KGF, ಕಾಂತಾರದ ಬಜೆಟ್ ಏನೂ ಅಲ್ವಂತೆ, 3 ಸಾವಿರ ಕೋಟಿ ಹೂಡಿಕೆ ಮಾಡಲಿದ್ಯಂತೆ! ಹೊಂಬಾಳೆಯಿಂದ ಬಿಗ್ ಬ್ರೇಕಿಂಗ್ ನ್ಯೂಸ್
ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು (Vijay Kirgandur ) ಅವರ ಸಾಲು ಸಾಲು ಸಿನಿಮಾಗಳನ್ನು ಘೋಷಿಸುವುದರ ಜೊತೆಗೆ ಇದೀಗ ಚಿತ್ರರಂಗ ಮೇಲೆ 3 ಸಾವಿರ ಕೋಟಿ ಹೂಡಿಕೆ ಮಾಡಲಿರುವ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.
ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು (Vijay Kirgandur ) ಅವರ ಸಾಲು ಸಾಲು ಸಿನಿಮಾಗಳನ್ನು ಘೋಷಿಸುವುದರ ಜೊತೆಗೆ ಚಿತ್ರರಂಗದ ಮೇಲೆ ಭಾರೀ ಹೂಡಿಕೆ ಮಾಡಲಿದ್ದಾರೆ.
2/ 8
ಸಿನಿಮಾ ರಂಗಕ್ಕೆ ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವ ಬಗ್ಗೆ ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.
3/ 8
ಈ ಮೂಲಕ ಕನ್ನಡದಲ್ಲೂ ಹಲವು ಬಿಗ್ ಬಜೆಟ್ ಚಿತ್ರಗಳು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಿಂದ ಮೂಡಿ ಬರುವ ಎಲ್ಲಾ ಸಾಧ್ಯತೆ ಇದೆ
4/ 8
ಕೆಜಿಎಫ್ ಸರಣಿ ಹಿಟ್ ಆದ ಬಳಿಕ ಪರಭಾಷೆಯಲ್ಲೂ ಸೂಪರ್ ಸ್ಟಾರಗಳನ್ನು ಹಾಕಿಕೊಂಡು ವಿಜಯ್ ಕಿರಗಂದೂರು ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.
5/ 8
ಪರಭಾಷೆಗಳಲ್ಲಿ ಸಿನಿಮಾ ನಿರ್ಮಾಣದ ಬ್ಯುಸಿಯಲ್ಲಿರುವ ವಿಜಯ ಕಿರಗಂದೂರು ಮತ್ತಷ್ಟು ಬಿಗ್ ಬಜೆಟ್ ಮೂವಿ ಮಾಡಲು ತಯಾರಿ ನಡೆಸಿದ್ದಾರೆ.
6/ 8
ಹೊಸ ವರ್ಷಕ್ಕೆ ವಿಜಯ್ ಕಿರಗಂದೂರು ಮಹತ್ವದ ಘೋಷಣೆ ಮಾಡಿದ್ದು, ಹೊಂಬಾಳೆ ಫಿಲ್ಮ್ಸ್ ಸದ್ಯದಲ್ಲೇ ಬಾಲಿವುಡ್ ನಲ್ಲೂ ಸಿನಿಮಾ ಮಾಡುವ ಯೋಜನೆ ಹೊಂದಿದೆ.
7/ 8
ಈ ವರ್ಷ ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ಸ್ ಯಶ್ ಅವರ ಕೆಜಿಎಫ್ 2 ಮತ್ತು ರಿಷಬ್ ಶೆಟ್ಟಿ ಅವರ ಕಾಂತಾರದಂತಹ ಯಶಸ್ವಿ ಸಿನಿಮಾ ನೀಡಿದೆ. ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ.
8/ 8
ಇತ್ತೀಚೆಗಷ್ಟೇ ಕಾಂತಾರ 2 ಸಿನಿಮಾ ಬಗ್ಗೆ ನಿರ್ಮಾಪಕರು ಸುಳಿವು ನೀಡಿದ್ದಾರೆ. ಕಾಂತಾರ 2ಗಾಗಿ ಪ್ಲಾನ್ ಮಾಡ್ತಿದ್ದೇವೆ. ಆದ್ರೆ ಯಾವುದೇ ಟೈಮ್ ಲೈನ್ ಇಲ್ಲ ಎಂದು ಕಿರಗಂದೂರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.