ಕೊಡಗಿನಲ್ಲಿ ಸಚಿವರೇ ವಾಸ್ತವ್ಯ ಇದ್ದು ಹೋದರೂ ಬದಲಾಗದ ಮನೆ ಮತ್ತು ಊರು

ಕೊಡಗು: ವಿರಾಜಪೇಟೆಯ ರೇಷ್ಮೆ ಹಾಡಿಯಲ್ಲಿ 2015ರಲ್ಲಿ ಆಗಿನ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು ಗ್ರಾಮ ವಾಸ್ತವ್ಯ ಮಾಡಿದ್ದರು. ಸಮಸ್ಯೆಗಳ ಸರಮಾಲೆ ಇರುವ ಈ ಊರಿನ ಹಣೆಬರಹ ಸ್ವಲ್ಪವಾದರೂ ಬದಲಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ವಾಸ್ತವದಲ್ಲಿ ಐದು ವರ್ಷಗಳ ಬಳಿಕ ಊರಿನ ಸ್ಥಿತಿ ಹೇಗಿದೆ? ಇಲ್ಲಿದೆ ಒಂದು ಪುಟ್ಟ ರಿಪೋರ್ಟ್. (ವರದಿ: ರವಿ ಎಸ್ ಹಳ್ಳಿ)

First published:

 • 18

  ಕೊಡಗಿನಲ್ಲಿ ಸಚಿವರೇ ವಾಸ್ತವ್ಯ ಇದ್ದು ಹೋದರೂ ಬದಲಾಗದ ಮನೆ ಮತ್ತು ಊರು

  ಸಚಿವರೇ ನಮ್ಮೂರಿನಲ್ಲಿ ಉಳಿದುಕೊಳ್ಳಲು ಬರುತಿದ್ದಾರೆ. ಇನ್ಮುಂದೆ ನಮ್ಮೂರಿನ ಕಷ್ಟಗಳೆಲ್ಲಾ ದೂರವಾಗಿ ಬಿಡುತ್ತವೆ. ನಮ್ಮೂರಿಗೂ ಎಲ್ಲಾ ಸೌಲಭ್ಯಗಳು ದೊರಕುತ್ತವೆ ಅಂತಾ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ರೇಷ್ಮೆ ಹಾಡಿಯ ಜನರು ಕನಸು ಕಂಡಿದ್ದರು. ಆದರೆ ಊರಿನ ಕಥೆ ಆಗಿರಲಿ, ಸಚಿವ ವಾಸ್ತವ್ಯ ಮಾಡಿ ಐದು ವರ್ಷಗಳೇ ಕಳೆದರೂ ಸಚಿವ ವಾಸ್ತವ್ಯ ಮಾಡಿದ್ದ ಇಳಿವಯಸ್ಸಿನ ಆ ಅಜ್ಜಿಗೂ ಒಂದು ಸೂರು ಸಿಕ್ಕಿಲ್ಲ.

  MORE
  GALLERIES

 • 28

  ಕೊಡಗಿನಲ್ಲಿ ಸಚಿವರೇ ವಾಸ್ತವ್ಯ ಇದ್ದು ಹೋದರೂ ಬದಲಾಗದ ಮನೆ ಮತ್ತು ಊರು

  ಸುಮಾರು 170 ಕುಟುಂಬಗಳಿರುವ ಈ ಹಾಡಿಯ ಯರವರ ಗಂಗಮ್ಮ ಎಂಬುವರ ಮನೆಯಲ್ಲಿ 2015 ರಲ್ಲಿ ಅಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಆಂಜನೇಯ ಗ್ರಾಮ ವಾಸ್ತವ್ಯ ಮಾಡಿದ್ದರು. ಬಿದಿರು ಬೊಂಬುಗಳ ಸೀಳಿ ಮರೆ ಮಾಡಿ, ಅದಕ್ಕೊಂದು ಪ್ಲಾಸ್ಟಿಕ್ ಟಾರ್ಪಾಲ್ ಹೊದಿಸಿ ಮಾಡಿಕೊಂಡಿರುವ ಗುಡಿಸಿಲಲ್ಲೇ ಗಂಗಮ್ಮ ಇಂದಿಗೂ ಇದ್ದಾರೆ.

  MORE
  GALLERIES

 • 38

  ಕೊಡಗಿನಲ್ಲಿ ಸಚಿವರೇ ವಾಸ್ತವ್ಯ ಇದ್ದು ಹೋದರೂ ಬದಲಾಗದ ಮನೆ ಮತ್ತು ಊರು

  ಮನೆ ಮಾಡಿಕೊಡುವುದಾಗಿ ಹೇಳಿ ಐದು ವರ್ಷವಾದರೂ ಇಂದಿಗೂ ಮನೆ ಆಗಿಲ್ಲ. ವಿದ್ಯುತ್ ಬೆಳಕು ಸಂಪರ್ಕವೂ ಇಲ್ಲ.

  MORE
  GALLERIES

 • 48

  ಕೊಡಗಿನಲ್ಲಿ ಸಚಿವರೇ ವಾಸ್ತವ್ಯ ಇದ್ದು ಹೋದರೂ ಬದಲಾಗದ ಮನೆ ಮತ್ತು ಊರು

  ಸಚಿವರು ಬಂದಾಗ ಅಧಿಕಾರಿಗಳು ಎರಡು ಲ್ಯಾಂಪ್ ಲೈಟ್ಗಳನ್ನು ತಂದಿದ್ದರು. ಸಚಿವರು ಹೋಗುವಾಗ ಅವುಗಳನ್ನು ತೆಗೆದುಕೊಂಡು ಹೋದರು ಎನ್ನುತ್ತಾರೆ ಗಂಗಮ್ಮ.

  MORE
  GALLERIES

 • 58

  ಕೊಡಗಿನಲ್ಲಿ ಸಚಿವರೇ ವಾಸ್ತವ್ಯ ಇದ್ದು ಹೋದರೂ ಬದಲಾಗದ ಮನೆ ಮತ್ತು ಊರು

  ಗ್ರಾಮಕ್ಕೆ ಹೋಗಬೇಕಾದರೆ ಕೆಸರು ತುಂಬಿ ನಡೆದಾಡಲೂ ಸಾಧ್ಯವಾಗದಂತ ಗದ್ದೆ ಬದುಗಳಲ್ಲೇ ಸಾಗಬೇಕು. ರಸ್ತೆಗೆ ಅಡ್ಡಲಾಗಿ ದೊಡ್ಡ ಹಳ್ಳವೊಂದಿದ್ದು ಮಳೆಗಾಲದಲ್ಲಿ ತುಂಬಿಹರಿಯುತ್ತದೆ.

  MORE
  GALLERIES

 • 68

  ಕೊಡಗಿನಲ್ಲಿ ಸಚಿವರೇ ವಾಸ್ತವ್ಯ ಇದ್ದು ಹೋದರೂ ಬದಲಾಗದ ಮನೆ ಮತ್ತು ಊರು

  ಅಂದು ಸಚಿವ ಆಂಜನೇಯ ಈ ಹಾಡಿಯಲ್ಲಿ ವಾಸ್ತವ್ಯ ಮಾಡಲು ಬಂದಾಗ ಈ ಹಳ್ಳಕ್ಕೆ ಮಣ್ಣು ಹಾಕಿ ಮುಚ್ಚಿ ರಸ್ತೆ ನಿರ್ಮಿಸಲಾಗಿತ್ತು. ಆದರೆ ಮಳೆ ಬರುತ್ತಿದ್ದಂತೆ ಅದೆಲ್ಲವೂ ಕೊಚ್ಚಿಹೋಗಿದೆ.

  MORE
  GALLERIES

 • 78

  ಕೊಡಗಿನಲ್ಲಿ ಸಚಿವರೇ ವಾಸ್ತವ್ಯ ಇದ್ದು ಹೋದರೂ ಬದಲಾಗದ ಮನೆ ಮತ್ತು ಊರು

  ಹಾಡಿಯಿಂದ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪುಟಾಣಿಗಳು ಶಾಲೆ ಅಂಗನವಾಡಿಗೆ ಹೋಗಬೇಕಾದರೂ ಮರದ ದಿಮ್ಮಿಯನ್ನು ಹತ್ತಿ, ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ದಾಟಬೇಕು.

  MORE
  GALLERIES

 • 88

  ಕೊಡಗಿನಲ್ಲಿ ಸಚಿವರೇ ವಾಸ್ತವ್ಯ ಇದ್ದು ಹೋದರೂ ಬದಲಾಗದ ಮನೆ ಮತ್ತು ಊರು

  ಸಚಿವ ವಾಸ್ತವ್ಯ ಮಾಡಲು ಬಂದಾಗ ಅಂದು ಈ ಹಾಡಿಯ ಜನರಿಗೆ ಇನ್ನಿಲ್ಲದಷ್ಟು ಸಂತೋಷವಾಗಿತ್ತು. ನಮ್ಮ ಕಷ್ಟಗಳೆಲ್ಲಾ ದೂರವಾಗುತ್ತವೆ, ನಮಗೆ ಎಲ್ಲರಂತೆ ಇರೋದಕ್ಕೆ ಮನೆ ಸಿಕ್ಕಿಬಿಡುತ್ತೇ, ಊರಿಗೆ ರಸ್ತೆ ಆಗುತ್ತೆ, ಕುಡಿಯೋ ನೀರಿನ ವ್ಯವಸ್ಥೆ ಆಗುತ್ತೆ ಎಂದೆಲ್ಲಾ ಎಣಿಸಿದ್ರು. ಆದ್ರೆ ಅದೆಲ್ಲವೂ ಅಂದಿನ ಸಚಿವರ ಮಾತಿನಲ್ಲೇ ಉಳಿದುಬಿಟ್ಟಿವೆ.

  MORE
  GALLERIES