ನಟ ದರ್ಶನ್ ರೆಬೆಲ್ ಸ್ಟಾರ್ ಅಂಬರೀಶ್ ಕುಟುಂಬಕ್ಕೆ ತುಂಬಾನೇ ಹತ್ತಿರವಾದವರು. ಅಂಬರೀಶ್ ಮೃತಪಟ್ಟ ನಂತರ ಸುಮಲತಾ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದರು ದರ್ಶನ್.
2/ 8
ಸುಮಲತಾ ಮಂಡ್ಯ ಲೋಕಸಭಾ ಚುನಾವಣೆಗೆ ನಿಂತಾಗ ದರ್ಶನ್ ಪ್ರಚಾರಕ್ಕೆ ಇಳಿದಿದ್ದರು. ಸುಮಲತಾ ಚುನಾವಣೆಯಲ್ಲಿ ಗೆಲ್ಲಲು ದರ್ಶನ್-ಯಶ್ ನೇರ ಕಾರಣವಾಗಿದ್ದರು.
3/ 8
ಈ ಎಲ್ಲ ಕಾರಣಕ್ಕೆ ದರ್ಶನ್ ಹಾಗೂ ಯಂಗ್ ರೆಬೆಲ್ ಅಭಿಷೇಕ್ ಅಂಬರೀಶ್ ಗೆಳೆತನ ಮತ್ತಷ್ಟು ಗಟ್ಟಿಯಾಗಿದೆ. ಈಗ ದರ್ಶನ್ ಬಗ್ಗೆ ಅಭಿಷೇಕ್ ಒಂದಷ್ಟು ಉತ್ತಮ ಮಾತುಗಳನ್ನಾಡಿದ್ದಾರೆ. ದರ್ಶನ್ ಅವರನ್ನು ಅಣ್ಣನಾಗಿ ಪಡೆದಿದ್ದಕ್ಕೆ ಹೆಮ್ಮೆ ಆಗುತ್ತದೆ ಎಂದಿದ್ದಾರೆ.
4/ 8
ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 23 ವರ್ಷಗಳು ಕಳೆದಿವೆ. ನಿಮ್ಮನ್ನು ಅಣ್ಣ ಎನ್ನಲು ನನಗೆ ಸಂತಸವಾಗುತ್ತದೆ. ನಿಮ್ಮಂತೆ ಮತ್ತೊಬ್ಬರು ಇರಲು ಸಾಧ್ಯವೇ ಇಲ್ಲ ಎಂದಿದ್ದಾರೆ ಅಭಿಷೇಕ್.
5/ 8
ಈ ಮೂಲಕ 23 ವರ್ಷ ಪೂರೈಸಿದ್ದಕ್ಕೆ ದರ್ಶನ್ಗೆ ಅಭಿಷೇಕ್ ಶುಭ ಹಾರೈಸಿದ್ದಾರೆ.
6/ 8
ಅಭಿಷೇಕ್ ಪೋಸ್ಟ್
7/ 8
ದರ್ಶನ್-ಅಭಿಷೇಕ್
8/ 8
ದರ್ಶನ್ ಅಭಿನಯದ ಮೆಜೆಸ್ಟಿಕ್ ಸಿನಿಮಾ 2002 ಫೆಬ್ರವರಿ ತಿಂಗಳಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾ ದರ್ಶನ್ಗೆ ದೊಡ್ಡ ಮಟ್ಟದ ಹಿಟ್ ನೀಡಿತ್ತು.