ದಪ್ಪ ಇರುವವರಿಗೆ ಸಣ್ಣ ಆಗುವ ಚಿಂತೆಯಾದರೆ, ಸಣ್ಣಗಿರುವವರಿಗೆ ನಾವು ಯಾವಾಗ ದಪ್ಪ ಆಗೋದು ಅನ್ನುವ ಚಿಂತೆ. ದಪ್ಪಗಿರುವವರು ಸ್ಲಿಮ್ ಆಗಲು ವಿವಿಧ ಡಯೆಟ್ ಪ್ಲ್ಯಾನ್ಗಳನ್ನು ಅನುಸರಿಸುತ್ತಾರೆ., ಇದಕ್ಕೆ ಸೆಲೆಬ್ರಿಟಿಗಳೂ ಸಹ ಹೊರತಾಗಿಲ್ಲ. ಯೋಗ, ಡಯೆಟ್, ವ್ಯಾಯಾಮ ಹೀಗೆ ವಿವಿಧ ರೂಪಗಳಲ್ಲಿ ದೇಹವನ್ನು ದಂಡಿಸಿ ಬಳುಕುವ ಬಳ್ಳಿಯಂತೆ ಇರುತ್ತಾರೆ. ಇತ್ತೀಚಿಗೆ ತೂಕ ಕಡಿಮೆ ಮಾಡಿಕೊಂಡು ಸ್ಲಿಮ್ ಆದ ಟಾಪ್ 5 ಸೆಲೆಬ್ರಿಟಿಗಳ ಲಿಸ್ಟ್ ಇಲ್ಲಿದೆ.
ಕೊರಿಯಾಗ್ರಫರ್/ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಮೊದಲಿದ್ದ ಕೆಜಿ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ. ಬರೋಬ್ಬರಿ 2 ಕ್ವಿಂಟಾಲ್(2ಕೆಜಿ) ಇದ್ದ ಆಚಾರ್ಯ ಈಗ ಬರೋಬ್ಬರಿ 98 ಕೆಜಿ ಇಳಿಸಿಕೊಂಡಿದ್ದಾರೆ. ಇದು ಅಷ್ಟು ಸುಲಭದ ಮಾತಲ್ಲ. ಪ್ರತಿನಿತ್ಯ ವರ್ಕೌಟ್, ಯೋಗ ಹಾಗೂ ಡಯೆಟ್ನಿಂದ ಸಣ್ಣಗಾಗಲು ಸಾಧ್ಯವಾಯಿತು ಎಂದು ಆಚಾರ್ಯ ಅವರೇ ಕಪಿಲ್ ಶರ್ಮಾ ಶೋನಲ್ಲಿ ಹೇಳಿದ್ದರು.