777 ಚಾರ್ಲಿ ಸಿನಿಮಾ ಖ್ಯಾತಿಯ ಸಂಗೀತಾ ಶೃಂಗೇರಿ ಅವರು ಇಶಾ ಫೌಂಡೇಷನ್ಗೆ ಭೇಟಿ ಕೊಟ್ಟಿದ್ದಾರೆ. ಮಹಾ ಶಿವರಾತ್ರಿಯಂದು ಇಶಾ ಫೌಂಡೇಷನ್ನಲ್ಲೊ ಅದ್ಧೂರಿ ಕಾರ್ಯಕ್ರಮಗಳು ನಡೆಯುತ್ತವೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನಟಿ ಭೇಟಿಯ ಹಲವು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ಇದರಲ್ಲಿ ಸಂಗೀತಾ ಸುಂದರವಾದ ನೀಲಿ ಸೀರೆ ಉಟ್ಟಿರುವುದನ್ನು ಕಾಣಬಹುದು. ಅತ್ಯಂತ ಸರಳ ಮೇಕಪ್ನಲ್ಲಿ ಕಾಣಿಸಿಕೊಂಡ ನಟಿ ಇಶಾ ಫೌಂಡೇಷನ್ನ ವಾತಾವರಣ, ಅಲ್ಲಿನ ವೈಬ್ ಎಂಜಾಯ್ ಮಾಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು. ಇನ್ನೊಂದು ಫೋಟೋದಲ್ಲಿ ನಟಿ ಸಂಗೀತಾ ಅವರು ಧ್ಯಾನ ಮಾಡುತ್ತಿರುವುದನ್ನು ಕಾಣಬಹುದು. ನಟಿ ಫೋಟೋದಲ್ಲಿ ಲೊಕೇಷನ್ ಶೇರ್ ಮಾಡಿದ್ದಾರೆ. ಇನ್ನೊಂದರಲ್ಲಿ ನಟಿ ಗುಲಾಬಿ ಬಣ್ಣದ ಕುರ್ತಾ ಧರಿಸಿದ್ದರು. ಬಿಳಿ ಬಣ್ಣದ ಪ್ರಿಂಟ್ ಇದ್ದ ಸಿಂಪಲ್ ಡ್ರೆಸ್ ಧರಿಸಿದ್ದರು. ನಟಿ ಸದ್ಗುರುಗಳ ಜೊತೆ ಮಾತನಾಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು. ಇದರಲ್ಲಿ ಸದ್ಗುರು ನೀಲಿ ಬಣ್ಣದ ಬಟ್ಟೆ ಧರಿಸಿ, ಬಿಳಿ ಬಣ್ಣದ ಶಲ್ಯ ಹೊದ್ದಿದ್ದರು. ನಟಿ ಶೇರ್ ಮಾಡಿದ ಫೋಟೋ ವೈರಲ್ ಆಗಿದೆ. ನಟಿಯ ಫೋಟೋಗಳಿಗೆ 12 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಭಿಮಾನಿಗಳು ಮಹಾಶಿವರಾತ್ರಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಶಿವರಾತ್ರಿ ಎಂದೆಂದೂ ಮರೆಯದ, ಎಂದೆಂದಿಗೂ ನೆನಪಿಸಿಕೊಳ್ಳುವಂತ ಶಿವರಾತ್ರಿ ಎಂದು ನಟಿ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಫೋಟೋದಲ್ಲಿ ಸದ್ಗುರುಗಳನ್ನು ಟ್ಯಾಗ್ ಮಾಡಿದ್ದಾರೆ.