Haveri: ತಮ್ಮನ ಸಾವಿನ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಅಕ್ಕ
ಅಕ್ಕ-ತಮ್ಮ ಅಥವಾ ಅಣ್ಣ-ತಂಗಿ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ಮೇಲ್ನೋಟಕ್ಕೆ ಪ್ರತಿನಿತ್ಯ ಹೊಡೆದಾಡಿಕೊಂಡರೂ ಅಕ್ಕ ತಮ್ಮನ ಮೇಲೆ ತೋರುವ ಪ್ರೀತಿಯನ್ನು ಪದಗಳಲ್ಲಿ ಹೇಳಲು ಅಸಾಧ್ಯ. ಆ ಪ್ರೀತಿಯನ್ನು ಅನುಭವಿಸಿದವರಿಗೆ ಮಾತ್ರ ಅದರ ಮಹತ್ವ ಗೊತ್ತು ಹಾವೇರಿ ಜಿಲ್ಲೆಯಲ್ಲಿ ತಮ್ಮನ ಸಾವಿನ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ವಿನಾಯಕ ನಗರದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾದ್ರೆ, ಮಧ್ಯಾಹ್ನ 12 ಗಂಟೆಗೆ ಸೋದರನ ದಾರಿಯನ್ನು ಅಕ್ಕ ಹಿಡಿದಿದ್ದಳು. ಇನ್ನು ಒಂದೇ ದಿನ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ನೋವು ಆಕಾಶ ಮುಟ್ಟಿದೆ.
2/ 5
16 ವರ್ಷದ ನಾಗರಾಜ್ ಚಲಾವದಿ ಮತ್ತು 18 ವರ್ಷದ ಭ್ಯಾಗ್ಯಶ್ರೀ ಸಾವಿನಲ್ಲಿ ಒಂದಾದ ಅಕ್ಕ ಮತ್ತು ತಮ್ಮ. ಶಾಲೆಗೆ ಆರಂಭವಾಗಿದ್ದರಿಂದ ತರಗತಿಗೆ ತೆರಳುವಂತೆ ಪೋಷಕರು ನಾಗರಾಜ್ ಹೇಳಿದ್ದಾರೆ. ಇದರಿಂದ ಮುನಿಸಿಕೊಂಡ ನಾಗರಾಜ್ ಕೋಣೆಗೆ ತೆರಳಿ ನೇಣು ಬಿಗಿದುಕೊಂಡಿದ್ದಾನೆ.
3/ 5
ತಮ್ಮ ನಾಗರಾಜ್ ಸಾವಿನ ಸುದ್ದಿ ಅಕ್ಕ ಭಾಗ್ಯಶ್ರೀಗೆ ಮಧ್ಯಾಹ್ನ 12 ಗಂಟೆಗೆ ತಿಳಿದಿದೆ. ಅದೇನು ಆಯ್ತೋ ಗೊತ್ತಿಲ್ಲ. ಭಾಗ್ಯಶ್ರೀ ಸಹ ಸಾವಿನ ಮನೆ ಸೇರಿದ್ದಾಳೆ.
4/ 5
ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಮರಣೋತ್ತರ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ, ಸಂಜೆ ಕುಟುಂಬಸ್ಥರು ಅಂತ್ಯಕ್ರಿಯೆ ನೆರೆವೇರಿಸಿದ್ದಾರೆ.
5/ 5
ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿನಿತ್ಯ ಶಾಲೆಗೆ ಹೋಗು ಅಂದಿದ್ದಕ್ಕೆ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿರೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆದ್ರೆ ಇಬ್ಬರ ಸಾವಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.