Actor Yash: ತಮಿಳು ನಟನಿಗೆ ಧನಸಹಾಯ ಮಾಡಿದ ಯಶ್, ರಾಕಿ ಭಾಯ್ ಕೊಂಡಾಡಿದ ಡೇನಿಯಲ್ ಬಾಲಾಜಿ

ಕೆಜಿಎಫ್ ಸಿನಿಮಾ ಬಳಿಕೆ ರಾಕಿಂಗ್ ಸ್ಟಾರ್ ಯಶ್ ರೇಂಜ್ ಬದಲಾಗಿದೆ. ಬಾಲಿವುಡ್ ಅಂಗಳದಲ್ಲೂ ರಾಕಿ ಭಾಯ್ ಬಗ್ಗೆ ಚರ್ಚೆ ಜೋರಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಯಶ್ ಬಗ್ಗೆ ತಮಿಳು ನಟ ಡೇನಿಯಲ್ ಬಾಲಾಜಿ ಮಾತಾಡಿದ್ದಾರೆ.

First published:

  • 18

    Actor Yash: ತಮಿಳು ನಟನಿಗೆ ಧನಸಹಾಯ ಮಾಡಿದ ಯಶ್, ರಾಕಿ ಭಾಯ್ ಕೊಂಡಾಡಿದ ಡೇನಿಯಲ್ ಬಾಲಾಜಿ

    ನಟ ಡೇನಿಯಲ್ ಬಾಲಾಜಿ ತಮಿಳಿನಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ಬಾಲಾಜಿಗೆ ಟಾಲಿವುಡ್, ಕಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಾಗಿದೆ.

    MORE
    GALLERIES

  • 28

    Actor Yash: ತಮಿಳು ನಟನಿಗೆ ಧನಸಹಾಯ ಮಾಡಿದ ಯಶ್, ರಾಕಿ ಭಾಯ್ ಕೊಂಡಾಡಿದ ಡೇನಿಯಲ್ ಬಾಲಾಜಿ

    ವಡಚೆನ್ನೈ, ಪೊಲ್ಲದವನ್ ಮತ್ತು ವಡಚೆನ್ನೈ ಮುಂತಾದ ಚಿತ್ರಗಳಲ್ಲಿನ ಬಾಲಾಜಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರು ಧನುಷ್ ಅವರ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 38

    Actor Yash: ತಮಿಳು ನಟನಿಗೆ ಧನಸಹಾಯ ಮಾಡಿದ ಯಶ್, ರಾಕಿ ಭಾಯ್ ಕೊಂಡಾಡಿದ ಡೇನಿಯಲ್ ಬಾಲಾಜಿ

    ನಟ ಬಾಲಾಜಿ ತನ್ನ ತಾಯಿಯ ಆಸೆಯನ್ನು ಪೂರೈಸಲು ಅವಡಿಯಲ್ಲಿ ಅಂಗಲಾ ಪರಮೇಶ್ವರಿ ದೇವಾಲಯವನ್ನು ನಿರ್ಮಿಸಿದರು. ಈ ದೇವಾಲಯದ ನಿರ್ಮಾಣದ ವೇಳೆ ನಡೆದ ಒಂದು ಘಟನೆಯನ್ನು ನೆನಪು ಮಾಡಿಕೊಂಡ ಬಾಲಾಜಿ, ನಟ ಯಶ್ ಜೊತೆಗಿನ ಸ್ನೇಹದ ಬಗ್ಗೆ ಮಾತಾಡಿದ್ದಾರೆ.

    MORE
    GALLERIES

  • 48

    Actor Yash: ತಮಿಳು ನಟನಿಗೆ ಧನಸಹಾಯ ಮಾಡಿದ ಯಶ್, ರಾಕಿ ಭಾಯ್ ಕೊಂಡಾಡಿದ ಡೇನಿಯಲ್ ಬಾಲಾಜಿ

    ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತಾಡಿದ ಬಾಲಾಜಿ, 4 ವರ್ಷಗಳ ಹಿಂದೆ ಯಶ್ ಅವರಿಂದ ಸಿನಿಮಾದಲ್ಲಿ ನಟಿಸುವಂತೆ ಕರೆ ಬಂದಿತ್ತು. ಆ ಸಮಯದಲ್ಲಿ ನಾನು ದೇವಾಲಯದ ನಿರ್ಮಾಣದ ಕೆಲಸ ಮಾಡ್ತಿದ್ದೆ. ಮುಂದಿನ 20 ದಿನಗಳವರೆಗೆ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದ್ದೆ.

    MORE
    GALLERIES

  • 58

    Actor Yash: ತಮಿಳು ನಟನಿಗೆ ಧನಸಹಾಯ ಮಾಡಿದ ಯಶ್, ರಾಕಿ ಭಾಯ್ ಕೊಂಡಾಡಿದ ಡೇನಿಯಲ್ ಬಾಲಾಜಿ

    ನಾನು ಸಿನಿಮಾವನ್ನು ಒಪ್ಪಿಕೊಳ್ಳವ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ನಾನು ನಿರ್ಮಾಣ ಕಾರ್ಯವನ್ನು ಮೇಲ್ವಿಚಾರಣೆ ಮಾಡಬೇಕಾಗಿತ್ತು. ಯಶ್ ಜೊತೆ ನಟಿಸುವ ಮುನ್ನವೇ ನನ್ನ ಖಾತೆಗೆ ಹಣ ಜಮಾ ಆಗಿದೆ ಎಂಬ ಸಂದೇಶ ಬಂದಿತ್ತು. ಇದು ಯಶ್ ಅವರಿಂದಲೇ ಎಂದು ನನಗೆ ಗೊತ್ತಾಯ್ತು.

    MORE
    GALLERIES

  • 68

    Actor Yash: ತಮಿಳು ನಟನಿಗೆ ಧನಸಹಾಯ ಮಾಡಿದ ಯಶ್, ರಾಕಿ ಭಾಯ್ ಕೊಂಡಾಡಿದ ಡೇನಿಯಲ್ ಬಾಲಾಜಿ

    ನಿರ್ಮಾಪಕರನ್ನು ಭೇಟಿಯಾಗಿ ಅಗ್ರಿಮೆಂಟ್ ಬಗ್ಗೆ ಮಾತನಾಡದೆ ಹಣ ಏಕೆ ಕಳುಹಿಸಿದ್ದೀರಿ ಎಂದು ತಕ್ಷಣ ಕರೆ ಮಾಡಿ ಕೇಳಿದೆ. ನಾನು ಹಣ ಕಳುಹಿಸಿದ್ದು ದೇವಸ್ಥಾನಕ್ಕೆ ಬೇರೆ ಯಾವುದಕ್ಕೂ ಅಲ್ಲ ಎಂದ್ರು. ಅವರ ಔದಾರ್ಯ ಕಂಡು ನಾನು ಅಚ್ಚರಿಯಾಗಿದ್ದೆ ಎಂದು ಡೇನಿಯಲ್ ಬಾಲಾಜಿ ಹೇಳಿದ್ದಾರೆ.

    MORE
    GALLERIES

  • 78

    Actor Yash: ತಮಿಳು ನಟನಿಗೆ ಧನಸಹಾಯ ಮಾಡಿದ ಯಶ್, ರಾಕಿ ಭಾಯ್ ಕೊಂಡಾಡಿದ ಡೇನಿಯಲ್ ಬಾಲಾಜಿ

    ಅಮ್ಮನಿಗಾಗಿ ನಟ ಡೇನಿಯಲ್ ಬಾಲಾಜಿ ಕಟ್ಟಿಸುತ್ತಿದ್ದ ದೇವಾಲಯಕ್ಕೆ ಹಣ ಸಹಾಯ ಮಾಡಿದ ಯಶ್ ಕಾರ್ಯವನ್ನು ನೋಡಿ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶ್ ಅನೇಕ ಸಾಮಾಜ ಸೇವೆ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    MORE
    GALLERIES

  • 88

    Actor Yash: ತಮಿಳು ನಟನಿಗೆ ಧನಸಹಾಯ ಮಾಡಿದ ಯಶ್, ರಾಕಿ ಭಾಯ್ ಕೊಂಡಾಡಿದ ಡೇನಿಯಲ್ ಬಾಲಾಜಿ

    ಕೆಜಿಎಫ್ 2 ಸಿನಿಮಾ ಬಳಿಕ ಯಶ್ ಮುಂದಿನ ಸಿನಿಮಾ ಇನ್ನೂ ಅನೌನ್ಸ್ ಆಗಿಲ್ಲ. ತೆರೆ ಮೇಲೆ ಮತ್ತೆ ರಾಕಿ ಭಾಯ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಶೀಘ್ರವೇ ಯಶ್ ತನ್ನ ಮುಂದಿನ ಚಿತ್ರದ ಬಗ್ಗೆ ಅಪ್ಡೇಟ್ ನೀಡಲಿದ್ದಾರೆ ಎನ್ನಲಾಗ್ತಿದೆ.

    MORE
    GALLERIES