Cannes Film Festival 2022: ಕ್ಯಾನ್ ಸಿನಿಮೋತ್ಸವದಲ್ಲಿ ಪ್ರಶಸ್ತಿ ಗೆದ್ದು ಬೀಗಿದ ಭಾರತದ 10 ಚಿತ್ರಗಳಿವು
Indian films: ಕ್ಯಾನ್ ಸಿನಿಮೋತ್ಸವ ಒಂದು ಹೆಮ್ಮೆಯ ಗರಿ. ಈ ಬಾರಿ ಭಾರತವನ್ನು ಗೌರವ ರಾಷ್ಟ್ರ ಎಂದು ಪರಿಗಣಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಮ್ಮ ನಟ, ನಟಿಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದು ಒಂದೆಡೆಯಾದರೆ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸಹ ನೀಡಲಾಗುತ್ತದೆ. ಇಷ್ಟು ವರ್ಷಗಳಲ್ಲಿ ಪ್ರಶಸ್ತಿ ಪಡೆದ ಭಾರತದ 10 ಚಿತ್ರಗಳ ಲಿಸ್ಟ್ ಇಲ್ಲಿದೆ.
ಅ ನೈಟ್ ಆಫ್ ನೋಯಿಂಗ್ ನಥಿಂಗ್ ಪಾಯಲ್ ಕಾಪಾಡಿಯಾ ಅವರ ಡಾಕ್ಯೂಮೆಂಟರಿಯಾಗಿದ್ದು, 2021ರಲ್ಲಿ ಬೆಸ್ಟ್ ಡಾಕ್ಯೂಮೆಂಟರಿ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ. ಇದರಲ್ಲಿ ಕಾಲೇಜಿನಿಂದ ಹೊರ ಹಾಕಲ್ಪಟ್ಟ ತನ್ನ ಪ್ರೇಮಿಗೆ ನಾಯಕಿ ಪತ್ರ ಬರೆಯುತ್ತಾಳೆ.
2/ 10
ವಿಕ್ಕಿ ಕೌಶಲ್ ಹಾಗೂ ಶ್ವೇತಾ ತ್ರಿಪಾಠಿ ಅಭಿನಯದ 2015ರಲ್ಲಿ ಕ್ಯಾನ್ ಉತ್ಸವದಲ್ಲಿ 2 ಪ್ರಶಸ್ತಿಗಳನ್ನು ಬಾಜಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
3/ 10
ರಿತೇಶ್ ಬಾತ್ರಾ ಅವರ ಈ ವಿಭಿನ್ನ ಕಥೆಯುಳ್ಳ ಲಂಚ್ ಭಾಕ್ಸ್ ಸಹ ಕ್ಯಾನ್ ಸಿನಿಮೋತ್ಸವದಲ್ಲಿ ಪ್ರಶಸ್ತಿ ಪಡೆದಿದ್ದು,ಈ ಚಿತ್ರದಲ್ಲಿ ಒಂಟಿಯಾಗಿರುವ ವ್ಯಕ್ತಿ ಹಾಗೂ ಮದುವೆಯಾಗಿ ಸಹ ಸಂತೋಷವಾಗಿರದ ಮಹಿಳೆಯ ನಡುವೆ ಲಂಚ್ ಬಾಕ್ಸ್ ಮೂಲಕ ನಡೆಯುವ ಪ್ರೇಮ ಕಥೆಯೇ ಇದರ ಹಂದರ.
4/ 10
ಮಿರಳಿ ನಾರಾಯಣ ಅವರ ಈ ಮಾರಾನಾ ಸಿಂಹಾಸನಂ ಮಲಯಾಳಂ ಚಿತ್ರ, ತಪ್ಪು ಮಾಡದ ವ್ಯಕ್ತಿಯೊಬ್ಬರಿಗೆ ಜೈಲು ಶಿಕ್ಷೆ ಆಗುವುದು ಈ ಚಿತ್ರದ ಸ್ಟೋರಿ.
5/ 10
ಮೀರಾ ನಾಯರ್ ನಿರ್ದೇಶನದ ಈ ಚಿತ್ರ ಕಸ ಎತ್ತುವ ಹುಡುಗ ಹಾಗೂ ಲೈಂಗಿಕ ಕಾರ್ಯಕರ್ತೆಯರ ನಡುವೆ ಬೆಳೆಯುವ ವಿಭಿನ್ನ ಸಂಬಂಧವನ್ನು ಸಾರಿ ಹೇಳುತ್ತದೆ.. ಈ ಸಲಾಂ ಬಾಂಬೆ ಚಿತ್ರ ಸಹ ಪ್ರಶಸ್ತಿಯನ್ನು ಪಡೆದಿದೆ.
6/ 10
ಬೆಂಗಾಲಿ ಮಧ್ಯಮ ವರ್ಗದ ಕುಟುಂಬದ ಕಥೆ ಹೇಳುವ ಈ ಖಾರ್ಜಿ ಚಿತ್ರ , 1983ರಲ್ಲಿ ಕ್ಯಾನ್ ಪ್ರಶಸ್ತಿ ಪಡೆದಿದೆ.
7/ 10
ಸತ್ಯಜಿತ್ ರೇಯ ಮೊದಲ ಚಿತ್ರ ಪಥೆರ್ ಪಾಂಚಾಲಿ ಸಿನೆಮಾ ಭಾರತದ ಆಗಿನ ಜೀವನಶೈಲಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಚಿತ್ರಕ್ಕೆ ಸಹ ಕ್ಯಾನ್ ಪ್ರಶ್ತಿ ಲಭಿಸಿದೆ.
8/ 10
ರಾಜ್ ಕುಮಾರ್ ನಿರ್ಮಾಣದ ಈ ಚಿತ್ರ ಬಿಕ್ಷೆ ಬೇಡಲು ಒತ್ತಾಯ ಪೂರ್ವಕವಾಗಿ ಕಳುಹಿಸಲ್ಪಟ್ಟ ಪುಟ್ಟ ಮಕ್ಕಳ ಕಥೆಯಾಗಿದೆ. ಇದರಲ್ಲಿ ಬಾಲಕನ ಪಾತ್ರ ಮಾಡಿದ ಪುಟ್ಟ ನಟನಿಗೆ ಕ್ಯಾನ್ ಪ್ರಶಸ್ತಿ ಒಲಿದು ಬಂದಿತ್ತು.
9/ 10
ಹಳ್ಳಿಯಿಂದ ಸಿಟಿಗೆ ಒತ್ತಾಯ ಪೂರ್ವಕವಾಗಿ ಬಂದ ಕುಟುಂಬದ ಕಥೆಯೇ ಈ ದೋ ಬೀಘಾ ಝಮೀನ್. ಇದೊಂದು ಅದ್ಬುತವಾದ ಚಿತ್ರವಾಗಿದ್ದು, ಕ್ಯಾನ್ ಪ್ರಶಸ್ತಿ ಪಡೆದಿದೆ.
10/ 10
ನೀಚ ನಗರ್ ಚಿತ್ರ 1946ರಲ್ಲಿ ಪ್ರಶ್ತಿ ಗೆದ್ದು ಬೀಗಿತ್ತು. ಬೆಸ್ಟ್ ಫಿಲ್ಮ್ ಅವಾರ್ಡ್ ಅನ್ನು ಈ ಚಿತ್ರಕ್ಕೆ ಕ್ಯಾನ್ ನೀಡಿತ್ತು.