Darshan-Umapathy: ಜೊತೆಗೆ ಕಾಣಿಸಿಕೊಂಡ ದರ್ಶನ್-ಉಮಾಪತಿ: ವಂಚನೆ ಯತ್ನ ಪ್ರಕರಣಕ್ಕೆ ತೆರೆ..?
ನಿರ್ಮಾಪಕ ಉಮಾಪತಿ ಹಾಗೂ ನಟ ದರ್ಶನ್ ಅವರ ಹೆಸರು ಬಳಸಿಕೊಂಡು 25 ಕೋಟಿ ವಂಚನೆ ಯತ್ನ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ನಡೆದಿದೆ. ಕಳೆದ ಕೆಲ ದಿನಗಳಿಂದ ದರ್ಶನ್ ಹಾಗೂ ಉಮಾಪತಿ ಅವರು ಪ್ರತ್ಯೇಕವಾಗಿ ಸುದ್ದಿಗೋಷ್ಠಿ ಮಾಡುತ್ತಿದ್ದರು, ಈಗ ಇವರು ಭೇಟಿಯಾಗಿದ್ದಾರಂತೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ 25 ಕೋಟಿ ವಂಚನೆ ಯತ್ನ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಈಗ ಯಶಸ್ವಿಯಾಗಿದೆಯಂತೆ.
2/ 9
ಕಳೆದ 2-3 ದಿನಗಳಿಂದ ಪ್ರತ್ಯೇಕವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಈಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
3/ 9
ಅಜ್ಞಾತ ಸ್ಥಳದಲ್ಲಿ ಇಂದು ದರ್ಶನ್ ಹಾಗೂ ಉಮಾಪತಿ ಅವರು ಭೇಟಿ ಮಾಡಿದ್ದಾರಂತೆ.
4/ 9
25 ಕೋಟಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿಂತೆ ಈ ಇಬ್ಬರೂ ಮಾತುಕತೆ ನಡೆಸಿದ್ದು, ವಂಚನೆ ಪ್ರಕರಣಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ ಎನ್ನಲಾಗುತ್ತಿದೆ.
5/ 9
ಅರುಣ ಕುಮಾರಿ ಎನ್ನುವ ಮಹಿಳೆ ಈ ಎಲ್ಲದಕ್ಕೂ ಕಾರಣ ಎಂದು ಆರೋಪಿಸಲಾಗತ್ತಿದೆ. ಇನ್ನು ಈ ಮಹಿಳೆ ಮಾತ್ರ ನಿರ್ಮಾಪಕ ಉಮಾಪತಿ ಅವರ ಹೆಸರು ಹೇಳುತ್ತಿದ್ದರು.
6/ 9
ಇದರಿಂದಾಗಿ ಮೊದಲು ಉಮಾಪತಿ ಅವರ ಹೆಸರೇ ಎಲ್ಲ ಕಡೆ ಕೇಳಿ ಬರುತ್ತಿದೆ ಎಂದಿದ್ದ ದರ್ಶನ್, ಈ ಪ್ರಕರಣದಲ್ಲಿ ಯಾರೇ ಇದ್ದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದರು.
7/ 9
ಉಮಾಪತಿ ಅವರು ಅರುಣಾ ಕುಮಾರಿ ಅವರ ವಿರುದ್ಧ ದೂರು ನೀಡಿ, ಪೊಲೀಸ್ ತನಿಖೆಯಿಂದ ಎಲ್ಲ ಸತ್ಯ ತಿಳಿಯಲಿದೆ ಎನ್ನುತ್ತಿದ್ದಂತೆಯೇ ದರ್ಶನ್ ಸಹ ಉಮಾಪತಿ ನಮ್ಮ ನಿರ್ಮಾಪಕರು ಎಂದು ಹೇಳಲಾರಂಭಿಸಿದರು.
8/ 9
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದ್ದ ಗೊಂದಲವನ್ನು ದರ್ಶನ್ ಹಾಗೂ ಉಮಾಪತಿ ಮಾತನಾಡುವ ಮೂಲಕ ಬಗೆಹರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
9/ 9
ಈ ಕುರಿತಂತೆ ನಾಳೆ ದರ್ಶನ್ ಹಾಗೂ ಉಮಾಪತಿ ಅವರೇ ಸುದ್ದಿಗೋಷ್ಠಿ ಮಾಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
First published:
19