Shilpa Shetty: ಶಿಲ್ಪಾ ಶೆಟ್ಟಿ ಮನೆಯಲ್ಲಿ ಗಣೇಶೋತ್ಸವ ಸಂಭ್ರಮ: ಹಳದಿ ಬಣ್ಣದ ಬಟ್ಟೆ ತೊಟ್ಟು ಟ್ರೆಂಡ್​ ಆದ ಕುಂದ್ರಾ ಕುಟುಂಬ..!

ನಟಿ ಶಿಲ್ಪಾ ಶೆಟ್ಟಿ ವಿವಾಹವಾದ ನಂತರ ಗಂಡನ ಮನೆಯಲ್ಲಿ ಆಚರಿಸುತ್ತಿರುವ 10ನೇ ಗಣೇಶೋತ್ಸವ. ಪ್ರತಿ ವರ್ಷ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಹಬ್ಬಕ್ಕೆ ಹಳದಿ ಬಣ್ಣದ ಬಟ್ಟೆಯ ಥೀಮ್​ ಆಯ್ಕೆ ಮಾಡಿಕೊಂಡಿದ್ದ ಶಿಲ್ಪಾ, ಗಂಡ ಹಾಗೂ ಮಗೊಂದಿಗೆ ವಿನ್ಯಾಸಿತ ಹಳದಿ ಬಣ್ಣದ ಬಟ್ಟೆ ತೊಟ್ಟು ಟ್ರೆಂಡ್​ ಆಗಿದ್ದಾರೆ. ಅಲ್ಲದೆ ಮುಂಬೈನಲ್ಲಿ ಅದ್ಧೂರಿಯಾಗಿ ಆಚರಿಸಲಾದ ಈ ಹಬ್ಬದಲ್ಲಿ ಶಿಲ್ಪಾ ಅವರ ತಂಗಿ ಶಮಿತಾ ಹಾಗೂ ಅವರ ಅಮ್ಮ ಸಹ ಭಾಗಿಯಾಗಿದ್ದು ವಿಶೇಷವಾಗಿತ್ತು. (ಚಿತ್ರಗಳು ಕೃಪೆ: ಶಿಲ್ಪಾಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

First published: