ಹೀರೋಗಳಾದ ಬಡದಾಳ ಗ್ರಾಮಸ್ಥರು; ನೀರು ಪಾಲಾಗುತ್ತಿದ್ದವರನ್ನು ಕಾಪಾಡಿದ ಸಾಹಸಮಯ ದೃಶ್ಯಗಳು ಇಲ್ಲಿವೆ
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬಡದಾಳ ಹಳ್ಳ ಉಕ್ಕಿ ಹರಿಯುತ್ತಿದೆ. ಆದರೂ ವಾಹನವೊಂದರ ಮೂಲಕ ಹಳ್ಳದಾಟಲು ಯತ್ನಿಸಿದಾಗ ವಾಹನ ಸಮೇತ ಐದು ಮಂದಿ ಹಳ್ಳದ ಮಧ್ಯದಲ್ಲಿ ಸಿಲುಕಿದ್ದಾರೆ.
ಕಲಬುರ್ಗಿ ಜಿಲ್ಲೆಯಲ್ಲಿ ಪ್ರತಿ ಬಾರಿಯ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗುತ್ತದೆ. ನೆರೆ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹಳ್ಳ-ಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ.
2/ 10
ಹೀಗೆ ರಭಸವಾಗಿ ಹರಿಯುತಿದ್ದ ಹಳ್ಳವನ್ನು ದಾಟಲು ಹೋಗಿ ಜೀವವನ್ನು ಅಪಾಯಕ್ಕೆ ಒಡ್ಡಿಕೊಂಡಿದ್ದ ಐದು ಮಂದಿಯನ್ನು ಗ್ರಾಮಸ್ಥರೇ ರಕ್ಷಿಸಿದ್ದಾರೆ.
3/ 10
ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವಾಹನವನ್ನು ಗ್ರಾಮಸ್ಥರೇ ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.
4/ 10
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬಡದಾಳ ಹಳ್ಳ ಉಕ್ಕಿ ಹರಿಯುತ್ತಿದೆ. ಆದರೂ ವಾಹನವೊಂದರ ಮೂಲಕ ಹಳ್ಳದಾಟಲು ಯತ್ನಿಸಿದಾಗ ವಾಹನ ಸಮೇತ ಐದು ಮಂದಿ ಹಳ್ಳದ ಮಧ್ಯದಲ್ಲಿ ಸಿಲುಕಿದ್ದಾರೆ.
5/ 10
ಇದನ್ನು ಗಮನಿಸಿದ ಬಡದಾಳ ಗ್ರಾಮಸ್ಥರು ವಾಹನದಲ್ಲಿ ಕೊಚ್ಚಿ ಹೋಗುತ್ತಿದ್ದ 5 ಮಂದಿಯನ್ನೂ ರಕ್ಷಿಸಿದ್ದಾರೆ. ಬಡದಾಳ ಹಳ್ಳದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ.
6/ 10
ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಹಗ್ಗವನ್ನು ವಾಹನ ಮತ್ತು ಮರಕ್ಕೆ ಕಟ್ಟಿ ಕೊಚ್ಚಿ ಹೋಗದಂತೆ ತಡೆದಿದ್ದಾರೆ.
7/ 10
ನಂತರ ವಾಹನದಲ್ಲಿದ್ದ ಐವರನ್ನು ಹಗ್ಗದ ಸಹಾಯದಿಂದ ರಕ್ಷಿಸಿ ಹೊರ ಕರೆತಂದಿದ್ದಾರೆ.
8/ 10
ಸ್ಥಳೀಯರ ಸಾಹಸದಿಂದ ಐವರು ಬದುಕುಳಿದಿದ್ದಾರೆ.
9/ 10
ರಕ್ಷಣಾ ಕಾರ್ಯದ ರೋಚಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
10/ 10
ಬಡದಾಳ ಗ್ರಾಮಸ್ಥರ ಸಾಹಸಕ್ಕೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ. ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.