3. ಒತ್ತಡ ತಡೆಗಟ್ಟಲು ಸಾಕಷ್ಟು ನಿದ್ರೆ ಮಾಡಿ: ನಿದ್ರೆಯ ಕೊರತೆಯು ನಿಮ್ಮ ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ. ನಿದ್ರೆ ಸರಿಯಾಗಿ ಮಾಡದಿದ್ರೆ ತೂಕ ಹೆಚ್ಚಾಗಲು ಕಾರಣವಾಗಬಹುದು. ತುಂಬಾ ಕಡಿಮೆ ನಿದ್ರೆಯು ಒತ್ತಡಕ್ಕೆ ಕಾರಣವಾಗುತ್ತದೆ. ಇದು ಹೆಚ್ಚಿನ ಕ್ಯಾಲೋರಿ ಆಹಾರಕ್ಕಾಗಿ ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ. ಆದ್ದರಿಂದ, ನೀವು ಪ್ರತಿದಿನ ಕನಿಷ್ಠ 7-8 ಗಂಟೆಗಳ ನಿದ್ದೆ ಮಾಡಿ
4. ಕುಳಿತುಕೊಳ್ಳುವ ಭಂಗಿ ಬಗ್ಗೆ ಇರಲಿ ಗಮನ : ನೀವು ದೀರ್ಘಕಾಲ ಕುಳಿತು ಕಂಪ್ಯೂಟರ್ನಲ್ಲಿ ಕೆಲಸ ಮಾಡುವಾಗ, ನಿಮ್ಮ ಭಂಗಿಯನ್ನು ಪರಿಶೀಲಿಸುವುದು ಮುಖ್ಯ. ಸರಿಯಾಗಿ ಕುಳಿದುಕೊಳ್ಳದಿದ್ರೆ ನಿಮ್ಮ ಹೊಟ್ಟೆಯ ಕೊಬ್ಬನ್ನು ಹೆಚ್ಚಿಸಲು ಕಾರಣವಾಗಬಹುದು. ಆದ್ದರಿಂದ, ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಮುಂದೆ ಕುಳಿತುಕೊಳ್ಳುವಾಗ ಉತ್ತಮ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ