Abir India ಸಂಘಟನೆ ಆಯೋಜಿಸಿದ ಐದನೇ ಆವೃತ್ತಿಯ ಫಸ್ಟ್ ಟೇಕ್ ಉತ್ಸವಕ್ಕೆ ದೇಶಾದ್ಯಂತ 2500 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳ ಪೈಕಿ 122 ಮಂದಿಯನ್ನ ಶಾರ್ಟ್ ಲಿಸ್ಟ್ ಮಾಡಲಾಯಿತು. ಅಂತಿಮವಾಗಿ ಪಶ್ಚಿಮ ಬಂಗಾಳದ ಅಸಿಮ್ ಇಮ್ರಾನ್, ಪುಣೆಯ ಕಿನ್ನರಿ ತೋಂಡೇಲ್ಕರ್ ಸೇರಿದಂತೆ ಹತ್ತು ಜನರನ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಇವರಿಗೆ ಪ್ರಶಸ್ತಿ ಫಲಕದ ಜೊತೆಗೆ 50,000 ರೂ ಮೌಲ್ಯದ ಉಡುಗೊರೆಗಳನ್ನ ಪ್ರದಾನ ಮಾಡಲಾಯಿತು. ಕೆಎಸ್ ರಾಧಾಕೃಷ್ಣನ್, ಆರ್ ಎಂ ಪಳನಿಯಪ್ಪನ್, ವಾಸುದೇವನ್ ಅಕ್ಕಿದಮ್, ಕ್ರಿಸ್ಟಿನ್ ಮೈಕೇಲ್ ಮತ್ತು ಹಾರ್ಟ್ಮಟ್ ವರ್ಸ್ಟರ್ ಅವರು ಪ್ರಶಸ್ತಿಗೆ ಯುವ ಕಲಾವಿದರನ್ನ ಆಯ್ಕೆ ಮಾಡಲು ರಚಿಸಲಾಗಿದ್ದ ತೀರ್ಪುಗಾರರ ಮಂಡಳಿ ಸದಸ್ಯರಾಗಿದ್ದರು. ಮಿಕ್ಸೆಡ್ ಮೀಡಿಯಾ, ಲೈನೋಕಟ್ಸ್, ಅಕ್ರೈಲಿಕ್ ಪೇಂಟಿಂಗ್ ಮೊದಲಾದ ಕಲಾ ಕ್ಷೇತ್ರದಲ್ಲಿ ಕಲಾವಿದರು ಈ ಫಸ್ಟ್ ಟೇಕ್ 2021 ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. (File Photo)
ಪಶ್ಚಿಮ ಬಂಗಾಳದ ಅಸಿಮ್ ಇಮ್ರಾನ್ ಅವರು ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಪಶ್ಚಿಮ ಬಂಗಾಳದಲ್ಲಿ ಭಯ ಮತ್ತು ಕುತೂಹಲದಿಂದ ಇದ್ದ ಜನರ ಪರಿಸ್ಥಿತಿಯನ್ನು ಬಿಂಬಿಸುವಂಥ ಪೇಂಟಿಂಗ್ ಅನ್ನು ಇವರು ರಚಿಸಿದ್ದಾರೆ. ಮಹಾರಾಷ್ಟ್ರದ ಕಿನ್ನರಿ ತೋಂಡೇಲ್ಕರ್ ಅವರು ಒಂದು ಪುಟ್ಟ ಪಟ್ಟಣದಿಂದ ಆರಂಭಿಸಿ ದೊಡ್ಡ ನಗರದವರೆಗೆ ತಮ್ಮ ಬದುಕಿನ ಪಯಣವನ್ನು ಕಲೆಯ ಮೂಲಕ ಅವರು ಬಿಂಬಿಸಿದ್ದಾರೆ. ನಾವು ವಾಸಿಸುವ ಮನೆ ನಮ್ಮ ನಗರದ ಪ್ರತಿಬಿಂಬವಾಗಿರುತ್ತವೆ ಎಂಬುದು ಅವರ ಭಾವನೆ. (File Photo)
ಜಿತಿನ್ ಜಯಕುಮಾರ್, ಕೇರಳ: ಲುಕ್ ಅಹೆಡ್ ಹೆಸರಿನ ಇದು ಶಿಲಾ ಕಸೂತಿಯ ಕಲೆ. ಈ ಭೂಮಿಯ ಮೇಲೆ ಬದುಕಲು ನಡೆಯುವ ಹೋರಾಟ ಮತ್ತು ಸಂಘರ್ಷಗಳನ್ನ ತಮ್ಮ ಕಲೆಯಲ್ಲಿ ಅವರು ಬಿಂಬಿಸಿದ್ಧಾರೆ. ಧಾರ್ಮಿಕ ಆಚರಣೆಯಲ್ಲಿ ಪ್ರಾಣಿಗಳ ಬಳಕೆ, ಆಧುನಿಕ ಜಗತ್ತಿನ ಸ್ವಾರ್ಥ, ಸಾಮುದಾಯಿಕ ನಿಯಮಾವಳಿಗಳು, ಬಡ ಬಲ್ಲಿದರ ನಡುವಿನ ಅಂತರ ಇತ್ಯಾದಿಯ ದ್ವಂದ್ವಗಳನ್ನ ಈ ಚಿತ್ರದಲ್ಲಿ ಇಣುಕಿ ನೋಡಬಹುದಾಗಿದೆ.
ಶುಭಾಂಕರ್ ಚಂದೆರೆ, ಮಹಾರಾಷ್ಟ್ರ: ಬಣ್ಣಗಳೊಂದಿಗೆ ಆಡುವ ಈ ಕಲಾ ಪ್ರತಿಭೆ ತಮ್ಮ ಚಿತ್ರದಲ್ಲಿ ಬದುಕಿನ ಬವಣೆಗಳನ್ನ ಪರಿಣಾಮಕಾರಿಯಾಗಿ ಬಿಂಬಿಸಿದ್ಧಾರೆ. ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ ವ್ಯಕ್ತಿಗಳು ಅಸ್ತಿತ್ವಕ್ಕೆ ಪ್ರಯತ್ನಿಸುತ್ತಾ ಕಳೆದುಕೊಳ್ಳುಹೋಗುವುದನ್ನು ಅವರು ತೋರಿಸಿದ್ಧಾರೆ. ವ್ಯಕ್ತಿಯ ಒಂಟಿತನ, ಅನಿಶ್ಚಿತತೆಯನ್ನ ಕಾಣಬಹುದು. ಲಾಕ್ ಡೌನ್ ಸಡಿಲಿಸಿದ ಬಳಿಕ ರಸ್ತೆಯಲ್ಲಿ ಸಂಚರಿಸುವವರನ್ನ ನೋಡಬಹುದು. ಕಾರ್ಮಿಕರ ಬವಣೆ ಕೂಡ ಇಲ್ಲಿದೆ.