ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ ಕರುನಾಡ ಜನತೆಗೆ ಇವತ್ತಿಗೂ ನುಂಗಲಾರದ ತುತ್ತಾಗಿದೆ.. ಅವರ ಸಾವಿನಿಂದ ದೇಶ, ವಿದೇಶ, ರಾಜ್ಯಗಳ ಕೋಟ್ಯಾಂತರ ಅಭಿಮಾನಿಗಳು ಕಂಗಾಲಾಗಿದ್ದಾರೆ. ಇನ್ಮುಂದೆ ನಮ್ಮ ನಟನನ್ನ ನೋಡೋಕೆ ಸಾಧ್ಯ ಇಲ್ವೆಲ್ಲಾ ಅಂತ ಕೋಟ್ಯಾಂತರ ಮಂದಿ ಅಭಿಮಾನಿಗಳು ಇಂದಿಗೂ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಅದೆಷ್ಟೋ ಅಭಿಮಾನಿಗಳು ಮನನೊಂದು ನೇಣಿಗೆ ಕೊರಳೊಡ್ಡುತ್ತಿದ್ದಾರೆ. ಈ ನಡುವೆ ನಟ ಪುನಿತ್ ರಾಜ್ ಕುಮಾರ್ ಅನಾಥ ಮಕ್ಕಳು, ಹೀಗೆ ಸಾವಿರಾರು ಜನರಿಗೆ ಇವತ್ತಿಗೂ ದೇವರಾಗಿಯೇ ಇದ್ದಾರೆ.
ಹಿಂದೊಮ್ಮೆ ಪುನೀತ್ನನ್ನು ನೋಡಬೇಕೆಂದು ಹಠ ಹಿಡಿದು ಊಟ ತ್ಯಜಿಸಿದ್ದರು ದೇವಪ್ರಿಯಾ. ಹೇಗೋ ಈಕೆಯ ವಿಚಾರ ಅಪ್ಪು ಕಿವಿಗೆ ಬಿದ್ದಿತ್ತು. ತಡ ಮಾಡದ ಅಪ್ಪು ನೇರವಾಗಿ ದೇವಪ್ರಿಯಳನ್ನ ತನ್ನ ಮನೆಗೆ ಕರೆಸಿಕೊಂಡಿದ್ದರು. ಅಲ್ಲದೇ ಎಲ್ಲವನ್ನು ಬಿಟ್ಟು ಈ ಮಗುವಿನ ಆಸೆ ತೀರಿಸಲು ನಟ ಪುನೀತ್ ಮೂರು ತಾಸು ಕಾದು ಕುಳಿತಿದ್ದರಂತೆ. ಮೂರು ತಾಸು ಬಳಿಕ ಬಂದ ದೇವಪ್ರಿಯ ಹಾಗೂ ಅವರ ತಂದೆ ತಾಯಿಯನ್ನು ಕಚೇರಿಯಲ್ಲಿ ಭೇಟಿ ಮಾಡಿದ್ದರು. ದೇವಪ್ರಿಯಗೆ ಹೊಸ ಬಟ್ಟೆ ಕೊಡಿಸಿ ಅಣ್ಣನಂತೆ ನಡೆದುಕೊಂಡಿದ್ದರು. ಅಂದಿನಿಂದ ದೇವಪ್ರಿಯೆ ಸಂಪೂರ್ಣ ಬದಲಾಗಿ ಹೋಗಿದ್ದಳು.
ಅಪ್ಪು ನೋಡಿದ ಬಳಿಕ ದೇವಪ್ರಿಯ ಸಂಪೂರ್ಣ ಬದಲಾಗಿ ಹೋಗಿದ್ದಾಳೆ. ಮಾತೇ ಆಡದೇ ಇರುತ್ತಿದ್ದವಳು ಅಪ್ಪ, ಅಮ್ಮ, ಅಪ್ಪು ಅನ್ನೋದನ್ನು ಕಲಿತಳು. ಒಂದೊತ್ತು ಗಂಜಿ ಕುಡಿಯುತ್ತಿದ್ದ ದೇವಪ್ರಿಯ ಈಗ ಮೂರು ಹೊತ್ತು ಗಂಜಿ ಕುಡಿಯುತ್ತಿದ್ದಾಳೆ. ಪ್ರತಿ ನಿತ್ಯವೂ ಪುನೀತ್ ಹೆಸರಿನಲ್ಲಿಯೇ ಉಸಿರಾಡುತ್ತಿದ್ದಾಳೆ.. ಹೋಟೆಲ್ ನಿಂದ ತಿಂಡಿ ಕಟ್ಟಿಸಿಕೊಂಡು ಬರುವ ಪೇಪರ್ ನಲ್ಲಿ ಪುನೀತ್ ಪೋಟೋ ಇದ್ರೂ ಅದನ್ನು ಕಟ್ ಮಾಡಿ ಗೋಡೆ ಮೇಲೆ ಅಂಟಿಸುತ್ತಾಳೆ. ಪ್ರತಿ ಕ್ಷಣವೂ ಪುನೀತ್ ಹೆಸರಿನಲ್ಲಿ ಉಸಿರಾಡುತ್ತಿದ್ದಾಳೆ.
ಆದ್ರೀಗ ಪುನಿತ್ ಸಾವನ್ನಪ್ಪಿದ್ದಾರೆ ಎಂಬ ವಿಚಾರ ದೇವಪ್ರಿಯಗೆ ಇನ್ನೂ ತಿಳಿದಿಲ್ಲ. ಪ್ರತಿನಿತ್ಯ ಟಿವಿಗಳಲ್ಲಿ ಪುನಿತ್ ಅವರನ್ನ ತೋರಿಸುತ್ತಿರುವುದನ್ನ ಕಂಡು ಅನುಮಾನಗೊಂಡಿದ್ದಾಳೆ. ಸನ್ನೆ ಮೂಲಕವೇ ತಂದೆ ತಾಯಿಗೆ ಪ್ರಶ್ನೆಗಳ ಮಳೆಯನ್ನೇ ಸುರಿಸುತ್ತಿದ್ದಾಳೆ. ಇತ್ತ ಮಗಳಿಗೆ ಇರೋ ಸತ್ಯ ಹೇಳಿದ್ರೆ ಮೊದಲಿನ ಹಾಗೆ ಮತ್ತೆ ಊಟ ಬಿಡ್ತಾಳೆ, ಜೀವಕ್ಕೆ ಏನಾದ್ರೂ ಹೆಚ್ವು ಕಡಿಮೆ ಮಾಡ್ಕೊಂಡ್ರೆ ಏನು ಮಾಡೋದು ಅಂತ ಹೆತ್ತವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.