Dhruva Sarja: ಅಂಗಾಂಗ ದಾನ ಮಾಡಿದ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೀಡಿದ ನಟ ಧ್ರುವ ಸರ್ಜಾ

ಧ್ರುವ ಸರ್ಜಾ ಅಭಿಮಾನಿಯೊಬ್ಬ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಮೆದುಳು ಸಂಪೂರ್ಣ ನಿಷ್ಕ್ರೀಯಗೊಂಡಿದೆ. ಇದೀಗ ಮಗನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಮುಂದಾಗಿದ್ದಾರೆ.

First published:

  • 17

    Dhruva Sarja: ಅಂಗಾಂಗ ದಾನ ಮಾಡಿದ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೀಡಿದ ನಟ ಧ್ರುವ ಸರ್ಜಾ

    ಇದೀಗ ಸಂಕಷ್ಟದಲ್ಲಿರುವ ಅಭಿಮಾನಿ ಕುಟುಂಬಕ್ಕೆ ನಟ ಧ್ರುವ ಸರ್ಜಾ (Dhruva Sarja) ನೆರವಾಗಿದ್ದಾರೆ. ಮಧ್ಯಾಹ್ನ 2 ಗಂಟೆ ಹೊತ್ತಿಗೆ ಅಭಿಮಾನಿಯನ್ನು ಭೇಟಿ ಮಾಡಲು ಧ್ರುವ ಆಸ್ಪತ್ರೆಗೆ ಆಗಮಿಸಿದ್ದರು. ಕೋಮಾದಲ್ಲಿರುವ ಅಭಿಮಾನಿಯನ್ನು ನೋಡಲು ಬಂದ ಧ್ರುವ ಸರ್ಜಾ ಕಣ್ಣೀರು ಹಾಕಿದ್ದಾರೆ.

    MORE
    GALLERIES

  • 27

    Dhruva Sarja: ಅಂಗಾಂಗ ದಾನ ಮಾಡಿದ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೀಡಿದ ನಟ ಧ್ರುವ ಸರ್ಜಾ

    ಶಿಡ್ಲಘಟ್ಟದ ಪೃಥ್ವಿರಾಜ್ ನಟ ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ನಾಲ್ಕು ದಿನಗಳ ಹಿಂದೆಯಷ್ಟೇ ಬೈಕ್ ಮೇಲಿಂದ ಬಿದ್ದು ತಲೆಗೆ ತೀವ್ರಪೆಟ್ಟು ಮಾಡಿಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    MORE
    GALLERIES

  • 37

    Dhruva Sarja: ಅಂಗಾಂಗ ದಾನ ಮಾಡಿದ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೀಡಿದ ನಟ ಧ್ರುವ ಸರ್ಜಾ

    ಅಪಘಾತದಿಂದ ಪೃಥ್ವಿರಾಜ್ ಸ್ಥಿತಿ ಗಂಭೀರವಾಗಿತ್ತು. ಮಗನ ಆಸ್ಪತ್ರೆ ಖರ್ಚಿಗಾಗಿ ಪೃಥ್ವಿರಾಜ್ ತಂದೆ ಸಾಲ ಮಾಡಿಕೊಂಡಿದ್ರು. ಸಂಕಷ್ಟದಲ್ಲಿದ್ದ ಅಭಿಮಾನಿ ಕುಟುಂಬಕ್ಕೆ ನಟ ಧ್ರುವ ಸರ್ಜಾ ನೆರವಾಗಿದ್ದಾರೆ.

    MORE
    GALLERIES

  • 47

    Dhruva Sarja: ಅಂಗಾಂಗ ದಾನ ಮಾಡಿದ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೀಡಿದ ನಟ ಧ್ರುವ ಸರ್ಜಾ

    ಆಸ್ಪತ್ರೆ ವೆಚ್ಚ ಭರಿಸಲು ಸಾಲ ಮಾಡಿದ ಪೃಥ್ವಿ ತಂದೆ ಜಗದೀಶ್ ಅವರಿಗೆ ಧ್ರುವ 5 ಲಕ್ಷ ರೂಪಾಯಿ ನೀಡಿದ್ದಾರೆ. ಪೃಥ್ವಿ ಸ್ಥಿತಿ ಕಂಡು ಕಣ್ಣೀರು ಹಾಕಿದ ಧ್ರುವ ಸರ್ಜಾ, ತಂದೆ-ತಾಯಿ ಇಬ್ಬರಿಗೂ ಧೈರ್ಯ ಹೇಳಿದ್ದಾರೆ.

    MORE
    GALLERIES

  • 57

    Dhruva Sarja: ಅಂಗಾಂಗ ದಾನ ಮಾಡಿದ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೀಡಿದ ನಟ ಧ್ರುವ ಸರ್ಜಾ

    ನಟ ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿ ಪೃಥ್ವಿರಾಜ್ ಫೆಬ್ರವರಿ 14 ರಂದು ಬೈಕ್ ನಿಂದ ಬಿದ್ದು ಕೋಮಾ ಸ್ಥಿತಿಯಲ್ಲಿದ್ದಾರೆ. ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ ಪರಿಣಾಮ, ಅವರ ತಲೆಗೆ ತೀವ್ರ ಪೆಟ್ಟಾಗಿದೆ.

    MORE
    GALLERIES

  • 67

    Dhruva Sarja: ಅಂಗಾಂಗ ದಾನ ಮಾಡಿದ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೀಡಿದ ನಟ ಧ್ರುವ ಸರ್ಜಾ

    ಪೃಥ್ವಿರಾಜ್ ಬೆಂಗಳೂರಿನ ಎಂ.ಎಸ್.ರಾಮಯ್ಯ ಮೆಮೊರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮತ್ತೆ ಪೃಥ್ವಿರಾಜ್ ಸಹಜ ಸ್ಥಿತಿಗೆ ಬರುವುದು ಅನುಮಾನ ಎಂದು ವೈದ್ಯರು ತಿಳಿಸಿದ್ದಾರೆ. ಪೃಥ್ವಿರಾಜ್ ಸ್ಥಿತಿ ತಿಳಿದ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದೆ.

    MORE
    GALLERIES

  • 77

    Dhruva Sarja: ಅಂಗಾಂಗ ದಾನ ಮಾಡಿದ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೀಡಿದ ನಟ ಧ್ರುವ ಸರ್ಜಾ

    ಇದೇ ವೇಳೆ ಪ್ರತಿಕ್ರಿಯಿಸಿದ ನಟ ಧ್ರುವ ಸರ್ಜಾ, ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದೇ ಪೃಥ್ವಿಯ ಈ ಸ್ಥಿತಿಗೆ ಕಾರಣ ಎಂದು ಅಭಿಮಾನಿ ಹೇಳಿದ್ದಾರೆ. ಹೀಗಾಗಿ ಹೆಲ್ಮೆಟ್ ಹಾಕಿಕೊಂಡು ಬೈಕ್ ಓಡಿಸುವಂತೆ ಅಭಿಮಾನಿಗಳಿಗೆ ಧ್ರುವ ಕರೆಕೊಟ್ಟಿದ್ದಾರೆ.

    MORE
    GALLERIES