Actor Chethan: ಅಮೆರಿಕಾಗೆ ಹೋಗಲ್ಲ, ಇಲ್ಲಿಯೇ ಇರ್ತೀನಿ! ಕೇಂದ್ರ ಸರ್ಕಾರದಿಂದ ನಟ ಚೇತನ್ ವೀಸಾ ರದ್ದು

Actor Chethan: ನಟ ಚೇತನ್ ಅವರ ವೀಸಾ ರದ್ದುಗೊಳಿಸಲಾಗಿದ್ದು ಕೇಂದ್ರ ಸರ್ಕಾರ ಸ್ಯಾಂಡಲ್​ವುಡ್ ನಟನಿಗೆ ನೋಟಿಸ್ ಕಳುಹಿಸಿದೆ.

First published:

 • 110

  Actor Chethan: ಅಮೆರಿಕಾಗೆ ಹೋಗಲ್ಲ, ಇಲ್ಲಿಯೇ ಇರ್ತೀನಿ! ಕೇಂದ್ರ ಸರ್ಕಾರದಿಂದ ನಟ ಚೇತನ್ ವೀಸಾ ರದ್ದು

  ಸ್ಯಾಂಡಲ್​ವುಡ್ ಚಿತ್ರರಂಗದ ನಟ ಆದಿನಗಳು ಖ್ಯಾತಿಯ ನಟ ಚೇತನ್ ಅವರ ವಿಸಾವನ್ನು ಕೇಂದ್ರ ಸರ್ಕಾರ ರದ್ದು ಗೊಳಿಸಿರುವ ವಿಚಾರ ಈಗ ರಿವೀಲ್ ಆಗಿದೆ. ವಿಸಾ ರದ್ದಾಗಿರುವ ಬಗ್ಗೆ ಚೇತನ್ ಅವರಿಗೆ ಕೇಂದ್ರ ಗೃಹ ಇಲಾಖೆ ನೋಟಿಸ್ ಕೂಡಾ ಕಳುಹಿಸಿದೆ. ವಿಸಾ ರದ್ದಾಗಿರುವ ಬಗ್ಗೆ ನಟ ಚೇತನ್ ಸುದ್ದಿಗೋಷ್ಠಿ ಕರೆದಿದ್ದಾರೆ

  MORE
  GALLERIES

 • 210

  Actor Chethan: ಅಮೆರಿಕಾಗೆ ಹೋಗಲ್ಲ, ಇಲ್ಲಿಯೇ ಇರ್ತೀನಿ! ಕೇಂದ್ರ ಸರ್ಕಾರದಿಂದ ನಟ ಚೇತನ್ ವೀಸಾ ರದ್ದು

  23 ವರ್ಷ ನಾನು ಇದ್ದಿದ್ದು, ಓದಿದ್ದು ಅಮೆರಿಕಾದಲ್ಲಿ. ಆ ನಂತರ ಸೇವೆ ಸಲ್ಲಿಸಲು ಭಾರತಕ್ಕೆ ಬಂದೆ. ಆದಾದ ನಂತರ ಸಿನಿಮಾ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೋರಾಟ ಮಾಡಿ ಆದಿವಾಸಿಗಳಿಗಾಗಿ 528 ಮನೆಗಳನ್ನ ಕಟ್ಟಿಸಿದ್ದೇವೆ. ನಮ್ಮ ಸಿದ್ದಾಂತ, ಅಂಬೇಡ್ಕರ್ ವಾದ, ಪೆರಿಯರ್ ವಾದ ಸರ್ಕಾರಕ್ಕೆ ಇಷ್ಟವಾಗಿಲ್ಲ ಎಂದಿದ್ದಾರೆ.

  MORE
  GALLERIES

 • 310

  Actor Chethan: ಅಮೆರಿಕಾಗೆ ಹೋಗಲ್ಲ, ಇಲ್ಲಿಯೇ ಇರ್ತೀನಿ! ಕೇಂದ್ರ ಸರ್ಕಾರದಿಂದ ನಟ ಚೇತನ್ ವೀಸಾ ರದ್ದು

  ಬ್ರಹ್ಮಣ್ಯ ಲಾಭೀ ಎನ್ನುವ ಮಾತು ಹೇಳಿದ್ದಕ್ಕೆ 295A ಕೇಸ್ ಹಾಕಿದ್ದಾರೆ. ಗನ್​ಮ್ಯಾನ್​ನನ್ನು ಒಂದುವರೆ ವರ್ಷದ ಹಿಂದೆಯೇ ತೆಗೆದಿದ್ದಾರೆ. ಒಂದು ಸತ್ಯದ ಟ್ವೀಟ್ ಮಾಡಿದ್ದಕ್ಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಅಂತ ಮೂರು ದಿನ ಜೈಲಿಗೆ ಕಳಿಸಿದ್ದರು ಎಂದಿದ್ದಾರೆ.

  MORE
  GALLERIES

 • 410

  Actor Chethan: ಅಮೆರಿಕಾಗೆ ಹೋಗಲ್ಲ, ಇಲ್ಲಿಯೇ ಇರ್ತೀನಿ! ಕೇಂದ್ರ ಸರ್ಕಾರದಿಂದ ನಟ ಚೇತನ್ ವೀಸಾ ರದ್ದು

  OcI(ಒವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ )ನನಗೆ ನೀಡಿದ್ದಾರೆ. ಇದರಲ್ಲಿ ಮತ ಹಾಕೋದು, ಚುನಾವಣೆ ನಿಲ್ಲುವುದು, ಸರ್ಕಾರಿ ನೌಕರನಾಗಿ ಕೆಲಸ ಮಾಡೋದು ಬಿಟ್ಟರೆ ಎಲ್ಲ ಹಕ್ಕು ನನಗೆ ಇದೆ ಎಂದಿದ್ದಾರೆ. ನೀವು ತುಂಬ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೀರಿ. ಆದರಿಂದ ನಿಮ್ಮ ವೀಸಾ ಯಾಕೆ ರದ್ದು ಮಾಡಬಾರದು ಅಂತ 10 ತಿಂಗಳ ಹಿಂದೆ(ಜೂನ್ 8 22) ಶೋಕಾಸ್ ನೋಟೀಸ್ ನೀಡಿದ್ದರು ಎಂದಿದ್ದಾರೆ.

  MORE
  GALLERIES

 • 510

  Actor Chethan: ಅಮೆರಿಕಾಗೆ ಹೋಗಲ್ಲ, ಇಲ್ಲಿಯೇ ಇರ್ತೀನಿ! ಕೇಂದ್ರ ಸರ್ಕಾರದಿಂದ ನಟ ಚೇತನ್ ವೀಸಾ ರದ್ದು

  ಆಗ ಗೃಹ ಇಲಾಖೆಗೆ ಹೋಗಿ ಎಲ್ಲ ದಾಖಲೆ ಸಲ್ಲಿಸಿ ಬಂದಿದ್ದೆ. ನಿನ್ನೆ ಮತ್ತೆ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಾ ಅಂತ ವೀಸಾ ರದ್ದು ನೋಟೀಸ್ ನೀಡಿದ್ದಾರೆ. ದೇಶವಿರೋಧಿ ಚುಟುವಟಿಕೆಯಲ್ಲಿ ನಾನು ಎಲ್ಲಿ ಭಾಗಿಯಾಗಿದ್ದೇನೆ? ಉದ್ದೇಶಪೂರ್ವಕವಾಗಿ ನನ್ನ ಮೇಲೆ ಈ ರೀತಿ ಪಿತೂರಿ ಮಾಡುತ್ತಿದ್ದಾರೆ ಎಂದಿದ್ದಾರೆ.

  MORE
  GALLERIES

 • 610

  Actor Chethan: ಅಮೆರಿಕಾಗೆ ಹೋಗಲ್ಲ, ಇಲ್ಲಿಯೇ ಇರ್ತೀನಿ! ಕೇಂದ್ರ ಸರ್ಕಾರದಿಂದ ನಟ ಚೇತನ್ ವೀಸಾ ರದ್ದು

  ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದುಗೊಳಿಸಿದ್ದಾರೆ. ವಾಕ್ ಸ್ವಾತಂತ್ರವನ್ನ ಕಿತ್ತುಹಾಕುವುದಲ್ಲದೇ,ಜೈಲಿಗೆ ಹಾಕುವುದಲ್ಲದೇ ನನ್ನನ್ನು ದೇಶದಲ್ಲೂ ಇರಬಾರದು ಅಂತ ವೀಸಾ ರದ್ದು ಮಾಡಿದ್ದಾರೆ ಎಂದಿದ್ದಾರೆ. ನಾನು ಲಾಯರ್ ಬಳಿ ಮಾತನಾಡಿದ್ದೇನೆ. ಇದಕ್ಕೆ ವಿರುದ್ದವಾಗಿ ಸ್ಟೇ ತರುತ್ತೇನೆ, ನಾನು ಕಾನೂನಿನ ಹೋರಾಟ ಮಾಡುತ್ತೇನೆ. ನನಗೆ 15 ದಿನದವರೆಗೆ ಟೈಂ ಕೊಟ್ಟಿದ್ದಾರೆ. 15 ದಿನದೊಳಗೆ ನಾನು ಸ್ಟೇ ತರುತ್ತೇನೆ ಎಂದಿದ್ದಾರೆ.

  MORE
  GALLERIES

 • 710

  Actor Chethan: ಅಮೆರಿಕಾಗೆ ಹೋಗಲ್ಲ, ಇಲ್ಲಿಯೇ ಇರ್ತೀನಿ! ಕೇಂದ್ರ ಸರ್ಕಾರದಿಂದ ನಟ ಚೇತನ್ ವೀಸಾ ರದ್ದು

  ಭಾರತದಲ್ಲಿ 18 ವರ್ಷದಿಂದ ಇದ್ದೇನೆ. ಜಾನಪದ ರಂಗಭೂಮಿ ಮತ್ತು ಅದರಿಂದ ಸಾಮಾಜಿಕ ಬದಲಾವಣೆ ಎನ್ನುವ ವಿಚಾರ ಮೇಲೆ ರಿಸರ್ಚ್ ಗ್ರಾಂಡ್ ತೆಗೆದುಕೊಂಡು ಭಾರತಕ್ಕೆ 2005 ರಲ್ಲಿ ಬಂದೆ. 2015 ರಲ್ಲಿ ಪೂರ್ಣಪ್ರಮಾಣದಲ್ಲಿ ಭಾರತದಲ್ಲಿಯೇ ಇದ್ದೇನೆ. ನನ್ನ ತಂದೆ ಮತ್ತು ತಾಯಿ ಭಾರತದವರೆ ಆಗಿರೋದು 2018 ರಲ್ಲಿ OCI ಕೊಟ್ಟರು ಎಂದಿದ್ದಾರೆ.

  MORE
  GALLERIES

 • 810

  Actor Chethan: ಅಮೆರಿಕಾಗೆ ಹೋಗಲ್ಲ, ಇಲ್ಲಿಯೇ ಇರ್ತೀನಿ! ಕೇಂದ್ರ ಸರ್ಕಾರದಿಂದ ನಟ ಚೇತನ್ ವೀಸಾ ರದ್ದು

  ಆದರ ಜೊತೆಗೆ ನನ್ನ ಬಳಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ ಎಲ್ಲವೂ ಇದೆ. ನಾನು ಕೂಡ ಟ್ಯಾಕ್ಸ್ ಇದೇ ದೇಶಕ್ಕೆ ಕಟ್ಟುತ್ತೇನೆ. ಈಗ ತಕ್ಷಣವೇ OCI ರದ್ದು ಮಾಡಿದ್ದೇನೆ ಅಂತ ನೋಟೀಸ್ ನೀಡಿದ್ದಾರೆ. ಇದರಲ್ಲಿ ಯಾವುದೇ ಅರ್ಥ ಇಲ್ಲ. ನಾನು ಇದೇ ದೇಶದವನು, ನನಗೆ ಅಮೆರಿಕಕ್ಕೆ ಹೋಗುವ ಮನಸ್ಸಿಲ್ಲ ಎಂದಿದ್ದಾರೆ.

  MORE
  GALLERIES

 • 910

  Actor Chethan: ಅಮೆರಿಕಾಗೆ ಹೋಗಲ್ಲ, ಇಲ್ಲಿಯೇ ಇರ್ತೀನಿ! ಕೇಂದ್ರ ಸರ್ಕಾರದಿಂದ ನಟ ಚೇತನ್ ವೀಸಾ ರದ್ದು

  ಇತ್ತೀಚಿನ ದಿನಗಳಲ್ಲಿ ಚೇತನ್ ಕುಮಾರ್ ಅವರ ಬಗ್ಗೆ ಹಲವಾರು ಅಪ್ಡೇಟ್​ಗಳು ಬರುತ್ತಲೇ ಇವೆ. ಕಾಂತಾರ ಸಿನಿಮಾದ ಆರಂಭದಿಂದಲೇ ಮಾತನಾಡಲಾರಂಭಿಸಿದ ನಟ ಹಲವಾರು ವಿವಾದಾತ್ಮಕ ಹೇಳಿಕೆ ಕೊಡುತ್ತಲೇ ಬಂದಿದ್ದಾರೆ.

  MORE
  GALLERIES

 • 1010

  Actor Chethan: ಅಮೆರಿಕಾಗೆ ಹೋಗಲ್ಲ, ಇಲ್ಲಿಯೇ ಇರ್ತೀನಿ! ಕೇಂದ್ರ ಸರ್ಕಾರದಿಂದ ನಟ ಚೇತನ್ ವೀಸಾ ರದ್ದು

  ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಬಿಜೆಪಿ ಪರ ಬೊಮ್ಮಾಯಿ ಅವರಿಗೆ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿ ಪ್ರಕಾಶ್ ರೈ ಕಿಚ್ಚ ಅವರನ್ನು ಟೀಕಿಸಿದ್ದರು.

  MORE
  GALLERIES