ಸಿಎಂ ಯಡಿಯೂರಪ್ಪ ಓದಿದ ಮಂಡ್ಯದ ಈ 131 ವರ್ಷದ ಹಳೆಯ ಶಾಲೆ ಈಗ ಮುಚ್ಚುವ ಸ್ಥಿತಿಯಲ್ಲಿ
ಮಂಡ್ಯ(ಆ. 31): ನಗರದ ಆನೆಕೆರೆ ಬೀದಿಯಲ್ಲಿರುವ ಸರ್ಕಾರಿ ಶಾಲೆ ಇದೀಗ ಮಕ್ಕಳಲ್ಲಿದೆ ಮುಚ್ಚುವ ಹಂತಕ್ಕೆ ಬಂದಿದೆ. ಸಿಎಂ ಯಡಿಯೂರಪ್ಪ ಮತ್ತು ಪಿಟೀಲ್ ಚೌಡಯ್ಯ ಮೊದಲಾದ ಗಣ್ಯರು ಓದಿದ ಈ ಶಾಲೆಗೆ ಇಂಥ ದುರ್ಗತಿ ಬಂದಿದ್ದು ದುರ್ವಿದೆಯೇ. (ವರದಿ: ರಾಘವೇಂದ್ರ ಗಂಜಾಂ) .
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಒಂದು ಕಾಲದಲ್ಲಿ ಓದಿದ ಶಾಲೆ ಈಗ ಮುಚ್ಚುವ ಹಂತಕ್ಕೆ ಬಂದಿದೆ. ಮಂಡ್ಯದ ಆನೆಕೆರೆ ಬೀದಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿಯ ಕೊರತೆ ಕಾಡುತ್ತಿದೆ.
2/ 9
ಯಡಿಯೂರಪ್ಪ ಅವರು 1955-56ರ ಸಾಲಿನಲ್ಲಿ ಈ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡಿದ್ದರು.
3/ 9
ಮಂಡ್ಯದಲ್ಲಿ ತಮ್ಮ ತಾತನ ಮನೆಯಲ್ಲಿದ್ದಾಗ ಯಡಿಯೂರಪ್ಪ ಈ ಶಾಲೆಗೆ ದಾಖಲಾಗಿದ್ದರು.
4/ 9
131 ವರ್ಷಗಳಷ್ಟು ಹಳೆಯದಾದ ಈ ಶಾಲೆಯಲ್ಲಿ ಅಂಬರೀಷ್ ಅವರ ತಾತ ಪಿಟೀಲು ಚೌಡಯ್ಯ ಕೂಡ ಓದಿದ್ದರೆನ್ನಲಾಗಿದೆ.
5/ 9
ಒಂದರಿಂದ ಏಳನೇ ತರಗತಿಯರೆಗೆ ಈ ಶಾಲೆ ಇದೆ. ಹಿಂದೆಲ್ಲಾ ನೂರಕ್ಕೂ ಹೆಚ್ಚು ಮಕ್ಕಳಿರುತ್ತಿದ್ದ ಈ ಶಾಲೆಯಲ್ಲಿ ಈಗ ಕೇವಲ 6 ಮಕ್ಕಳಿದ್ದಾರೆ.
6/ 9
ಒಂದರಿಂದ ಏಳನೇ ತರಗತಿಯವರೆಗೆ ಒಟ್ಟು ಕೇವಲ 6 ಮಕ್ಕಳಿದ್ದಾರೆ. ನಾಲ್ವರು ಶಿಕ್ಷಕರಿದ್ದಾರೆ.
7/ 9
ಈ ಶಾಲೆಗೆ ಮಕ್ಕಳ ದಾಖಲಾತಿ ಕೊರತೆಯಷ್ಟೇ ಅಲ್ಲ, ಆಡಳಿತ ವರ್ಗದ ನಿರ್ಲಕ್ಷ್ಯದಿಂದ ಕಟ್ಟಡ ಕೂಡ ಹಾಳಾಗುತ್ತಿದೆ.
8/ 9
ಶಾಲೆಯ ಹಾಜರಾತಿ ಪುಸ್ತಕದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಇರುವುದನ್ನು ಗಮನಿಸಬಹುದು.
9/ 9
ಮಂಡ್ಯದ ಆನೆಕೆರೆ ಬೀದಿಯಲ್ಲಿರುವ ಸರ್ಕಾರಿ ಶಾಲೆಯ 1955ರ ಸಾಲಿನ ಹಾಜರಾತಿ ಪುಸ್ತಕದಲ್ಲಿ 5ನೇ ತರಗತಿಯಲ್ಲಿದ್ದ ಯಡಿಯೂರಪ್ಪ ಅವರ ಹೆಸರು ನಮೂದಾಗಿರುವುದು.
First published:
19