ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದೆ ತುಂಗಭದ್ರಾ ಡ್ಯಾಂ, ಕಣ್ಮನ ಸೆಳೆಯುವ ಮೋಹಕ ದೃಶ್ಯ ನೋಡಿ !

ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾದ ಪರಿಣಾಮ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ತುಂಗಭದ್ರಾ ಅಣೆಕಟ್ಟು ಕೂಡಾ ತುಂಬಿದ್ದು ಈಗಂತೂ ಬಣ್ಣಬಣ್ಣದ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಮಳೆಯ ನಡುವೆಯೂ ಈ ವಿದ್ಯುದೀಪಗಳ ಸೊಬಗನ್ನು ಕಣ್ತುಂಬಿಕೊಳ್ಳೋಕೆ ಜನ ಆಗಮಿಸುತ್ತಿದ್ದಾರೆ. ಕಣ್ಮನ ಸೆಳೆಯುವ ಈ ಮನಮೋಹಕ ದೃಶ್ಯಗಳನ್ನು ನೀವೂ ನೋಡಿ.

First published:

 • 17

  ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದೆ ತುಂಗಭದ್ರಾ ಡ್ಯಾಂ, ಕಣ್ಮನ ಸೆಳೆಯುವ ಮೋಹಕ ದೃಶ್ಯ ನೋಡಿ !

  ಇದು ನಿಜವಾಗಿಯೂ ನೋಡುಗರ ಕಣ್ಮನ ಸೆಳೆಯುತ್ತದೆ, ತುಂಗಭದ್ರಾ ಜಲಾಶದಲ್ಲಿ ಧುಮ್ಮಿಕ್ಕುವ ಜಲಧಾರೆ ಒಂದು ಕಡೆಯಾದರೆ ಇನ್ನೊಂದು ಸಂಜೆಯ ವೇಳೆ ಜಲಾಶಯಕ್ಕೆ ಅಳವಡಿಸಿದ ವಿದ್ಯುತ್ ಅಲಂಕಾರವು ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ.

  MORE
  GALLERIES

 • 27

  ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದೆ ತುಂಗಭದ್ರಾ ಡ್ಯಾಂ, ಕಣ್ಮನ ಸೆಳೆಯುವ ಮೋಹಕ ದೃಶ್ಯ ನೋಡಿ !

  ಮಲೆನಾಡಿನಲ್ಲಿ ಹುಟ್ಟಿ ಆಂಧ್ರಪ್ರದೇಶ ಮಂತ್ರಾಲಯದ ನಂತರದಲ್ಲಿ ಕೃಷ್ಣಾ ನದಿಗೆ ಸೇರುವ ತುಂಗಭದ್ರಾ ನದಿಯು ಯಾವಾಗಲೂ ಕರ್ನಾಟಕ, ಆಂಧ್ರ ಹಾಗು ತೆಲಂಗಾಣ ಭಾಗದ ಜೀವನಾಡಿ.

  MORE
  GALLERIES

 • 37

  ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದೆ ತುಂಗಭದ್ರಾ ಡ್ಯಾಂ, ಕಣ್ಮನ ಸೆಳೆಯುವ ಮೋಹಕ ದೃಶ್ಯ ನೋಡಿ !

  ಮಲೆನಾಡಿನಲ್ಲಿ ಭಾರಿ ಮಳೆಯಾದ ಹಿನ್ನಲೆಯಲ್ಲಿ ತುಂಗಭದ್ರಾ ನದಿಯೂ ಈಗ ಮೈದುಂಬಿ ಹರಿಯುತ್ತಿದೆ. ತುಂಗಭದ್ರಾ ನದಿಗೆ ಮುನಿರಾಬಾದ್ ಹಾಗು ಹೊಸಪೇಟೆಯ ಮಧ್ಯೆ ಜಲಾಶಯ ನಿರ್ಮಿಸಲಾಗಿದೆ.

  MORE
  GALLERIES

 • 47

  ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದೆ ತುಂಗಭದ್ರಾ ಡ್ಯಾಂ, ಕಣ್ಮನ ಸೆಳೆಯುವ ಮೋಹಕ ದೃಶ್ಯ ನೋಡಿ !

  34 ಕ್ರೆಸ್ಟ್ ಗೇಟ್ ಹೊಂದಿರುವ ತುಂಗಭದ್ರಾ ಜಲಾಶಯದಿಂದ ಈಗ ಅಪಾರ ನೀರು ನದಿಗೆ ಬಿಡಲಾಗುತ್ತಿದೆ, ಜಲಾಶಯಕ್ಕೆ 1.67 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ ಜಲಾಶಯದಿಂದ ಈಗ 1.40 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

  MORE
  GALLERIES

 • 57

  ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದೆ ತುಂಗಭದ್ರಾ ಡ್ಯಾಂ, ಕಣ್ಮನ ಸೆಳೆಯುವ ಮೋಹಕ ದೃಶ್ಯ ನೋಡಿ !

  ಕ್ರೆಸ್ಟ್ವಗೇಟ್ ಗಳ ಮುಖಾಂತರ ಧುಮ್ಮುಕ್ಕುವ ಜಲಧಾರೆಯನ್ನು ನೋಡಲು ಜನ ಸೇರಿರುತ್ತಾರೆ, ಅಪಾಯ ಲೆಕ್ಕಿಸಿದೆ ನದಿಯಲ್ಲಿಯಲ್ಲಿ ನಿಂತು ಫೋಟೊ ಕ್ಲಿಕ್ಕಿಸುವ ಸಾಹಸ ಮಾಡುತ್ತಿದ್ದಾರೆ.

  MORE
  GALLERIES

 • 67

  ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದೆ ತುಂಗಭದ್ರಾ ಡ್ಯಾಂ, ಕಣ್ಮನ ಸೆಳೆಯುವ ಮೋಹಕ ದೃಶ್ಯ ನೋಡಿ !

  ಈ ಮಧ್ಯೆ ಕ್ರೇಸ್ಟ್ ಗೇಟ್ ಗಳು ಸೇರಿದಂತೆ ಜಲಾಶಯದಲ್ಲಿ ಈಗ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ, ಬಣ್ಣ ಬಣ್ಣದ ದೀಪಾಲಂಕಾರವು ನೋಡಿಗರನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತಿದೆ. ದೀಪಾಲಂಕಾರದ ದೃಶ್ಯ ವೈಭವವು ಈಗ ಸಕತ್ ವೈರಲ್ ಆಗಿವೆ.

  MORE
  GALLERIES

 • 77

  ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದೆ ತುಂಗಭದ್ರಾ ಡ್ಯಾಂ, ಕಣ್ಮನ ಸೆಳೆಯುವ ಮೋಹಕ ದೃಶ್ಯ ನೋಡಿ !

  ಜಲಾಶಯದ ಪ್ರತಿಯೊಂದು ನೀರಿನ ಧಾರೆಯೂ ಒಂದೊಂದು ಬಣ್ಣವಿದೆ. ಇದು ಯಾವುದೋ ವಿದೇಶದ ದೃಶ್ಯವೇನೋ ಎನಿಸುವಷ್ಟು ವೈಭವದಿಂದ ಕಂಗೊಳಿಸುತ್ತಿದೆ.

  MORE
  GALLERIES