Aayush Sharma: ಸಲ್ಮಾನ್ ಖಾನ್ ಚಿತ್ರದಿಂದ ಆಯುಷ್ ಶರ್ಮಾ ಹೊರ ಬರೋಕೆ ಇದೇ ಕಾರಣವಂತೆ
Bollywood Update: ಆಯುಷ್ ಶರ್ಮಾ ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಪತಿ ಎನ್ನುವುದಕ್ಕಿಂತ ಒಬ್ಬ ಉತ್ತಮ ನಟನಾಗಿ ಸಹ ಇದೀಗ ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಭಾವ ಮತ್ತು ಭಾವ ಮೈದುನರ ಸಂಬಂಧ ಕೂಡ ಚೆನ್ನಾಗಿದೆ. ಆದರೆ ಇದೀಗ ಬಾಲಿವುಡ್ನಲ್ಲಿ ಕೇಳಿ ಬರುತ್ತಿರುವ ಈ ಸುದ್ದಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
2018ರಲ್ಲಿ ಸಲ್ಮಾನ್ ಖಾನ್ ನಿರ್ಮಿಸಿದ್ದ ಲವ್ ಯಾತ್ರಿ ಸಿನಿಮಾದ ಮೂಲಕ ಮೊದಲ ಬಾರಿಗೆ ನಾಯಕನಾಗಿ ಬಾಲಿವುಡ್ ಪ್ರವೇಶಿಸಿದ್ದ ಆಯುಷ್, ಅಂತಿಮ್ ಚಿತ್ರದ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.
2/ 8
ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಆಯುಷ್, ಸಲ್ಮಾನ್ ಖಾನ್ ಜೊತೆ ಒಳ್ಳೆಯ ಸಂಬಂಧವನ್ನು ಸಹ ಹೊಂದಿದ್ದರು. ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
3/ 8
ಆದರೆ ಸಲ್ಮಾನ್ ಹಾಗೂ ಆಯುಷ್ ನಡುವೆ ಈಗ ಎಲ್ಲವೂ ಸರಿಯಲ್ಲ ಎಂಬ ಗುಸಗುಸು ಬಾಲಿವುಡ್ನಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಕಾರಣ ಕಭಿ ಈದ್ ಕಭಿ ದಿವಾಲಿ’ ಚಿತ್ರ.
4/ 8
ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ `ಕಭಿ ಈದ್ ಕಭಿ ದಿವಾಲಿ’ ಸಿನಿಮಾದಿಂದ ನಟ ಆಯುಷ್ ಶರ್ಮಾ ಹೊರ ಬಂದಿದ್ದು, ಬಾಲಿವುಡ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವುದು ಸುಳ್ಳಲ್ಲ.
5/ 8
ಕೆಲ ಮೂಲಗಳ ಪ್ರಕಾರ, ಸಲ್ಮಾನ್ ಖಾನ್ ಫಿಲ್ಮ್ಸ್ ಹಾಗೂ ಆಯುಷ್ ಮಧ್ಯೆ ಸಣ್ಣ ಮನಸ್ತಾಪ ಆಗಿದ್ದು, ಈ ಕಾರಣಕ್ಕೆ ಆಯುಷ್ ಈ ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಆಯುಷ್ ಶರ್ಮಾ ಆಗಲಿ ಅಥವಾ ಸಲ್ಮಾನ್ ಖಾನ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
6/ 8
ಈ ಚಿತ್ರ ಶುರುವಾದಗಿನಿಂದ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಇದೀಗ ಆಯುಷ್ ಶರ್ಮಾ ಹೊರ ನಡೆದಿರುವುದು ಶಾಕ್ ಆಗಿದ್ದು, ಮುಂದೇನಾಗುತ್ತದೆ ಎಂಬುದು ಮಾತ್ರ ಇನ್ನು ಕುತೂಹಲ.
7/ 8
ಕೇವಲ ಆಯುಷ್ ಶರ್ಮಾ ಮಾತ್ರವಲ್ಲದೇ ಇದರ ಮತ್ತೊಬ್ಬ ನಿರ್ಮಾಪಕರಾಗಿದ್ದ ಸಾಜಿದ್ ನಾಡಿಯಾದ್ವಾಲಾ ಸಹ ಹಿಂದೆ ಸರಿದಿದ್ದು, ಮತ್ತೆಷ್ಟು ಬದಲಾವಣೆಗಳಾಗುತ್ತದೆ ಎಂಬ ಚಿಂತೆಯಲ್ಲಿ ಚಿತ್ರತಂಡವಿದೆ.
8/ 8
ಇನ್ನು ಆಯುಷ್ ಬದಲಿಗೆ ಯಾವ ನಟ ಬರಲಿದ್ದಾರೆ ಎಂಬುದು ಇದುವರೆಗೂ ಖಾತ್ರಿಯಾಗಿಲ್ಲ. ಅಲ್ಲದೇ ಆ ಭಾಗವನ್ನು ಮತ್ತೆ ಶೂಟ್ ಮಾಡಬೇಕಿದೆ.