ಈ ಹಬ್ಬದಂದ ಮಹಿಳೆಯರು ತಮ್ಮ ತವರು ಮನೆಗೆ ಮರಳಿ ನಾಗದೇವತೆಯ ಪೂಜೆ ಸಲ್ಲಿಸುವುದು ಸಂಪ್ರದಾಯವಿದೆ. ಅದರ ಜೊತೆಗೆ ಮನೆಗೆ ಮಗಳ ಆಗಮನ ಹಿರಿಯರಲ್ಲಿ ಸಂತಸ ತಂದರೆ ತರಹೇವಾರಿ ತಿಂಡಿಗಳು ಮಕ್ಕಳ ಮನಸೂರೆಗೊಳ್ಳುತ್ತವೆ. ಇದರ ಜೊತೆಯಲ್ಲಿಯೇ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ನಾಗರ ಪಂಚಮಿ ಅಂಗವಾಗಿ ನಡೆಯುವ ಶಕ್ತಿ ಪ್ರದರ್ಶನದ ಸಾಹಸ ಕ್ರೀಡೆಗಳು ಪುರುಷರಿಗೆ ಹೇಳಿ ಮಾಡಿಸಿದಂತಿವೆ.