ಬಾಲಿವುಡ್ ನಟಿ ಇಶಾ ಶರ್ವಾಣಿಯನ್ನು ವಂಚಿಸಲು ಯತ್ನಿಸಿದ ಮೂವರನ್ನು ಬಂಧಿಸಲಾಗಿದೆ. ಲಕ್ ಬೈ ಚಾನ್ಸ್, ಕಿಸ್ನಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಇಶಾ ಬಣ್ಣ ಹಚ್ಚಿದ್ದರು. ಆದರೆ ಕೆಲ ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಇಶಾ ಅವರನ್ನು ತೆರಿಗೆ ಅಧಿಕಾರಿಗಳೆಂದು ಕೆಲವರು ಪರಿಚಯಿಸಿಕೊಂಡಿದ್ದರು. ಇಶಾ ಅವರಿಗೆ ಕರೆ ಮಾಡಿದ ಖದೀಮರು, ನಾವು ತೆರಿಗೆ ಅಧಿಕಾರಿಗಳು, ನೀವು ಟ್ಯಾಕ್ಸ್ ಅನ್ನು ಬಾಕಿ ಉಳಿಸಿದ್ದೀರಿ ಎಂದು ತಿಳಿಸಿದ್ದರು. ಹಾಗೆಯೇ ಶೀಘ್ರದಲ್ಲೇ ತೆರಿಗೆ ಪಾವತಿಸದಿದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬೆದರಿಸಿದ್ದರು. ಅಷ್ಟೇ ಅಲ್ಲದೆ ಸುಮಾರು ಮೂರು ಲಕ್ಷ ರೂ. ತೆರಿಗೆಯನ್ನು ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸಫರ್ ಮೂಲಕ ಪಾವತಿಸುವಂತೆ ತಿಳಿಸಿದ್ದಾರೆ. ವಂಚಕರಿಂದ ನಿರಂತರ ಕರೆ ಬರುತ್ತಿರುವುದರಿಂದ ಸಂಶಯಗೊಂಡ ನಟಿ ಆಸ್ಟ್ರೇಲಿಯಾ ಪೊಲೀಸರಿಗೆ ದೂರು ನೀಡಿದ್ದರು ಈ ವಂಚಕರ ಬೆನ್ನು ಹತ್ತಿದ ಸೈಬರ್ ಕ್ರೈಮ್ ಯುನಿಟ್ಗೆ ಅಚ್ಚರಿಯೊಂದು ಕಾದಿತ್ತು. ಏಕೆಂದರೆ ಇಶಾ ಅವರಿಗೆ ದೆಹಲಿಯಿಂದ ಕರೆ ಮಾಡಲಾಗಿತ್ತು. ಕಾಲ್ ಸೆಂಟರ್ನಿಂದ ಕಾಲ್ ಸ್ಪೂಫಿಂಗ್ ಮೂಲಕ ಇಶಾ ಅವರಿಗೆ ಕರೆ ಮಾಡಿ ತೆರಿಗೆ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು. ಇದೀಗ ವಂಚಕರ ಜಾಲವನ್ನು ಬೇಧಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅಲ್ಲದೆ ಇಂತಹದೊಂದು ದಂಧೆಯ ಹಿಂದಿರುವ ಇನ್ನೂ ಹಲವರಿಗಾಗಿ ಬಲೆ ಬೀಸಿದ್ದಾರೆ. ನಟಿ ಇಶಾ ಶರ್ವಾಣಿ (PC: Isha sharvani FB) ನಟಿ ಇಶಾ ಶರ್ವಾಣಿ ನಟಿ ಇಶಾ ಶರ್ವಾಣಿ