವ್ ಮ್ಯಾರೇಜ್ ಮಾಡಿಕೊಳ್ತೀರಾ ಅಥವಾ ಅರೆಂಜ್ ಮ್ಯಾರೇಜ್ ಮಾಡಿಕೊಳ್ತೀರಾ ಎಂದು ಕೇಳುತ್ತಿರುತ್ತಾರೆ. ನಟ ಡಾಲಿ ಧನಂಜಯ್ಗೂ ಅದೇ ಪ್ರಶ್ನೆ ಎದುರಾಗಿದೆ.
ಡಾಲಿ ಧನಂಜಯ್ (Dhananjay) ಎಲ್ಲಿ ಹೋದ್ರು ಅವರ ಅಭಿಮಾನಿಗಳು ಮದುವೆ ಯಾವಾಗ ಅಂತ ಕೇಳ್ತಾನೆ ಇರ್ತಾರೆ.
2/ 9
ಟಿವಿ ಶೋ ಆ್ಯಂಕರಿಂಗ್ ಮಾಡುತ್ತಲೇ ಫೇಮಸ್ ಆದ ಆ್ಯಂಕರ್ ಅನುಶ್ರೀ (Anchor Anushree) ವಿವಾಹದ ಬಗ್ಗೆಯೂ ಅಭಿಮಾನಿ ಪ್ರಶ್ನೆ ಮಾಡುತ್ತಿರುತ್ತಾರೆ.
3/ 9
ಅನುಶ್ರೀ ಹಾಗೂ ಡಾಲಿ ಧನಂಜಯ್ ಇಬ್ಬರು ಇದ್ದ ವೇದಿಕೆಯಲ್ಲಿ ಮದುವೆ ಪ್ರಶ್ನೆ ಪ್ರಸ್ತಾಪಿಸಲಾಗಿದೆ.
4/ 9
ಈ ವೇಳೆ ಧನಂಜಯ್ ಅವರು ಮದುವೆ ವಿಚಾರದಲ್ಲಿ ಹೊಸ ಘೋಷಣೆ ಮಾಡಿದರು. ಇದನ್ನು ಕೇಳಿ ಅಭಿಮಾನಿಗಳು ನಕ್ಕಿದ್ದಾರೆ.
5/ 9
ನಿಮ್ಮ ಗೆಳೆಯ ಚಿಟ್ಟೆ (ವಸಿಷ್ಠ ಸಿಂಹ) ಇತ್ತೀಚೆಗೆ ಎಂಗೇಜ್ ಆದರು. ನಿಮ್ಮ ಮದುವೆ ಯಾವಾಗ’ ಎಂದು ಧನಂಜಯ್ ಗೆ ವೇದಿಕೆ ಮೇಲೆ ಅನುಶ್ರೀ ಪ್ರಶ್ನೆ ಮಾಡಿದರು.
6/ 9
ಈ ಪ್ರಶ್ನೆಗೆ ಧನಂಜಯ್ಗೆ ಏನು ಉತ್ತರಿಸಬೇಕು ಎಂಬುದು ತಿಳಿಯಲಿಲ್ಲ. ಮದುವೆ ಆಗಬೇಕಾ? ಎಂದು ಫ್ಯಾನ್ಸ್ ಬಳಿ ಪ್ರಶ್ನೆ ಮಾಡಿದರು. ಬಳಿಕ ಫ್ಯಾನ್ಸ್ ಬೇಡ ಎನ್ನುತ್ತಿದ್ದಾರೆ ಎಂದು ಧನಂಜಯ್ ಉತ್ತರಿಸಿದರು.
7/ 9
ಬಡವರ ಮಕ್ಕಳು ಬೆಳೆಯಬೇಕು ಎಂದ ಡಾಲಿ ಹಿಂಗ್ಯಾಕ್ ಮಾಡಿದ್ರು? ನೆತ್ತಿಗೇರಿದ ನೆಟ್ಟಿಗರ ಸಿಟ್ಟು!
8/ 9
ಅನುಶ್ರೀ ಮದುವೆ ಅನೌನ್ಸ್ ಬೆನ್ನಲ್ಲೇ ನಾನು ಮದುವೆ ಆಗುತ್ತೇನೆ ಎಂದು ಧನಂಜಯ್ ಹೇಳಿದ್ದಾರೆ. ಈ ವೇಳೆ ಅನುಶ್ರೀ ಅದಕ್ಕೆ ನೀವು ತುಂಬಾ ಸಮಯ ಕಾಯಬೇಕಾಗುತ್ತದೆ ಎಂದಿದ್ದಾರೆ. ಫ್ಯಾನ್ಸ್ ಇಬ್ಬರ ಮಾತು ಕೇಳಿ ನಕ್ಕು ಸುಮ್ಮನಾದ್ರು.
9/ 9
ಧನಂಜಯ್ ಹಾಗೂ ಅದಿತಿ ಪ್ರಭುದೇವ ನಟನೆಯ ‘ಒನ್ಸ್ ಅಪಾನ ಟೈಮ್ ಇನ್ ಜಮಾಲಿ ಗುಡ್ಡ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ.