Dhruva Sarja: ನಟ ಧ್ರುವ ಸರ್ಜಾ ಮುದ್ದಾದ ಮಗಳ ಫೋಟೋ​ ರಿವೀಲ್, ಕ್ಯೂಟ್ ಬೇಬಿ ಎಂದ ಫ್ಯಾನ್ಸ್

Dhruva Sarja: ಸ್ಯಾಂಡಲ್​ವುಡ್ ಸ್ಟಾರ್ ಧ್ರುವ ಸರ್ಜಾ ತಂದೆಯಾದ ಖುಷಿಯಲ್ಲಿದ್ದಾರೆ. 7 ತಿಂಗಳ ಬಳಿಕ ತಮ್ಮ ಮಗಳ ಮುಖ ರಿವೀಲ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮುದ್ದು ಮಗಳ ಫೋಟೋ ಹಂಚಿಕೊಂಡಿದ್ದಾರೆ.

First published:

  • 18

    Dhruva Sarja: ನಟ ಧ್ರುವ ಸರ್ಜಾ ಮುದ್ದಾದ ಮಗಳ ಫೋಟೋ​ ರಿವೀಲ್, ಕ್ಯೂಟ್ ಬೇಬಿ ಎಂದ ಫ್ಯಾನ್ಸ್

    ಧ್ರುವ ಸರ್ಜಾ ಮಗಳು ಹೇಗಿದ್ದಾಳೆ ಎಂದು ನೋಡಲು ಅಭಿಮಾನಿಗಳು ಕಾಯ್ತಿದ್ರು. ತಮ್ಮ ಮಗಳ ಮುಖ ರಿವೀಲ್ ಮಾಡುವ ಮೂಲಕ ನಟ ಫ್ಯಾನ್ಸ್​ಗೆ ಗುಡ್ ನ್ಯೂಸ್ ನೀಡಿದ್ದಾರೆ. ಧ್ರುವ ಮಗಳು ಹುಟ್ಟಿ 7 ತಿಂಗಳ ಕಳೆದಿದೆ.

    MORE
    GALLERIES

  • 28

    Dhruva Sarja: ನಟ ಧ್ರುವ ಸರ್ಜಾ ಮುದ್ದಾದ ಮಗಳ ಫೋಟೋ​ ರಿವೀಲ್, ಕ್ಯೂಟ್ ಬೇಬಿ ಎಂದ ಫ್ಯಾನ್ಸ್

    ಇದೀಗ ನಟ ಮೊದಲ ಬಾರಿಗೆ ಮಗಳ ಮುಖವನ್ನ ರಿವೀಲ್ ಮಾಡಿದ್ದಾರೆ. ಮುದ್ದು ಮಗಳಿಗೆ ಫೋಟೋಶೂಟ್ ಮಾಡಿಸಿದ್ದಾರೆ. ಮಗಳು ಕೂಡ ಮುದ್ದಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಕೂಡ ವೈರಲ್ ಆಗಿದೆ. (ಕೃಪೆ: ಧ್ರುವ ಸರ್ಜಾ ಇನ್ಸ್ಟಾಗ್ರಾಮ್​)

    MORE
    GALLERIES

  • 38

    Dhruva Sarja: ನಟ ಧ್ರುವ ಸರ್ಜಾ ಮುದ್ದಾದ ಮಗಳ ಫೋಟೋ​ ರಿವೀಲ್, ಕ್ಯೂಟ್ ಬೇಬಿ ಎಂದ ಫ್ಯಾನ್ಸ್

    ಬಾಲ್ಯದ ಗೆಳತಿ ಪ್ರೇರಣಾರನ್ನ ಪ್ರೀತಿಸಿ 2019ರಲ್ಲಿ ಮದುವೆಯಾದ ನಟ ಧ್ರುವ ಸರ್ಜಾ, ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಬಳಿಕ ಮಗಳು ಪ್ರೇರಣಾಗೆ ಮುದ್ದು ಮಗಳು ಜನಿಸಿದ ಗುಡ್ ನ್ಯೂಸ್ ಅನ್ನು ಕೂಡ ನಟ ಹಂಚಿಕೊಂಡಿದ್ದರು.

    MORE
    GALLERIES

  • 48

    Dhruva Sarja: ನಟ ಧ್ರುವ ಸರ್ಜಾ ಮುದ್ದಾದ ಮಗಳ ಫೋಟೋ​ ರಿವೀಲ್, ಕ್ಯೂಟ್ ಬೇಬಿ ಎಂದ ಫ್ಯಾನ್ಸ್

    ಧ್ರುವ ಸರ್ಜಾ ಮಗಳು ಜನಿಸಿ 7 ತಿಂಗಳು ಕಳೆದಿದೆ. 7 ತಿಂಗಳ ಬಳಿಕ ಮೊದಲ ಫೋಟೋವನ್ನು ಶೇರ್ ಮಾಡಿದ್ದಾರೆ. ಅಂದಹಾಗೆ ಇದು 7 ತಿಂಗಳ ಮಗಳ ಫೋಟೋವಲ್ಲ. ಒಂದು ತಿಂಗಳಿದ್ದಾಗ ಕ್ಲಿಕ್ ಮಾಡಿದ ಫೋಟೋ ಇದಾಗಿದೆ ಎಂದು ಧ್ರುವ ಸರ್ಜಾ ಬರೆದುಕೊಂಡಿದ್ದಾರೆ.

    MORE
    GALLERIES

  • 58

    Dhruva Sarja: ನಟ ಧ್ರುವ ಸರ್ಜಾ ಮುದ್ದಾದ ಮಗಳ ಫೋಟೋ​ ರಿವೀಲ್, ಕ್ಯೂಟ್ ಬೇಬಿ ಎಂದ ಫ್ಯಾನ್ಸ್

    ಹಲೋ ಸ್ನೇಹಿತರೆ ಹಾಗೂ ಕುಟುಂಬದವರೆ, ನನಗೆ ಇನ್ನೂ ಹೆಸರಿಟ್ಟಿಲ್ಲ. ನನಗೆ ಈಗ 7 ತಿಂಗಳು. ನನ್ನ ಪಯಣವನ್ನು ಹಂಚಿಕೊಳ್ಳಲು ಖುಷಿ ಆಗುತ್ತದೆ. ಮಗಳು ಒಂದು ತಿಂಗಳ ಮಗುವಾಗಿದ್ದಾಗ ಕ್ಲಿಕ್ ಮಾಡಿದ ಕೆಲವು ಫೋಟೋಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಬರೆದಿದ್ದಾರೆ.

    MORE
    GALLERIES

  • 68

    Dhruva Sarja: ನಟ ಧ್ರುವ ಸರ್ಜಾ ಮುದ್ದಾದ ಮಗಳ ಫೋಟೋ​ ರಿವೀಲ್, ಕ್ಯೂಟ್ ಬೇಬಿ ಎಂದ ಫ್ಯಾನ್ಸ್

    ನಾನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೋಗಳು ಮತ್ತು ಅಪ್ಡೇಟ್ ಹಂಚಿಕೊಳ್ಳುತ್ತೇನೆ. ನಿಮ್ಮ ಆಶೀರ್ವಾದ ಇರಲಿ. ಜೈ ಹನುಮಾನ್ ಎಂದು ನಟ ಧ್ರುವ ಸರ್ಜಾ ಬರೆದುಕೊಂಡಿದ್ದಾರೆ.

    MORE
    GALLERIES

  • 78

    Dhruva Sarja: ನಟ ಧ್ರುವ ಸರ್ಜಾ ಮುದ್ದಾದ ಮಗಳ ಫೋಟೋ​ ರಿವೀಲ್, ಕ್ಯೂಟ್ ಬೇಬಿ ಎಂದ ಫ್ಯಾನ್ಸ್

    ಸ್ಯಾಂಡಲ್ವುಡ್ ಡೈರೆಕ್ಟರ್ ಜೋಗಿ ಪ್ರೇಮ್ ಜೊತೆ ನಟ ಧ್ರುವ ಸರ್ಜಾ ಕೆಡಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಧ್ರುವ ಸರ್ಜಾ ಹೊಸ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದ್ದು, ತೆರೆ ಮೇಲೆ ಧ್ರುವ ಅಬ್ಬರ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

    MORE
    GALLERIES

  • 88

    Dhruva Sarja: ನಟ ಧ್ರುವ ಸರ್ಜಾ ಮುದ್ದಾದ ಮಗಳ ಫೋಟೋ​ ರಿವೀಲ್, ಕ್ಯೂಟ್ ಬೇಬಿ ಎಂದ ಫ್ಯಾನ್ಸ್

    ಕೆಡಿ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. ಇದು ಕೆಡಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಧ್ರುವ ಸರ್ಜಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, 4 ಭಾಷೆಗಳಲ್ಲಿ ರಿಲೀಸ್ ಆಗಲಿದೆ.

    MORE
    GALLERIES