Celebrity Voting: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಸೆಲೆಬ್ರಿಟಿಗಳು..!

Assembly Elections 2019: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣಾ ಮತದಾನ ಈಗಾಗಲೇ ಆರಂಭವಾಗಿದೆ. ಮಹಾರಾಷ್ಟ್ರದ 288, ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಎರಡು ರಾಜ್ಯದಲ್ಲಿ ಮತದಾನವಾಗಲಿದೆ. ಮಹಾರಾಷ್ಟ್ರದಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳೂ ತಮ್ಮ ಮತದಾನ ಹಕ್ಕನ್ನು ಚಲಾಯಿಸಿದ್ದಾರೆ. ನಟ ಅಮೀರ್​ ಖಾನ್​, ಅವರ ಹೆಂಡತಿ ಕಿರಣ್​ ರಾವ್​, ಲಾರಾ ದತ್ತಾ, ಮಹೇಶ್​ ಭೂಪತಿ, ಮಾಧುರಿ ದೀಕ್ಷಿತ್​, ಖುನಾಲ್​ ಖೇಮು, ರಿತೇಶ್​ ಹಾಗೂ ಜೆನಿಲಿಯಾ ಮತದಾನ ಮಾಡಿದ್ದಾರೆ. (ಚಿತ್ರಗಳು ಕೃಪೆ: Viral Bhayani Instagram)

First published: