ಬೆಂಗಳೂರಿನ ನಂತರ ಕರ್ನಾಟಕದಲ್ಲಿ ಎರಡನೇ ಅತಿ ದೊಡ್ಡ ಎಂದು ಕರೆಸಿಕೊಳ್ಳುವ ಧಾರವಾಡ ಶೈಕ್ಷಣಿಕ ಜಿಲ್ಲೆಯಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕೃಷಿ ವಿಶ್ವವಿದ್ಯಾಲಯ ಧಾರವಾಡ ಹೆಚ್ಚು ಪ್ರಸಿದ್ಧಿ ಹೊಂದಿದೆ
2/ 7
ವಿದ್ಯಾ ಕಾಶಿ ಮತ್ತು ಶಿಕ್ಷಣ ಕಾಶಿ ಎಂಬ ಎರಡು ಬಿರುದುಗಳನ್ನು ಇದು ಹೊಂದಿದೆ. ಇಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ. ಹಲವಾರು ಉನ್ನತ ಶಿಕ್ಷಣ ಕೋರ್ಸ್ಗಳು ಇಲ್ಲಿ ಲಭ್ಯವಿದೆ.
3/ 7
ಧಾರವಾಡವು ವಿವಿಧ ಕ್ಷೇತ್ರಕ್ಕೆ ತಮ್ಮ ವಿದ್ಯಾರ್ಥಿಗಳನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ರೂಪಿಸಿದೆ. ಶಿಕ್ಷಣವನ್ನು ನೀಡುವುದರೊಟ್ಟಿಗೆ ಸ್ಪರ್ಧಾತ್ಮಕ ಶಿಕ್ಷಣವನ್ನೂ ಸಹ ಇಲ್ಲಿ ನೀಡಲಾಗುತ್ತದೆ.
4/ 7
30 ಕ್ಕೂ ಹೆಚ್ಚು ಕೋಚಿಂಗ್ ಸೆಂಟರ್ಗಳು ಧಾರವಾಡದಲ್ಲಿ ಲಭ್ಯವಿದೆ. IAS, KAS, IIT, JEE,NEET ಬ್ಯಾಂಕಿಂಗ್ ಪರೀಕ್ಷೆ ಇನ್ನಿತರ ಪ್ರಮುಖ ತರಬೇತಿಗಳನ್ನು ಇಲ್ಲಿ ನೀಡಲಾಗುತ್ತದೆ.
5/ 7
ಹಲವಾರು ರಾಜ್ಯಗಳಿಂದ ವಿದ್ಯಾರ್ಥಿಗಳು ಕಲಿಕೆಗೆಂದೆ ಆಗಮಿಸಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. 5 ಎಂಜಿನಿಯರಿಂಗ್ ಕಾಲೇಜು ಮತ್ತು 4 ವೈದ್ಯಕೀಯ ಕಾಲೇಜು ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಕಾಲೇಜುಗಳನ್ನು ಹೊಂದಿದೆ.
6/ 7
ಧಾರವಾಡವು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಟಿ) ಮತ್ತು ಕರ್ನಾಟಕ ವಿಶ್ವವಿದ್ಯಾಲಯವನ್ನು ಹೊಂದಿದೆ. ಹಲವಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
7/ 7
ನೀವು ನಿಮ್ಮ ಶಿಕ್ಷಣಕ್ಕಾಗಿ ಕಾಲೇಜು ಹುಡುಕಾಟದಲ್ಲಿದ್ದರೆ ಕರ್ನಾಟಕ ವಿಶ್ವವಿದ್ಯಾಲಯ ಒಂದು ಉತ್ತಮ ಸ್ಥಳವಾಗಿದ್ದು ನೀವು ನಿಮಗೆ ಬೇಕಾದ ಕೋರ್ಸ್ ಆಯ್ಕೆ ಮಾಡಬಹುದು.