Singers Death: 2022ರಲ್ಲಿ ಸಂಗೀತ ಲೋಕಕ್ಕೆ ಇದೆಂಥಾ ಆಘಾತ; ಗಾನ ನಿಲ್ಲಿಸಿ ಇಹಲೋಕಕ್ಕೆ ವಿದಾಯ ಹೇಳಿದ್ರು 7 ಮಂದಿ ಸಿಂಗರ್ಸ್
ಕಳೆದ ಸಂಗೀತ ಲೋಕದಿಂದ ಒಬ್ಬೊಬ್ಬರಾಗಿ ಏಳು ಸಂಗೀತಗಾರರು ನಿಧನರಾಗಿದ್ದಾರೆ. ಲತಾ ಮಂಗೇಶ್ಕರ್ ಅವರಿಂದ ಹಿಡಿದು ಸಿದ್ದು ಮೂಸೆವಾಲ ಮತ್ತು ಈಗ ಕೆಕೆ. ಹೀಗೆ ಅನೇಕ ಹಿರಿಯ ಮತ್ತು ಯುವ ಗಾಯಕರು ನಮಗೆ ವಿದಾಯ ಹೇಳಿದ್ದಾರೆ.
'ತಡಪ್ ತಡಪ್' ನಂತಹ ಸೂಪರ್ ಹಿಟ್ ಹಾಡುಗಳ ಗಾಯಕ ಕೆಕೆ ಅವರ ನಿಧನ ಎಲ್ಲರಿಗೂ ದೊಡ್ಡ ಆಘಾತವನ್ನುಂಟು ಮಾಡಿದೆ. ನೇರಪ್ರಸಾರದ ಕಾರ್ಯಕ್ರಮದ ನಂತರ ಕೆಕೆ 53 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.
2/ 7
ಕೆಕೆ ಸಾವಿಗೆ ಎರಡು ದಿನಗಳ ಮೊದಲು ಪಂಜಾಬಿ ಗಾಯಕ ಸಿಧು ಮುಸೇವಾಲಾ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸಿಧು ಮುಸೇವಾಲಾ ಅವರ ಅಭಿಮಾನಿ ಬಳಗವು ಭಾರತದಲ್ಲಿ ಮಾತ್ರವಲ್ಲದೆ ಕೆನಡಾ, ಯುಕೆ ಮತ್ತು ಯುಎಸ್ಎಗಳಲ್ಲಿಯೂ ಇತ್ತು. ಅವರ ಅಗಲಿಕೆ ಅಭಿಮಾನಿಗಳಿಗೆ ಶಾಕ್ ನೀಡಿದೆ.
3/ 7
ಖ್ಯಾತ ಶಾಸ್ತ್ರೀಯ ಸಂಗೀತಗಾರ ಮತ್ತು ಸಂಯೋಜಕ ಪಂಡಿತ್ ಶಿವಕುಮಾರ್ ಶರ್ಮಾ ಅವರು ತಮ್ಮ 84 ನೇ ವಯಸ್ಸಿನಲ್ಲಿ ಮೇ 10 ರಂದು ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಅನೇಕ ಹಿಟ್ ಹಾಡುಗಳನ್ನು ಹಾಡಿದ್ದಾರೆ.
4/ 7
'ನಾಚೆಂಗೆ ಸಾರಿ ರಾತ್' ಗಾಯಕ ತಾರ್ಸೆಮ್ ಸಿಂಗ್ ಸೈನಿ ಅವರು ಏಪ್ರಿಲ್ 29 ರಂದು ಲಂಡನ್ನಲ್ಲಿ ಕೊನೆಯುಸಿರೆಳೆದರು. ತಾರ್ಸೆಮ್ ಅನ್ನು 'ಸ್ಟಿರಿಯೊ ನೇಷನ್' ಮತ್ತು 'ತಾಜ್' ಎಂದು ಕರೆಯಲಾಗುತ್ತಿತ್ತು.
5/ 7
ಡಿಸ್ಕೋ ಕಿಂಗ್ ಬಪ್ಪಿ ಲೆಹ್ರಿ ಫೆಬ್ರವರಿ 15 ರಂದು 69ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಬಪ್ಪಿ ಅವರು ಹಿಂದಿಯಲ್ಲಿ ಮಾತ್ರವಲ್ಲದೆ ಬೆಂಗಾಲಿ, ತಮಿಳು, ತೆಲುಗು ಮತ್ತು ಕನ್ನಡದಲ್ಲೂ ಅನೇಕ ಹಾಡುಗಳನ್ನು ಹಾಡಿದ್ದಾರೆ. ಪ್ರಪಂಚದಾದ್ಯಂತದ ಅಭಿಮಾನಿಗಳು ಬಪ್ಪಿ ಅವರ ಹಾಡುಗಳಿಗೆ ಅಭಿಮಾನಿಗಳಾಗಿದ್ದರು.
6/ 7
ಹಿನ್ನೆಲೆ ಗಾಯಕಿ ಮತ್ತು ಪ್ರಸಿದ್ಧ ಗಿಟಾರ್ ವಾದಕ ಸಂಧ್ಯಾ ಮುಖರ್ಜಿ ಫೆಬ್ರವರಿ 15 ರಂದು ನಿಧನರಾದರು.
7/ 7
ಭಾರತ ರತ್ನ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನ ಸಂಗೀತ ಲೋಕದಲ್ಲಿ ಒಂದು ಮಹತ್ವದ ತಿರುವು. ಫೆಬ್ರವರಿ 6 ರಂದು 92 ನೇ ವಯಸ್ಸಿನಲ್ಲಿ ಲತಾ ದೀದಿ ಕೊನೆಯುಸಿರೆಳೆದರು. 1940 ಮತ್ತು 2000 ರ ದಶಕವು ಲತಾ ದೀದಿಯವರ ಹಾಡುಗಳಿಂದ ಗುರುತಿಸಲ್ಪಟ್ಟಿದೆ. ಅವರ ಹಾಡುಗಳು ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತವೆ.