ಕೊರೋನಾ ಕಾರಣದಿಂದಾಗಿ ಒಂದು ವರ್ಷ ತಡವಾಗಿ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಯಿತು. ಇದರಲ್ಲಿ ಮಣಿಕರ್ಣಿಕಾ (Manikarnika - The Queen of Jhansi (2019)) ಹಾಗೂ ಪಂಗಾ (Panga(2020)) ಸಿನಿಮಾದಲ್ಲಿನ ನಟನೆಗಾಗಿ ಕಂಗನಾ ರನೌತ್ (Kangana Ranaut) ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿರುವ ವಿಷಯ ಬಹಿರಂಗವಾಗಿತ್ತು. ಈಗ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಲ್ಲಿ ಕಂಗನಾ ಉತ್ತಮ ನಟ ಪ್ರಶಸ್ತಿ ಪಡೆದ ಧನುಷ್ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಇನ್ಸ್ಟಾ ಸ್ಟೋರೀಸ್ನಲ್ಲಿ ಶೇರ್ ಮಾಡಿದ್ದಾರೆ.