ಬೀಚ್ ವೆಕೇಷನ್ ಇಷ್ಟಪಡದವರು ಯಾರಿದ್ದಾರೆ ಹೇಳಿ? ಎಲ್ಲರಿಗೂ ನೀರು, ಬೀಚ್ ಅಂದ್ರೆ ಇಷ್ಟ. ಬಾಲಿವುಡ್ ನಟಿಯರಿಗಂತೂ ಬೀಚ್ ವೆಕೇಷನ್ ಫೇವರಿಟ್. ನಟಿ ಲಕ್ಷ್ಮಿ ರಾಯ್ ಅವರ ವೆಕೇಷನ್ ಫೋಟೋ ನೋಡಿದರೆ ನೀವೂ ಸ್ವಲ್ಪ ಬೀಚ್ ಸುತ್ತಾಡೋ ಮನಸು ಮಾಡಬಹುದು. ಕಾರಣ ಅವರ ವೆಕೇಷನ್ ಫ್ಯಾಷನ್ ಗೋಲ್ಸ್ ಸಖತ್ತಾಗಿದೆ. ಲಕ್ಷ್ಮಿ ಅವರು ಟೀಲ್ ಈಜುಡುಗೆ ಟಾಪ್ ಮತ್ತು ಹೂವಿನ ಸರೋಂಗ್‌ನಲ್ಲಿ ಪೋಸ್ ಕೊಟ್ಟಿದ್ದಾರೆ. ಆಕಾಶ ನೀಲಿ ಬಣ್ಣದ ಬ್ಯಾಗ್ರೌಂಡ್ನಲ್ಲಿ ಸ್ಟೈಲ್ ಆಗಿ ಕಾಣಿಸಿದ್ದಾರೆ. ಮರಳು ತುಂಬಿರುವ ಹಿನ್ನಲೆಯಲ್ಲಿ ತೆಂಗಿನ ತೋಪಿನಲ್ಲಿ ನಟಿ ಸೂಪರ್ ಆಗಿ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ಹಳದಿ ಬಣ್ಣದ ಈಜುಡುಗೆ ಧರಿಸಿದ್ದರು. ನಟಿ ಲಕ್ಷ್ಮಿ ರಾಯ್ ಮೆರೂನ್ ಬಣ್ಣದ ಈಜುಡುಗೆ ಧರಿಸಿ ಪೋಸ್ ಕೊಟ್ಟಿದ್ದಾರೆ. ಇದಕ್ಕೆ ಸ್ಟೈಲಿಷ್ ಗಾಗಲ್ಸ್ ಧರಿಸಿ ಟ್ರೆಂಡಿಯಾಗಿ ಕಾಣಿಸಿದ್ದಾರೆ. ಇನ್ನೊಂದು ಫೋಟೋದಲ್ಲಿ ಬ್ಲ್ಯಾಕ್ ಈಜುಡುಗೆ, ಬ್ಲ್ಯಾಕ್ ಸನ್ಗ್ಲಾಸ್ ಹಾಕಿ ಕಡಲ ತೀರದ ಗಾಳಿಯನ್ನು ಎಂಜಾಯ್ ಮಾಡಿದ್ದಾರೆ. ಫೋಟೋ ಸುಂದರವಾಗಿ ಮೂಡಿ ಬಂದಿದೆ. ನಟಿ ಲಕ್ಷ್ಮಿ ರಾಯ್ ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಹಲವು ಸೌತ್ ಇಂಡಿಯನ್ ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ. ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ಬಂದಿದೆ. ನಟಿಯ ವೆಕೇಷನ್ ಫೋಟೋಸ್ ಮುಖ್ಯವಾಗಿ ವೆಕೇಷನ್ ಫ್ಯಾಷನ್ ಗೋಲ್ಸ್ ಸೆಟ್ ಮಾಡುತ್ತದೆ. ಬೀಚ್ ವೆಕೇಷನ್ ಪ್ಲಾನ್ ಮಾಡ್ತಿದ್ರೆ ಈ ಉಡುಗೆ ಮಿಸ್ ಮಾಡಬೇಡಿ. ಒಂಟಿ ಮರದ ಮುಂದೆ ಗುಲಾಬಿ ರಂಗಿನ ಈಜುಡುಗೆಯಲ್ಲಿ ಪೋಸ್ ಕೊಟ್ಟ ಲಕ್ಷ್ಮಿ ರಾಯ್ ಸ್ಟೈಲ್ಗೆ ಯುವಜನರು ಫಿದಾ ಆಗಿದ್ದಾರೆ. ಮೇಜರ್ ಟ್ರೆಂಡ್ ಸೆಟ್ ಮಾಡಿದ್ದಾರೆ ಈ ನಟಿ. ಕೆಲವೇ ಸಿನಿಮಾ ಮಾಡಿದ್ದರು ಲಕ್ಷ್ಮಿ ಸೌತ್ನಲ್ಲಿ ಚಿರಪರಿಚಿತೆ. ಹಿಟ್ ಸಿನಿಮಾಗಳಲ್ಲಿ ಟಾಪ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.