Radhe Shyam: ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಚಿತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ ಎ.ಆರ್. ರೆಹಮಾನ್..!
Prabhas-A R Rahman: ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್ಗೆ ಎ.ಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡಲಿದ್ದಾರಂತೆ. ಅದಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ. (ಚಿತ್ರಗಳು ಕೃಪೆ: ಎ.ಆರ್. ರೆಹಮಾನ್ ಇನ್ಸ್ಟಾಗ್ರಾಂ ಖಾತೆ)
ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಹಾಡುಗಳನ್ನು ಕೇಳಿದರೆ ತಲೆ ತೂಗದವರಿಲ್ಲ.
2/ 13
ಸ್ಲೋ ಪಾಯಿಸನ್ನಂತೆ ರೆಹಮಾನ್ ಅವರ ಸಂಗೀತ, ಕೇಳುಗರಿಗೆ ಮತ್ತೇರಿಸುತ್ತದೆ.
3/ 13
ಎ.ಆರ್. ರೆಹಮಾನ್ ಸಂಗೀತ ನೀಡಿರುವ ದಿಲ್ ಬೆಚಾರ ಸಿನಿಮಾದ ಹಾಡುಗಳು ಸಿನಿ ಪ್ರಿಯರಿಗೆ ತುಂಬಾ ಇಷ್ಟವಾಗಿದೆ.
4/ 13
ಈಗ ಈ ಮ್ಯೂಸಿಕ್ ಮಾಂತ್ರಿಕ ಪ್ರಭಾಸ್ ಅಭಿನಯದ ಹೊಸ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿದ್ದಾರಂತೆ.
5/ 13
ದೀಪಿಕಾ ಪಡುಕೋಣೆ ಹಾಗೂ ಪ್ರಭಾಸ್ ಅಭಿನಯದ ಪ್ರಭಾಸ್ 21 ಸಿನಿಮಾಗೆ ದೀಪಿಕಾ ಸಹ ದೊಡ್ಡ ಮೊತ್ತವನ್ನೇ ಪಡೆದಿದ್ದಾರಂತೆ. ಈಗ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ ರಾಧೆ ಶ್ಯಾಮ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲು ಎ.ಆರ್. ರೆಹಮಾನ್ , ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ.
6/ 13
ಟಾಲಿವುಡ್ನಲ್ಲಿ ಓಡುತ್ತಿರುವ ಕುದುರೆಯೆಂದರೆ ದೇವಿ ಶ್ರೀ ಪ್ರಸಾದ್. ಸ್ಟಾರ್ ನಟರೊಂದಿಗೆ ಸಿನಿಮಾ ಮಾಡುವ ಇವರು ಒಂದು ಚಿತ್ರಕ್ಕೆ 1-2 ಕೋಟಿ ಸಂಭಾವನೆ ಪಡೆಯುತ್ತಾರಂತೆ.
7/ 13
ಪ್ರಭಾಸ್ ಈಗ ನ್ಯಾಷನಲ್ ಸ್ಟಾರ್. ಅವರ ಸಿನಿಮಾಗೆ ಹಣ ಹಾಕಿದರೆ, ಅದು ಹಿಂದಕ್ಕೆ ಬಂದೇ ಬರುತ್ತದೆ ಅನ್ನೋ ನಂಬಿಕೆ ನಿರ್ಮಾಪಕರದ್ದು.
8/ 13
ಇದೇ ಕಾರಣದಿಂದ ಅವರು ಈಗ ರಾಧೆ ಶ್ಯಾಮ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲು ರೆಹಮಾನ್ ಅವರನ್ನು ಸಂಪರ್ಕಿಸಿದ್ದಾರಂತೆ.
9/ 13
ಈ ಸಿನಿಮಾಗಾಗಿ ಎ.ಆರ್.ರೆಹಮಾನ್ ಸದ್ಯ 4.5 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ.
10/ 13
ರೆಹಮಾನ್ ಅವರು ಬೇಡಿಕೆ ಇಟ್ಟಿರುವ ಸಂಭಾವನೆಗೆ ನಿರ್ಮಾಪಕರು ಒಂದು ಮಾತೂ ಹೇಳದೆ ಒಪ್ಪಿಗೆ ಸೂಚಿಸಿದ್ದಾರಂತೆ.