Aditi Sagar: ಕನಕ ಆಗಿ ಪ್ರೇಕ್ಷಕರ ಮನ ಗೆದ್ದ ಅರುಣ್ ಸಾಗರ್ ಪುತ್ರಿ! ಅದ್ಭುತ ಅಭಿನಯ ಎಂದ ಅಭಿಮಾನಿಗಳು
ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ವೇದ ಚಿತ್ರದಲ್ಲಿ ಕನಕ ಆಗಿ ಪಾತ್ರ ನಿರ್ವಹಿಸಿದ್ದಾರೆ. ಅದಿತಿ ಅಭಿನಯ ಎಲ್ಲರಿಂದ ಮೆಚ್ಚುಗೆ ಗಳಿಸಿದೆ. ಇನ್ನಷ್ಟು ಒಳ್ಳೆಯ ಪಾತ್ರಗಳನ್ನು ಮಾಡುವುದಾಗಿ ಅದಿತಿ ಸಾಗರ್ ತಿಳಿಸಿದ್ದಾರೆ.
ನಟ ಮತ್ತು ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಶಿವರಾಜಕುಮಾರ್ ಅವರ 125 ನೇ ಚಿತ್ರವಾದ ವೇದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ.
2/ 8
ವೇದ ಚಿತ್ರದಲ್ಲಿ ಶಿವಣ್ಣನ ಮಗಳು ಕನಕ ಪಾತ್ರವನ್ನು ಅದಿತಿ ನಿರ್ವಹಿಸಿದ್ದಾರೆ. ಅದಿತಿ ಅದ್ಭುತ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ವಾವ್ ಎಂದು ಹೇಳಿದ್ದಾರೆ.
3/ 8
ಅದಿತಿಗೆ ಚೊಚ್ಚಲ ಸಿನಿಮಾ ರೋಮಾಂಚನಗೊಳಿಸುತ್ತಿದೆ ಎಂದಿದ್ದಾರೆ. ತನ್ನ ಅಭಿನಯ ಮೆಚ್ಚಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ಅನ್ಯಾಯದ ವಿರುದ್ಧ ಹೋರಾಟ ಹಾದಿ ಸಿನಿಮಾದಲ್ಲಿ ಇದೆ.
4/ 8
ರಾಂಬೋ 2 ಚಿತ್ರದ ಧಮ್ ಮಾರೋ ಧಮ್ ಮೂಲಕ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿದರು. ಮೊದಲ ಹಾಡಿನಲ್ಲಿಯೇ ಅದಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತು. ಈ ಚಿತ್ರದ ಹಾಡನ್ನು ಕೇಳಿದವರು ಅದಿತಿ ಧ್ವನಿಗೆ ಅಭಿಮಾನಿಗಳಾಗಿದ್ದಾರೆ.
5/ 8
2019ರಲ್ಲಿ ಕಾವಲುದಾರಿ ಸಿನಿಮಾದ ಸಂಶಯ ಹಾಡನ್ನು ಹಾಡಿದರು. ಬಳಿಕ ಪ್ರೆಂಚ್ ಬಿರಿಯಾನಿ ಸಿನಿಮಾದ 'ಬೆಂಗಳೂರು ರ್ಯಾಪ್ ಸಾಂಗ್' ಬಹಳ ಫೇಮಸ್ ಆಯಿತು.
6/ 8
ಜುಲೈ 15, 2005 ರಂದು ಜನಿಸಿದ ಅದಿತಿ ಸಾಗರ್, ಅಪ್ಪಟ ಕನ್ನಡದ ಪ್ರತಿಭೆ. ಅಪ್ಪನಂತೆ ಮಗಳಿಗೂ ದೊಡ್ಡ ಕಲಾವಿದೆ ಆಗಬೇಕು ಎಂಬ ಆಸೆ ಇದೆ.
7/ 8
ಕೆಜಿಎಫ್ ಪ್ರಮೋಷನಲ್ (The Monster Song) ಹಾಡಿಗೆ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಅವರು ಸಾಹಿತ್ಯ ಬರೆದು, ಧ್ವನಿ ನೀಡಿದ್ದಾರೆ. ಇದು ಸಹ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.
8/ 8
ಅರುಣ್ ಸಾಗರ್ ಪುತ್ರಿ ಕನಕ ಆಗಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಇನ್ನಷ್ಟು ಒಳ್ಳೆಯ ಪಾತ್ರಗಳನ್ನು ಮಾಡುವುದಾಗಿ ಅದಿತಿ ಸಾಗರ್ ತಿಳಿಸಿದ್ದಾರೆ.