ಅಶ್ವಿನಿ ಮತ್ತು ಪುನೀತ್ ರಾಜ್ಕುಮಾರ್ ದಂಪತಿಗೆ ದ್ರಿತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಪುತ್ರಿ ದ್ರಿತಿ ನ್ಯೂರ್ಯಾಕ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಕಿರಿಯ ಪುತ್ರಿ ವಂದಿತಾ ಬೆಂಗಳೂರಿನಲ್ಲೇ ಓದುತ್ತಿದ್ದಾರೆ. ಪುನೀತ್ ನಿಧನದ ಬಳಿಕ ಮನೆ ಹಾಗೂ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ನಿಭಾಯಿಸುತ್ತಿದ್ದಾರೆ.