ಗದಗ ಜಿಲ್ಲೆಯ ಗಜೇಂದ್ರಗಡ ಭಾಗ, ಮುಧೋಳ, ಕರಮುಡಿ ಸೇರಿ ವಿವಿಧೆಡೆ ಪ್ರದೇಶದಿಂದ ಹರಿಯುವ ಹಳ್ಳ ನದಿಯ ಪ್ರಮಾಣದಲ್ಲಿ ಹರಿಯುತ್ತಿದೆ. ಯಲಬುರ್ಗಾ ತಾಲೂಕಿನಲ್ಲಿ ಸೋಮವಾರ ಮಧ್ಯಾಹ್ನದಿಂದ ಭಾರಿ ಮಳೆ ಸುರಿಯಿತು. ಮಳೆಯಿಂದಾಗಿ ಹಳ್ಳಕೊಳ್ಳಗಳು ಭರ್ತಿಯಾಗಿ ತುಂಬಿ ಹರಿದವು, ಇದೇ ಸಮಯದಲ್ಲಿ ಬಂಡಿಹಾಳ ಬಳಿಯ ಹಳ್ಳವು ಸಹ ತುಂಬಿ ಹರಿದಿದೆ. ಹಳ್ಳಕ್ಕೆ ಇದ್ದ ಸಣ್ಣ ಸೇತುವೆ ಮುಳಗಡೆಯಾಗಿದೆ.
ನಡುಮಟ್ಟದ ಹಳ್ಳದ ನೀರು, ರಭಸವಾಗಿ ಹರಿಯುತ್ತಿರುವಾಗ ಹಳ್ಳ ಅಪಾಯ ತರುವ ಸಾಧ್ಯತೆ ಇತ್ತು. ಆದರೂ ಗಟ್ಟಿ ಮನಸ್ಸು ಮಾಡಿ ಎಲ್ಲರು ಹಳ್ಳ ದಾಟಿದ್ದಾರೆ. ಇದರಲ್ಲಿ ಬಹಳಷ್ಟು ಜನ ಕೂಲಿಕಾರರು, ಇನ್ನೂ ಮಹಿಳೆಯರು ವೃದ್ದರಿದ್ದರು. ಅವರೆಲ್ಲರೂ ನಿತ್ಯ ಕೆಲಸಕ್ಕೆ ಹೋಗುವಂತೆ ಹೊಲಕ್ಕೆ ಹೋಗಿದ್ದರು. ಆದರೆ ಸಂಜೆ ವೇಳೆಗೆ ಮನೆಗೆ ಮರಳುವಾಗ ಹಳ್ಳದಲ್ಲಿ ಭಾರಿ ಪ್ರವಾಹ ಉಂಟಾಗಿತ್ತು.