ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿಸಿದೆ. ಸೌತ್ ಟು ನಾರ್ತ್ ಈಗ ಬರೀ ಕಾಂತಾರದ ಹವಾ. ಸಿನಿಮಾ ಕುರಿತು ಹಲವು ವಿಶೇಷಗಳನ್ನು ಕೇಳುವಾಗ ಇಲ್ಲೊಂದು ಹೊಸ ಅಪ್ಡೇಟ್ ಬಂದಿದೆ.
2/ 7
ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿ ಕೊಂಡಾಡಿದ್ದಾರೆ. ಇದೀಗ ಕಾಸರಗೋಡಿನ ಬದಿಯಡ್ಕ ಪಂಚಾಯತ್ನ ಕುಂಟಾಲುಮೂಲೆ ಗ್ರಾಮದ 69 ಜನ ಒಟ್ಟಿಗೇ ಬಂದು ಸಿನಿಮಾ ವೀಕ್ಷಿಸಿದ್ದಾರೆ.
3/ 7
ಒಂದೇ ಗ್ರಾಮದ 69 ಜನರು ಒಟ್ಟಿಗೇ ಬಸ್ ಹತ್ತಿ ಕಾಸರಗೋಡಿಗೆ ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಕಾಂತಾರ ಸಿನಿಮಾ ಕ್ರೇಜ್ ಹೆಚ್ಚಿರೋದಕ್ಕೆ ಈ ಘಟನೆಯೇ ಸಾಕ್ಷಿ.
4/ 7
ಸಿನಿಮಾ ಈಗ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿಯೂ ರಿಲೀಸ್ ಆಗಿದ್ದು ದೊಡ್ಡ ಮಟ್ಟದಲ್ಲಿ ಹೈಲೈಟ್ ಆಗುತ್ತಿದೆ. ಪ್ರಾದೇಶಿಕ ಸಿನಿಮಾ ಈಗ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ.
5/ 7
ರಿಷಬ್ ಸೇರಿದಂತೆ ಸಿನಿಮಾದಲ್ಲಿರುವ ಮಂದಿಯ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ಸಿಕ್ಕಿದ್ದು ಹೆಚ್ಚಾಗಿ ಇದರಲ್ಲಿ ಸ್ಥಳೀಯ ಕಲಾವಿದರೇ ನಟಿಸಿದ್ದಾರೆ ಎನ್ನುವುದು ವಿಶೇಷತೆ.
6/ 7
ರಿಷಬ್ ಶೆಟ್ಟಿ ಸಿನಿಮಾ ಸಕ್ಸಸ್ಫುಲ್ ಆಗಿ ಮುಂದುವರಿದಿದ್ದು ಇನ್ನಷ್ಟು ಕೋಟಿಗಳನ್ನು ಗಳಿಸುವ ಸಾಧ್ಯತೆ ಇದೆ. ಸಿನಿಮಾ ಹೊಸ ದಾಖಲೆಗಳನ್ನು ಮಾಡುತ್ತಲೇ ಇದೆ.
7/ 7
ಸಿನಿಮಾ ನೋಡಿದ ಪ್ರಭಾಸ್, ಪೃಥ್ವಿರಾಜ್, ಧನುಷ್, ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಹಿರಿಯ ನಟರು ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದಾರೆ.