Dhananjaya-Hoysala: ಮತ್ತೆ ಅಬ್ಬರಿಸಲು ಸಜ್ಜಾದ ಡಾಲಿ, 'ಹೊಯ್ಸಳ'ನ ಬಿಡುಗಡೆಗೆ ಮುಹೂರ್ತ ಫಿಕ್ಸ್
ನಟ ಡಾಲಿ ಧನಂಜಯ ನಟನೆಯ 25ನೇ ಸಿನಿಮಾ ಹೊಯ್ಸಳ ಬಿಡುಗಡೆಗೆ ರೆಡಿಯಾಗಿದೆ. ಹೊಯ್ಸಳ ಸಿನಿಮಾವನ್ನು ಕೆ ಆರ್ ಜಿ ನಿರ್ಮಾಣ ಸಂಸ್ಥೆ ಬ್ಯಾನರ್ನಡಿ ತಯಾರು ಮಾಡಲಾಗಿದ್ದು, ಡಾಲಿ ಧನಂಜಯ್ ಅವ್ರೇ ಸಿನಿಮಾ ರಿಲೀಸ್ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಮತ್ತು ಟಾಲಿವುಡ್ನಲ್ಲಿ ಸದ್ದು ಮಾಡ್ತಿರುವ ಡಾಲಿ ಧನಂಜಯ್ ಅವರ 25ನೇ ಸಿನಿಮಾ ಹೊಯ್ಸಳ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.
2/ 8
ಹೊಯ್ಸಳ ಸಿನಿಮಾ ಪೋಸ್ಟರ್ ನಲ್ಲಿ ಡಾಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಯ್ಸಳ ಸಿನಿಮಾದಲ್ಲಿ ಡಾಲಿ ಅಬ್ಬರ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.
3/ 8
ಬೆಳಗಾವಿಯಲ್ಲಿ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ನಡೆದ ಘಟನೆಯನ್ನು ಆಧರಿಸಿ ಈ ಕಥೆ ಹೆಣೆಯಲಾಗಿದೆ.
4/ 8
ಹೊಯ್ಸಳ ಸಿನಿಮಾದಲ್ಲಿ ಗುರುದೇವ ಪಾತ್ರದಲ್ಲಿ ನಟ ರಾಕ್ಷಸ ಡಾಲಿ ಧನಂಜಯ್ ಮಿಂಚಿದ್ದಾರೆ. ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ 2023ರ ಮಾರ್ಚ್ 30ರಂದು ಸಿನಿಮಾ ತೆರೆಗೆ ಬರಲಿದೆ ಎಂದು ತಿಳಿಸಿದೆ.
5/ 8
[caption id="attachment_947188" align="alignnone" width="970"] ಸಿನಿಮಾದ ಪೋಸ್ಟರ್ನಲ್ಲಿ ಮುಖಕ್ಕೆ ಗ್ಯಾಸ್ ಮಾಸ್ ಹಾಕ್ಕೊಂಡಿರುವ ಡಾಲಿ ಖಡಕ್ ಪೊಲೀಸ್ ಅಧಿಕಾರಿಯ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
[/caption]
6/ 8
ಸಿನಿಮಾದ ಪೋಸ್ಟರ್ನಲ್ಲಿ ಮುಖಕ್ಕೆ ಗ್ಯಾಸ್ ಮಾಸ್ ಹಾಕ್ಕೊಂಡಿರುವ ಡಾಲಿ ಖಡಕ್ ಪೊಲೀಸ್ ಅಧಿಕಾರಿಯ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
7/ 8
ಚಿತ್ರದ ಟೈಟಲ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಹೊಯ್ಸಳ ಶೀರ್ಷಿಕೆ ಕಳಗೆ ಆರಕ್ಷಕ ರಾಕ್ಷನಾದಾಗ ಎಂದು ಬರೆಯಲಾಗಿದ್ದು, ಸಿನಿಮಾದ ಮೇಲೆ ಇಂಟರೆಸ್ಟಿಂಗ್ ಹೆಚ್ಚಿಸಿದೆ.
8/ 8
ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಿಜಯ್ ನಾಗೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಡವ ರಾಸ್ಕಲ್ ಬಳಿಕ ಧನಂಜಯ ಜೊತೆ ಮತ್ತೆ ಅಮೃತ ಅಯ್ಯಂಗಾರ್ ಡಾಲಿಗೆ ಜೋಡಿಯಾಗಿದ್ದಾರೆ.