ಲಕ್ಷ್ಮಿ ಬಾರಮ್ಮ ಖ್ಯಾತಿಯ ಕವಿತಾ ಗೌಡ-ಚಂದನ್ ಕುಮಾರ್ ಅವರು ಹೊಸ ಹೋಟೆಲ್ ಓಪೆನ್ ಮಾಡಿದ್ದಾರೆ. ಮೈಸೂರು ರೋಡ್ ಮಂಡಿಪೇಟೆ ಪಲಾವ್ ಅಂತ.
2/ 8
ಕವಿತಾ ಗೌಡ ಮತ್ತು ಚಂದನ್ ಕುಮಾರ್ ಅವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯಿಂದ ಖ್ಯಾತಿ ಪಡೆದಿದ್ದರು. ಇಬ್ಬರ ಸ್ನೇಹ , ಪ್ರೀತಿಯಾಗಿ ಮದುವೆಯಾಗಿದ್ದಾರೆ.
3/ 8
ಖುಷಿ ಖುಷಿಯಿಂದ ಜೀವನ ಸಾಗಿರುತ್ತಿರುವ ಜೋಡಿ, ಮತ್ತೊಂದು ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಮೈಸೂರು ಮಂಡಿಪೇಟೆ ಹೋಟೆಲ್ ಆರಂಭ ಮಾಡಿದ್ದಾರೆ.
4/ 8
ಮೈಸೂರು ಮಂಡಿಪೇಟೆ ಹೋಟೆಲ್ ಉದ್ಘಾಟನೆ ಕಾರ್ಯಕ್ರಮಕ್ಕೆ ಆಪ್ತರು ಬಂದಿದ್ದರು. ಇಬ್ಬರ ಉದ್ಯಮಕ್ಕೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.
5/ 8
ಹೋಟೆಲ್ ಉದ್ಘಾಟನೆ ದಿನ ಕವಿತಾ ಗೌಡ ಅವರೇ ತಮ್ಮ ಕೈಯಿಂದ ಟೀ ಮಾಡಿ ಎಲ್ಲರಿಗೂ ಕೊಟ್ಟಿದ್ದಾರೆ. ಇಬ್ಬರು ತುಂಬಾ ಖುಷಿಯಾಗಿದ್ದಾರೆ.
6/ 8
ಚಂದನ್ ಕುಮಾರ್ ನಟನೆಯ ಜೊತೆ ಹೋಟೆಲ್ ಉದ್ಯಮದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಬಿರಿಯಾನಿ ಹೋಟೆಲ್ನಲ್ಲಿ ಸ್ಯಾಂಡಲ್ವುಡ್ ನಟರಿಂದ ತೊಡಗಿ ರಾಜಕೀಯ ಮುಖಂಡರೂ ಬಿರಿಯಾನಿ ಸವಿದಿದ್ದಾರೆ.
7/ 8
ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು. ಈಗ ಮೈಸೂರು ರೋಡ್ನಲ್ಲಿ ಮಡಿಪೇಟೆ ಪಲಾವ್ ಎಂಬ ಹೋಟೆಲ್ ತೆರೆದಿದ್ದಾರೆ.
8/ 8
ಕಳೆದ ಕೆಲ ದಿನಗಳ ಹಿಂದೆ ಚಂದನ್ ಅವರ ಬಿರಿಯಾನಿ ಹೋಟೆಲ್ ನಲ್ಲಿ ಕಳ್ಳತನವಾಗಿತ್ತು. ಈಗ ಮತ್ತಷ್ಟು ಭದ್ರತೆ ಒದಗಿಸಿದ್ದಾರೆ. ಚಂದನ್ ಅವರ ಉದ್ಯಮಕ್ಕೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.