ಸ್ಯಾಂಡಲ್ವುಡ್ ಸುರಸುಂದರಾಂಗ ಆ ದಿನಗಳು ಚೇತನ್ ಕೊನೆಗೂ ತಮ್ಮ ಲವ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
2/ 15
ಬಿರುಗಾಳಿ, ಸೂರ್ಯಕಾಂತಿ, ಮೈನಾ ಚಿತ್ರಗಳ ಮೂಲಕ ಹೆಂಗಳೆಯರ ಹಾಟ್ ಫೇವರೇಟ್ ಎನಿಸಿಕೊಂಡಿದ್ದ ಚೇತನ್ ಮುಂದಿನ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
3/ 15
ನಟನೆಗಿಂತಲೂ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡಿರುವ ಚೇತನ್ ಕೆಲ ದಿನಗಳ ಹಿಂದೆಯಷ್ಟೇ ಸಂಗಾತಿ ವಿಚಾರವನ್ನು ಸಾರ್ವಜನಿಕಗೊಳಿಸಿದ್ದರು.
4/ 15
ಇದೀಗ ಚೇತನ್ ತಮ್ಮ ಭಾವಿ ಪತ್ನಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
5/ 15
ಕಲ್ಲರ್ಫುಲ್! Colourful! ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ ಎಂಬ ಕ್ಯಾಪ್ಷನ್ನೊಂದಿಗೆ ಸಂಗಾತಿಯ ಫೋಟೋವನ್ನು ಚೇತನ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
6/ 15
ಅಸ್ಸಾಂ ಮೂಲದ ಮೇಘ ಅವರನ್ನು ಚೇತನ್ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇಬ್ಬರ ಮದುವೆಗೆ ಕುಟುಂಬ ವರ್ಗದಿಂದ ಅಧಿಕೃತ ಒಪ್ಪಿಗೆ ಸಿಕ್ಕಿದ್ದು, ಫೆಬ್ರವರಿಯಲ್ಲಿ ವೈಯುಕ್ತಿಕ ಜೀವನಕ್ಕೆ ಕಾಲಿಡಲಿದ್ದಾರೆ.
7/ 15
ಇನ್ನು ಮದುವೆಯನ್ನೂ ಕೂಡ ಸಿಂಪಲ್ ಆಗಿ ಮಾಡುವ ಪ್ಲ್ಯಾನ್ನ್ನು ಚೇತನ್-ಮೇಘ ಹಾಕಿಕೊಂಡಿದ್ದಾರೆ. ಅದರಂತೆ ಅನಾಥ ಮಕ್ಕಳ ಸಮ್ಮುಖದಲ್ಲಿ ಹಾರ ಬದಲಿಸಿಕೊಳ್ಳಲಿದ್ದಾರೆ ಎಂದು ಚೇತನ್ ಅವರ ಆಪ್ತ ಮೂಲಗಳು ತಿಳಿಸಿವೆ.
8/ 15
ಕನ್ನಡ ಭಾಷೆ, ನಾಡು, ನುಡಿ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಚೇತನ್, ಸದ್ಯ ತಮ್ಮ ಪ್ರಿಯತಮೆಗೆ ಕನ್ನಡ ಪಾಠ ಕಲಿಸುತ್ತಿದ್ದಾರೆ.