Actor Ajith: BMW ಸೂಪರ್ ಬೈಕ್ ಗಿಫ್ಟ್! ತನ್ನ ರೈಡ್ಸ್ ಆಯೋಜಿಸಿದ ವ್ಯಕ್ತಿಗೆ ಅಜಿತ್ ಉಡುಗೊರೆ

Ajith: ಕಾಲಿವುಡ್ ನಟ ಅಜಿತ್​ಗೆ ಬೈಕ್ ರೈಡ್ ಎಂದರೆ ಭಾರೀ ಇಷ್ಟ. ನಟನ ಬೈಕ್ ರೈಡ್​ಗಳನ್ನು ಆಯೋಜಿಸುವ ವ್ಯಕ್ತಿಗೆ ಈಗ ಬಂಪರ್ ಉಡುಗೊರೆ ಸಿಕ್ಕಿದೆ.

First published:

 • 18

  Actor Ajith: BMW ಸೂಪರ್ ಬೈಕ್ ಗಿಫ್ಟ್! ತನ್ನ ರೈಡ್ಸ್ ಆಯೋಜಿಸಿದ ವ್ಯಕ್ತಿಗೆ ಅಜಿತ್ ಉಡುಗೊರೆ

  ಕಾಲಿವುಡ್ ನಟ ಅಜಿತ್ ಕುಮಾರ್ ಅವರು ಇತ್ತೀಚೆಗೆ ದೇಶಾದ್ಯಂತ ಬೈಕಿಂಗ್ ಎಕ್ಸ್​ಪೆಡಿಷನ್ ಭಾಗವಾಗಿ ರೈಡಿಂಗ್ ಹೋಗಿದ್ದರು. ಭಾರತದ ಹೊರತಾಗಿ ಅವರು ನೇಪಾಳ, ಭೂತಾನ್, ಯುರೋಪನ್​ನಲ್ಲಿಯೂ ಬೈಕ್ ರೈಡ್ ಮಾಡಿ ಬಂದಿದ್ದಾರೆ. ನಟ ನವೆಂಬರ್​ನಲ್ಲಿ ಇನ್ನೊಂದು ಬೈಕ್ ಟೂರ್ ಹೋಗಲಿದ್ದಾರೆ.

  MORE
  GALLERIES

 • 28

  Actor Ajith: BMW ಸೂಪರ್ ಬೈಕ್ ಗಿಫ್ಟ್! ತನ್ನ ರೈಡ್ಸ್ ಆಯೋಜಿಸಿದ ವ್ಯಕ್ತಿಗೆ ಅಜಿತ್ ಉಡುಗೊರೆ

  ಈ ಸಂದರ್ಭ ಅವರು ತಮ್ಮ ಜೊತೆ ರೈಡ್ ಮಾಡುವಂತಹ ಸುಗತ್ ಸತ್ಪತಿ ಅವರಿಗೆ ಸೂಪರ್​ಬೈಕ್ ಗಿಫ್ಟ್ ಮಾಡಿದ್ದಾರೆ. ಇದರ ಬೆಲೆ ಬರೋಬ್ಬರಿ 12.5 ಲಕ್ಷ ರೂಪಾಯಿ. ಸುಗತ್ ಅವರು ಅಜಿತ್ ಅವರ ಇತ್ತೀಚಿನ ನೇಪಾಳ ಬೈಕ್ ರೈಡ್ ಆಯೋಜಿಸಿದ್ದರು. ಇದಕ್ಕೆ ಗಿಪ್ಟ್ ಆಗಿ ನಟ ಬಿಎಂಡಬ್ಲ್ಯೂ ಬೈಕ್ ಗಿಫ್ಟ್ ಮಾಡಿದ್ದಾರೆ.

  MORE
  GALLERIES

 • 38

  Actor Ajith: BMW ಸೂಪರ್ ಬೈಕ್ ಗಿಫ್ಟ್! ತನ್ನ ರೈಡ್ಸ್ ಆಯೋಜಿಸಿದ ವ್ಯಕ್ತಿಗೆ ಅಜಿತ್ ಉಡುಗೊರೆ

  ಈ ತಿಂಗಳ ಆರಂಭದಲ್ಲಿ ಅಜಿತ್ ಅವರು ಭಾರತದಲ್ಲಿ ಬೈಕ್ ಟೂರ್ ಮುಗಿಸಿದ್ದರು. ನಂತರ ನೇಪಾಳ ಹಾಗೂ ಭೂತಾನ್ ಸುತ್ತಿದರು. ಸುಗತ್ ಸತ್ಪತಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ತಾವು ಎರಡು ಬಾರಿ ಅಜಿತ್ ಅವರ ಬೈಕ್ ಟೂರ್ ಆಯೋಜಿಸಿದ್ದಾಗಿ ತಿಳಿಸಿದ್ದರು. ಇತ್ತೀಚೆಗೆ ನಟ 12.5 ಲಕ್ಷದ ಬಿಎಂಡಬ್ಲ್ಯೂ ಸೂಪರ್ ಬೈಕ್ಗ ಗಿಫ್ಟ್ ಮಾಡಿದ್ದಾರೆಂದು ಅವರು ತಿಳಿಸಿದ್ದರು.

  MORE
  GALLERIES

 • 48

  Actor Ajith: BMW ಸೂಪರ್ ಬೈಕ್ ಗಿಫ್ಟ್! ತನ್ನ ರೈಡ್ಸ್ ಆಯೋಜಿಸಿದ ವ್ಯಕ್ತಿಗೆ ಅಜಿತ್ ಉಡುಗೊರೆ

  2022ರಲ್ಲಿ ಕೊನೆಯ ಅವಧಿಯಲ್ಲಿ ನಾನು ಸೂಪರ್ ಲಕ್ಕಿಯಾದೆ. ನನಗೆ ಅಜಿತ್ ಕುಮಾರ್ ಅವರ ಜೊತೆ ಸಂಪರ್ಕ ಸಿಕ್ಕಿತು, ತಮಿಳು ಇಂಡಸ್ಟ್ರಿಯ ಸೂಪರ್​ಸ್ಟಾರ್ ಇವರು. ಹಾಗೆಯೇ ಬೈಕ್ ರೈಡರ್ ಕೂಡಾ ಹೌದು. ನಂತರ ನಾನು ಅವರಿಗಾಗಿ ಕಂಪ್ಲೀಟ್ ಈಶಾನ್ಯ ಕಡೆ ನನ್ನ ಡ್ಯೂಕ್ 390ಯಲ್ಲಿ ಬೈಕ್ ರೈಡ್ ಆಯೋಜಿಸಿದೆ.

  MORE
  GALLERIES

 • 58

  Actor Ajith: BMW ಸೂಪರ್ ಬೈಕ್ ಗಿಫ್ಟ್! ತನ್ನ ರೈಡ್ಸ್ ಆಯೋಜಿಸಿದ ವ್ಯಕ್ತಿಗೆ ಅಜಿತ್ ಉಡುಗೊರೆ

  ಈ ಬೈಕ್ ರೈಡ್ ನಂತರ ನಟ ತಾವು ನೇಪಾಳ ಹಾಗೂ ಭೂತಾನ್​ಗೆ ನನ್ನೊಂದಿಗೆ ಬರುವುದಾಗಿ ತಿಳಿಸಿದರು. ಅದನ್ನು ನಾವು ಮೇ 6ಕ್ಕೆ ಮುಗಿಸಿದೆವು. ಈ ರೈಡ್​ನಲ್ಲಿ ಸಾಕಷ್ಟು ಮರೆಯಲಾಗದ ನೆನಪುಗಳನ್ನು ಪಡೆದಿದ್ದೇವೆ. ಹಲವಾರು ಸುಂದರ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನವನ್ನು ನೋಡಿದ್ದೇವೆ ಎಂದಿದ್ದಾರೆ.

  MORE
  GALLERIES

 • 68

  Actor Ajith: BMW ಸೂಪರ್ ಬೈಕ್ ಗಿಫ್ಟ್! ತನ್ನ ರೈಡ್ಸ್ ಆಯೋಜಿಸಿದ ವ್ಯಕ್ತಿಗೆ ಅಜಿತ್ ಉಡುಗೊರೆ

  ಈ ಎಫ್850ಜಿಎಸ್ ಇಲ್ಲಿದೆ. ಇದು ಬೈಕ್​ ಮಾತ್ರವಲ್ಲ ನನಗೆ ಹೆಚ್ಚು ಆಪ್ತವಾದದ್ದು. ಇದನ್ನು ಅಜಿತ್ ಗಿಫ್ಟ್ ಮಾಡಿದ್ದಾರೆ. ಹೌದು. ಇದೊಂದು ಗಿಫ್ಟ್, ಅಣ್ಣನಿಂದ ನನಗೆ ಬಂದಿರುವ ಪ್ರೀತಿ ತುಂಬಿದ ಉಡುಗೊರೆ. ಅವರು ಎರಡು ಬಾರಿ ಯೋಚಿಸುವುದಿಲ್ಲ. ಅವರು ನಾನು ಈ ಬೈಕ್ ಹೊಂದಿರಬೇಕೆಂದು ಬಯಸಿದರು, ಮತ್ತು ಕೊಡಿಸಿದರು ಎಂದಿದ್ದಾರೆ.

  MORE
  GALLERIES

 • 78

  Actor Ajith: BMW ಸೂಪರ್ ಬೈಕ್ ಗಿಫ್ಟ್! ತನ್ನ ರೈಡ್ಸ್ ಆಯೋಜಿಸಿದ ವ್ಯಕ್ತಿಗೆ ಅಜಿತ್ ಉಡುಗೊರೆ

  ಇದು ಜಗತ್ತನ್ನೇ ಸುತ್ತಬಲ್ಲ ಸಾಮರ್ಥ್ಯ ಹೊಂದಿದೆ. ನಾವು ಒಂದೇ ರೀತಿ ವೈಬ್ ಮಾಡುತ್ತೇವೆ. ಅವರು ನನಗೆ ಹಿರಿಯಣ್ಣನಂತೆಯೇ ಇದ್ದಾರೆ. ಎಲ್ಲವೂ ಒಳ್ಳೆಯದಾಗಲಿ ಎಂದು ಬಯಸುವ ವ್ಯಕ್ತಿ. ನೀವು ಬೆಸ್ಟ್ ಅಣ್ಣ ಎಂದು ಬರೆದಿದ್ದಾರೆ.

  MORE
  GALLERIES

 • 88

  Actor Ajith: BMW ಸೂಪರ್ ಬೈಕ್ ಗಿಫ್ಟ್! ತನ್ನ ರೈಡ್ಸ್ ಆಯೋಜಿಸಿದ ವ್ಯಕ್ತಿಗೆ ಅಜಿತ್ ಉಡುಗೊರೆ

  ಈ ಬೈಕ್ ಬೆಲೆ ಸುಮಾರು 12.5 ಲಕ್ಷ ರೂಪಾಯಿ ಇದೆ. ನಟ ಕೊನೆಯಬಾರಿಗೆ ತುನಿವು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ನಟ ವಿದಾಮುಯರ್ಚಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  MORE
  GALLERIES