Kannada Pan India Movies: ಕೆಜಿಎಫ್​ನಿಂದ ವಿಕ್ರಾಂತ್ ರೋಣವರೆಗೆ, ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ ಕನ್ನಡದ ಪ್ಯಾನ್​ ಇಂಡಿಯಾ ಸಿನಿಮಾಗಳಿವು

5 Pan India Kannada Films: ಸ್ಯಾಂಡಲ್​ವುಡ್ ಈಗ ಉತ್ತಮ​ ಸಿನಿಮಾಗಳಿಂದ ಎಲ್ಲೆಡೆ ಹೆಸರುಗಳಿಸಿವೆ. ಹಲವಾರು ಪ್ಯಾನ್​ ಇಂಡಿಯಾ ಸಿನಿಮಾಗಳು ಕನ್ನಡ ಸಿನಿಮಾರಂಗ ಹೆಮ್ಮೆಪಡುವ ರೀತಿ ಬಾಕ್ಸ್​ ಆಫೀಸ್​ನಲ್ಲಿ ಕೆಲಕ್ಷನ್ ಮಾಡಿದೆ. ಕೆಜಿಎಫ್​ ಸಿನಿಮಾದಿಂದ ಹಿಡಿದು ಸದ್ಯ ಅಬ್ಬರಿಸುತ್ತಿರುವ ವಿಕ್ರಾಂತ್ ರೋಣವರೆಗೆ ಅದ್ಭುತ ಪ್ರತಿಕ್ರಿಯೆ ಪಡೆದ ಸಿನಿಮಾಗಳ ಲಿಸ್ಟ್​ ಇಲ್ಲಿದೆ.

First published:

  • 17

    Kannada Pan India Movies: ಕೆಜಿಎಫ್​ನಿಂದ ವಿಕ್ರಾಂತ್ ರೋಣವರೆಗೆ, ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ ಕನ್ನಡದ ಪ್ಯಾನ್​ ಇಂಡಿಯಾ ಸಿನಿಮಾಗಳಿವು

    ಕನ್ನಡ ಸಿನಿಮಾ ಅಥವಾ ಸ್ಯಾಂಡಲ್‌ವುಡ್ ದಕ್ಷಿಣ ಭಾರತದ ಚಿತ್ರರಂಗದ 4 ಪ್ರಮುಖ ಚಲನಚಿತ್ರ ಉದ್ಯಮಗಳಲ್ಲಿ ಒಂದಾಗಿದೆ. ಈ ಹಿಂದೆ ಕೆಲವು ಕನ್ನಡ ಚಲನಚಿತ್ರಗಳು ಇತರ ಭಾಷೆಯಲ್ಲಿ ರೀಮೇಕ್ ಆಗಿವೆ ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ಯಾಂಡಲ್ವುಡ್ ಸಿನಿಮಾ ತಮ್ಮ ಉತ್ತಮ ಕಂಟೆಂಟ್ ಮೂಲಕ ಇತರ ಭಾಷೆಯ ಉದ್ಯಮಗಳಿಗೆ ಡಬ್ ಮಾಡುವ ಮೂಲಕ ಬೆಳೆಯುತ್ತಿದೆ.

    MORE
    GALLERIES

  • 27

    Kannada Pan India Movies: ಕೆಜಿಎಫ್​ನಿಂದ ವಿಕ್ರಾಂತ್ ರೋಣವರೆಗೆ, ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ ಕನ್ನಡದ ಪ್ಯಾನ್​ ಇಂಡಿಯಾ ಸಿನಿಮಾಗಳಿವು

    ಅದರ ಇತ್ತೀಚಿನ ಕೆಲವು ಪ್ಯಾನ್-ಇಂಡಿಯಾ ಚಲನಚಿತ್ರಗಳು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಭಾರಿ ಹಣವನ್ನು ಗಳಿಸಿವೆ. ಭಾರತೀಯ ಬಾಕ್ಸ್​ ಆಫೀಸ್​ ಲೋಟಿ ಮಾಡಿದ 5 ಪ್ಯಾನ್-ಇಂಡಿಯಾ ಕನ್ನಡ ಚಲನಚಿತ್ರಗಳ ಪಟ್ಟಿ ಇಲ್ಲಿದೆ.

    MORE
    GALLERIES

  • 37

    Kannada Pan India Movies: ಕೆಜಿಎಫ್​ನಿಂದ ವಿಕ್ರಾಂತ್ ರೋಣವರೆಗೆ, ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ ಕನ್ನಡದ ಪ್ಯಾನ್​ ಇಂಡಿಯಾ ಸಿನಿಮಾಗಳಿವು

    2018 ರ ಚಲನಚಿತ್ರ 'ಕೆಜಿಎಫ್: ಅಧ್ಯಾಯ I' ನ ನಂತರ 2022 ರಲ್ಲಿ ಬಂದ ಕೆಜಿಎಫ್ 2 ಹಿಂದೆಂದೂ ಕೇಳಿರದ ರೀತಿಯಲ್ಲಿ ವಾಣಿಜ್ಯವಾಗಿ ಹಿಟ್ ಆಗಿದೆ, ಇದು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ಕೆಲವು ಬಾಲಿವುಡ್ ನಟರಿದ್ದರು, ಅವರು ಇಲ್ಲಿಯವರೆಗೆ ಮಾಡಿದ ಅತ್ಯಂತ ದುಬಾರಿ ಕನ್ನಡ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರವು ವಿವಿಧ ಭಾಷೆಯ ಆವೃತ್ತಿಗಳಿಂದ ಬಾಕ್ಸ್ಆಫಿಸ್ನಲ್ಲಿ1250 ಕೋಟಿ ರೂಪಾಯಿಗಳನ್ನು ಗಳಿಸಿದೆ.

    MORE
    GALLERIES

  • 47

    Kannada Pan India Movies: ಕೆಜಿಎಫ್​ನಿಂದ ವಿಕ್ರಾಂತ್ ರೋಣವರೆಗೆ, ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ ಕನ್ನಡದ ಪ್ಯಾನ್​ ಇಂಡಿಯಾ ಸಿನಿಮಾಗಳಿವು

    'ವಿಕ್ರಾಂತ್ ರೋಣ' ಕನ್ನಡ ಇಂಡಸ್ಟ್ರಿಯಿಂದ 2022 ರ ಮತ್ತೊಂದು ಪ್ಯಾನ್-ಇಂಡಿಯಾ ಸಿನಿಮಾ. ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಇಂದು ರಿಲಿಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದೆ. ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾ ಈಗಾಗಲೇ ವಿಶ್ವದಾದ್ಯಂತ ಒಳ್ಳೆಯ ಕಲೆಕ್ಷನ್ ಮಾಡಿದೆ.

    MORE
    GALLERIES

  • 57

    Kannada Pan India Movies: ಕೆಜಿಎಫ್​ನಿಂದ ವಿಕ್ರಾಂತ್ ರೋಣವರೆಗೆ, ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ ಕನ್ನಡದ ಪ್ಯಾನ್​ ಇಂಡಿಯಾ ಸಿನಿಮಾಗಳಿವು

    ಕನ್ನಡದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಪ್ರಿಯಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 2022 ರ ಆಕ್ಷನ್ ಡ್ರಾಮಾ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಚೇತನ್ ಕುಮಾರ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಕಿಶೋರ್ ಪತ್ತಿಕೊಂಡ ಈ ಸಿನಿಮಾವನ್ನು ನಿರ್ಮಿಸಿದ್ದು 50 ಕೋಟಿ ರೂ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ವಿವಿಧ ಭಾಷೆಗಳಿಂದ ರೂ 150 ಕೋಟಿಗಳನ್ನು ಗಳಿಸಿತ್ತು.

    MORE
    GALLERIES

  • 67

    Kannada Pan India Movies: ಕೆಜಿಎಫ್​ನಿಂದ ವಿಕ್ರಾಂತ್ ರೋಣವರೆಗೆ, ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ ಕನ್ನಡದ ಪ್ಯಾನ್​ ಇಂಡಿಯಾ ಸಿನಿಮಾಗಳಿವು

    ಯಶ್ ಅಭಿನಯದ 2018 ರ ಚಿತ್ರ 'ಕೆಜಿಎಫ್: ಅಧ್ಯಾಯ I' ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ ಗಳಿಸಿದ ಮೊದಲ ಕನ್ನಡ ಸಿನಿಮಾವಾಗಿದೆ. ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಪ್ರಶಾಂತ್ ನೀಲ್ ನಿರ್ದೇಶಿಸಿದ ಈ ಚಿತ್ರವು ಕನ್ನಡ ಇಂಡಸ್ಟ್ರಿಯಲ್ಲಿ ಹಿಂದೆಂದೂ ಕಾಣದ ಯಶಸ್ಸನ್ನು ಕಂಡಿತು. ಬಿಡುಗಡೆಯಾದ ಸಮಯದಲ್ಲಿ ಇದು ಅತ್ಯಂತ ದುಬಾರಿ ಕನ್ನಡ ಚಿತ್ರಗಳಲ್ಲಿ ಒಂದಾಗಿತ್ತು.

    MORE
    GALLERIES

  • 77

    Kannada Pan India Movies: ಕೆಜಿಎಫ್​ನಿಂದ ವಿಕ್ರಾಂತ್ ರೋಣವರೆಗೆ, ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ ಕನ್ನಡದ ಪ್ಯಾನ್​ ಇಂಡಿಯಾ ಸಿನಿಮಾಗಳಿವು

    '777 ಚಾರ್ಲಿ' ಈ ವರ್ಷ ಸ್ಯಾಂಡಲ್ವುಡ್ನಿಂದ ಬಂದ ಮತ್ತೊಂದು ಪ್ಯಾನ್-ಇಂಡಿಯಾ ಸಿನಿಮಾ. ಈ ಸಿನಿಮಾ ಸಹ 100 ಕೋಟಿ ಗಳಿಕೆ ಮಾಡಿದ್ದು, ಎಲ್ಲರನ್ನು ಅಚ್ಚರಿಗೊಳಿಸಿತ್ತು. ಚಾರ್ಲಿ ನಾಯಿ ಹಾಗೂ ರಕ್ಷಿತ್ ಶೆಟ್ಟಿ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿತ್ತು.

    MORE
    GALLERIES