ಪಾಂಡವಪುರದಲ್ಲಿ 50ಕ್ಕೂ ಹೆಚ್ಚು ಕೋತಿಗಳ ರಕ್ಷಣೆ; ಕೆರೆತಣ್ಣೂರಿನ ಮಾರಣಹೋಮ ಮರುಕಳಿಸುವುದು ತಪ್ಪಿತಾ?

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ನಾಲ್ಕು ವರ್ಷದ ಹಿಂದೆ ಪಾಂಡವಪುರ ತಾಲೂ ಕಿನಲ್ಲಿ ಕೆರೆತಣ್ಣೂರಿನ ಬಳಿ 50ಕ್ಕೂ ಹೆಚ್ಚು ಕೋತಿಗಳಿಗೆ ವಿಷಹಾಕಿ ಕೊಂದಿದ್ದ ಪ್ರಕರಣ ನಡೆದಿತ್ತು. ಅಂತಹದೇ ಮತ್ತೊಂದು ಪ್ರಕರಣ ನಡೆಯುವುದನ್ನು ಪಾಂಡವಪುರ ತಾಲೂಕಿನ ಹಿಂದೂಪರ ಸಂಘಟನೆ ಕಾರ್ಯಕರ್ತರು ಸ್ವಲ್ಪದರಲ್ಲಿ ತಪ್ಪಿಸಿದ್ದಾರೆ. ಆಟೋದಲ್ಲಿ ಅಕ್ರಮವಾಗಿ ಕೋತಿಗಳನ್ನು ಹಿಡಿದು ಬೋನಿನಲ್ಲಿ ಅಮಾನುಷವಾಗಿ ಕೊಂಡೊಯ್ಯುತ್ತಿದ್ದ ವೇಳೆ ಆಟೋ ಹಿಡಿದು ನಿಲ್ಲಿಸಿ 50 ಕ್ಕೂ ಹೆಚ್ಚಿನ ಕೋತಿಗಳನ್ನು ರಕ್ಷಣೆ ಮಾಡಿದ್ದಾರೆ. (ವರದಿ: ರಾಘವೇಂದ್ರ ಗಂಜಾಮ್)

First published: