Dhruva Sarja: ಬ್ರೈನ್ ಡೆಡ್ ಆದ ಅಭಿಮಾನಿಯ ಅಂಗಾಂಗ ದಾನ, ಆಸ್ಪತ್ರೆಗೆ ಓಡೋಡಿ ಬಂದ ಧ್ರುವ ಸರ್ಜಾ
ನಟ ಧ್ರುವ ಸರ್ಜಾ ಅವರು ಆಸ್ಪತ್ರೆಗೆ ದಾಖಲಾಗಿರುವ ತಮ್ಮ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
- News18 Kannada
- |
- | Bangalore [Bangalore], India
1/ 7
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಆಭಿಮಾನಿಗೆ ಅಪಘಾತ ಆಗಿರುವ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ.
2/ 7
ಫೆಬ್ರವರಿ 14 ರಂದು ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಅಪಘಾತ ನಡೆದಿತ್ತು. ಗಾಯಳು ಅಭಿಮಾನಿಯನ್ನ ನೋಡಲು ಧ್ರುವ ಸರ್ಜಾ ಅವರು ಆಸ್ಪತ್ರೆಗೆ ಭೇಟಿಕೊಟ್ಟಿದ್ದಾರೆ.
3/ 7
ಅಭಿಮಾನಿ ಪೃಥ್ವಿರಾಜ್ ಬೈಕ್ನಿಂದ ಬಿದ್ದು ಹೆಲ್ಮೆಟ್ ಇಲ್ಲದ ಕಾರಣ ತಲೆಗೆ ಗಂಭೀರ ಗಾಯವಾಗಿದೆ. ತಲೆಗೆ ಪೆಟ್ಟು ಬಿದ್ದ ಕಾರಣ ಧ್ರುವ ಅಭಿಮಾನಿ ಬೈನ್ ಡೆಡ್ ಎಂದು ಹೇಳಲಾಗಿದೆ.
4/ 7
ಬ್ರೈನ್ ಡೆಡ್ ಅಗಿರುವುದರಿಂದ ಬದುಕೊ ಸಾಧ್ಯತೆ ಕಡಿಮೆ ಎನ್ನಲಾಗಿದ್ದು ಧ್ರುವ ಅಭಿಮಾನಿ ದೇಹದ ಅಂಗಾಗಗಳನ್ನು ದಾನ ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ.
5/ 7
ಬೆಂಗಳೂರಿನ ಎಂ.ಎಸ್.ರಾಮಯ್ಯ ಮೇಮೊರಿಯಲ್ ಆಸ್ಪತ್ರೆಯಲ್ಲಿ ಧ್ರುವ ಅಭಿಮಾನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೃಥ್ವಿರಾಜ್ ಧ್ರುವ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.
6/ 7
ಧ್ರುವ ಸರ್ಜಾ ಅವರನ್ನು ನೋಡುವುದು ಅವರ ಕೊನೆ ಯಾಸೆಯಾಗಿತ್ತು. ಅಭಿಮಾನಿಗೆ ಆಕ್ಸಿಡೆಂಟ್ ಆದ ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ಕೊಟ್ಟ ಧ್ರುವ ಕುಟುಂಬಸ್ಥರೊಂದಿಗೆ ಮಾತನಾಡಿದ್ದಾರೆ.
7/ 7
ಧ್ರುವ ಅವರ ಕೆಡಿ ಹಾಗೂ ಮಾರ್ಟಿನ್ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ನಟ ಕೂಡಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
First published: