ಸುತ್ತಮುತ್ತಲು ಹಚ್ಚಹಸಿರಿನ ಕಾಡು, ಸದಾ ಪಕ್ಷಿಗಳ ಸದ್ದು. ನಿರಂತರ ಗಂಗೆ ಯಂತೆ ಹರೆಯುವ ನೀರು. ಮನಮೋಹಕವಾಗಿ ಕಾಣುತ್ತಿದೆ ನೀರಿನ ರಮಣೀಯ ದೃಶ್ಯ, ನಿಸರ್ಗದ ಮಡಿಲಲ್ಲಿ ಪುರಾತನ ಗಾಯ ಮುಖ ಕ್ಷೇತ್ರ ಗುಪ್ತಲಿಂಗ ಶಿವನ ದೇಗುಲವಿದು. ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ಖಾನಾಪೂರ ಗ್ರಾಮದ ಹೊರವಲಯದ ಬೆಟ್ಟದಲ್ಲಿ ಈ ಶ್ರೀ ಕ್ಷೇತ್ರ ಗಾಯಮುಖ ಗುಪ್ತಲಿಂಗೆಶ್ವರ ದೇವಾಲಯವಿದೆ. 500 ವರ್ಷದ ಪುರಾತನ ಕಾಲದ ದೇವಾಲಯ ಇದು.
ಗುಪ್ತಲಿಂಗೇಶ್ವರ ಹೆಸರಿಗೆ ಕಾರಣ? ಈ ಹಿಂದೆ ಭಕ್ತರು ಹಲವು ಬಂಡೆಗಳ ಮಧ್ಯ ಇದ್ದ ಲಿಂಗದ ದರ್ಶನ ಪಡೆಯುತ್ತಿದ್ದರಂತೆ ಹೀಗಾಗಿ ಗುಪ್ತಲಿಂಗೇಶ್ವರ ಎಂಬ ಹೆಸರು ಬಂದಿದೆ ಅನ್ನೋದು ಇಲ್ಲಿನ ವಾಡಿಕೆ ಪ್ರವಾಸಿ ತಾಣವಾಗಿ ಭಕ್ತ ಸಮೂಹವನ್ನು ಕೈ ಬೀಸಿ ಕರೆಯುತ್ತಿದೆ. ಮಹಾಶಿವರಾತ್ರಿ, ಶ್ರಾವಣ ಮಾಸ ಮತ್ತು ಅಮಾವಾಸ್ಯೆಯಂದು ಗಾಯಮುಖದಲ್ಲಿ ಭಕ್ತ ಸಾಗರವೇ ಹರಿದು ಬರುತ್ತದೆ. ಈ ದೇವಾಲಯದ ನೀರು ಸೇವನೆ ಮಾಡಿದ್ರೆ ಚರ್ಮ ರೋಗ ದಂತ ಕಾಯಿಲೆಗಳು ನಾಶವಾಗುತ್ತದೆ. ಅಂತಾರೆ ಇಲ್ಲಿನ ಅರ್ಚಕರು.
ದೇವಸ್ಥಾನದಲ್ಲಿನ ಶುದ್ಧ ನೀರು ಅಮೃತದಂತಹ ರುಚಿ ಹೊಂದಿದ್ದು, ಇದನ್ನು ಕುಡಿದರೆ ಸರ್ವ ರೋಗಗಳು ನಿವಾರಣೆಯಾಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಮತ್ತು ಈ ದೇವಾಲಯಕ್ಕೆ ಹರಕೆಯನ್ನು ಹೊತ್ತುಕೊಂಡರೆ ಇಷ್ಟಾರ್ಥ ಗಳು ನೆರವೇರುತ್ತವೆ ಎನ್ನುವ ನಂಬಿಕೆಯೂ ಭಕ್ತರಲ್ಲಿದೆ. ಶ್ರೀ ಕ್ಷೇತ್ರ ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನವು ತಪಸ್ವಿಗಳ ಪಾಲಿನ ಪುಣ್ಯ ಕ್ಷೇತ್ರವಾಗಿದೆ. ಬೆಟ್ಟದೊಳಗೆ ಇರೊದರಿಂದ ಈ ದೇವಾಲಯದ ಬಗ್ಗೆ ಅದೆಷ್ಟೋ ಜನರಿಗೆ ಮಾಹಿತಿ ಇಲ್ಲ.