James: ಅಪ್ಪು ಕೊನೆಯ ಚಿತ್ರದ ಅಪರೂಪದ ಫೋಟೋಗಳು, ಹೇಗಿದ್ದಾನೆ ನೋಡಿ ಜೇಮ್ಸ್
Rare Photos: ಜೇಮ್ಸ್ ಕನ್ನಡ ಚಿತ್ರಕ್ಕಾಗಿ ಅಪ್ಪು ಅಭಿಮಾನಿಗಳು ಮಾತ್ರವಲ್ಲದೇ ಇಡೀ ಕರ್ನಾಟಕವೇ ಕಾತರದಿಂದ ಕಾಯುತ್ತಿದೆ. ಈಗಾಗಲೇ ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದು, ಚಿತ್ರದ ಪೋಸ್ಟರ್ಗಳು ಸಹ ಭಾರೀ ಸದ್ದು ಮಾಡಿವೆ. ಇದೀಗ ರಾಜರತ್ನನ ಕೊನೆಯ ಚಿತ್ರದ ಕೆಲ ಫೋಟೋಗಳು ವೈರಲ್ ಆಗುತ್ತಿದ್ದು, ಅದರ ಝಲಕ್ ಇಲ್ಲಿದೆ.
ಪುನೀತ್ ರಾಜಕುಮಾರ್, ಅಪ್ಪು ಎಂದೇ ಎಲ್ಲರ ಮನದಲ್ಲಿ ಮನೆ ಮಾಡಿದ್ದ ನಗು ಮುಖದ ನಟನ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ.
2/ 12
ಮಾರ್ಚ್ 17 ಕ್ಕೆ ಅಂದರೆ ಅಪ್ಪು ಜನ್ಮ ದಿನಕ್ಕೆ ಜೇಮ್ಸ್ ಬಿಡುಗಡೆಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದ್ದು, ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
3/ 12
ಕೇವಲ ಚಿತ್ರತಂಡ ಮಾತ್ರವಲ್ಲದೇ ದೊಡ್ಮನೆ ಅಭಿಮಾನಿಗಳು ಸಹ ಅದ್ಧೂರಿಯಾಗಿ ಚಿತ್ರವನ್ನು ಸ್ವಾಗತಿಸಲು ಸಿದ್ದವಾಗಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
4/ 12
ಟೀಸರ್ ನಂತರ ಮುಂದಿನ ಅಪ್ಡೇಟ್ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇತ್ತೀಚೆಗಷ್ಟೇ ಚಿತ್ರತಂಡದ ಸಾಂಗ್ ರಿಲೀಸ್ ಬಗ್ಗೆ ಸಿಹಿ ಸುದ್ದಿ ನೀಡಿತ್ತು.
5/ 12
ಚಿತ್ರದಲ್ಲಿ ಪುನೀತ್ ಅವರ ಇಂಟ್ರಡಕ್ಷನ್ ಸಾಂಗ್ ಅನ್ನು ಇದೇ ಶಿವರಾತ್ರಿಯಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
6/ 12
ಜೇಮ್ಸ್ ಚಿತ್ರದ ಪ್ರಚಾರವನ್ನು ಭರ್ಜರಿಯಾಗಿ ಮಾಡಲು ಚಿತ್ರತಂಡ ಯೋಜನೆ ಮಾಡುತ್ತಿದ್ದು, ಚಿತ್ರದ ಪ್ರಿ ರಿಲೀಸ್ ಇವೆಂಟ್ ಮಾಡಲು ಈಗಾಗಲೇ ಸಿದ್ದತೆ ಆರಂಭವಾಗಿದೆ.
7/ 12
ಜೇಮ್ಸ್ ಚಿತ್ರ ಬಿಡುಗಡೆ ಅಪ್ಪು ಅಭಿಮಾನಿಗಳ ಹಬ್ಬ ಎಂದರೆ ತಪ್ಪಾಗಲಾರದು. ಇನ್ನು ಹೋಸಕೋಟೆ, ಬೆಂಗಳೂರು ಹಾಗೂ ಚಾಮರಾಜನಗರದಲ್ಲಿ ಪ್ರೀ ರಿಲೀಸ್ ಮಾಡಬಹುದು ಎಂದು ಮುಲಗಳು ತಿಳಿಸಿವೆ.
8/ 12
ಕೆಲ ಮೂಲಗಳ ಪ್ರಕಾರ ಈ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಟಾಲಿವುಡ್ ಸೂಪರ್ ಸ್ಟಾರ್ ಮತ್ತು ಅಪ್ಪು ಗೆಳೆಯರಾಗಿರುವ ಜ್ಯೂನಿಯರ್ ಎನ್ಟಿಆರ್ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಚಿತ್ರತಂಡದಿಂದ ಬಂದಿದೆ.
9/ 12
ಅಭಿಮಾನಿಗಳು ಸಹ ಚಿತ್ರವನ್ನು ಸ್ವಾಗತಿಸಲು ಅದ್ಧೂರಿಯಾಗಿ ಸಿದ್ಧತೆ ಮಾಡಿಕೊಂಡಿದ್ದು, ಮಾರ್ಚ್ 17ರಿಂದ 20ರವರೆಗೆ ಅನ್ನ ದಾಸೋಹ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.
10/ 12
ಅಲ್ಲದೇ, ಬಿಡುಗಡೆ ದಿನ ಚಿತ್ರಮಂದಿರಗಳಲ್ಲಿ ಪುನೀತ್ ಅವರ 130 ಕಟೌಟ್ ನಿಲ್ಲಿಸಲು 15 ಲಕ್ಷ ಹಾಗೂ ಹೂವಿನ ಮಾಲೆಗಳಿಗೆ 12 ಲಕ್ಷ ಖರ್ಚಾಗುತ್ತಿದೆ ಎಂದು ಎಂದಾಜಿಸಲಾಗಿದೆ.
11/ 12
ಕರ್ನಾಟಕದ ಯುವರತ್ನ ಪುನೀತ ರಾಜಕುಮಾರ್ ಅಕಾಲಿಕ ಮರಣ ಕನ್ನಡ ಚಿತ್ರರಂಗವನ್ನೇ ನೋವಿನಲ್ಲಿ ಮುಳುಗಿಸಿತ್ತು. ಜೇಮ್ಸ್ ಅವರ ಕೊನೆಯ ಚಿತ್ರವಾಗಿದ್ದು, ಡಬ್ಬಿಂಗ್ ಒಂದು ಬಾಕಿ ಇತ್ತು.
12/ 12
ತಮ್ಮನ ಈ ಕೊನೆಯ ಚಿತ್ರಕ್ಕೆ ಶಿವರಾಜಕುಮಾರ್ ವಾಯ್ಸ್ ನೀಡಿದ್ದು, ಕೊನೆಯದಾಗಿ ತೆರೆಯ ಮೇಲೆ ಅಪ್ಪು ಕಣ್ತುಂಬಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.