Heavy Rain in Mandya: ಭಾರೀ ಮಳೆಗೆ ಮಂಡ್ಯ ತತ್ತರ; ಕುಸಿದು ಬಿದ್ದ ಮನೆಗಳು, ಓರ್ವ ಬಾಲಕ ಬಲಿ!
ಸಕ್ಕರೆ ನಾಡು ಮಂಡ್ಯದಲ್ಲಿ (Mandya) ವರುಣ ಆರ್ಭಟಿಸಿದ್ದಾನೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ (Heavy Rain) ನೂರಾರು ಎಕರೆ ಬೆಳೆ ಕೊಚ್ಚಿ ಹೋಗಿದೆ. 15ಕ್ಕೂ ಹೆಚ್ಚು ಮನೆಗಳು ಕುಸಿದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೆನ್ನಾಳು ಗ್ರಾಮದಲ್ಲಿ ಗೋಡೆ ಕುಸಿದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ. (ವರದಿ: ಸುನೀಲ್ ಗೌಡ)
[caption id="attachment_661337" align="aligncenter" width="595"] ಕಳೆದ ಮೂರ್ನಾಲ್ಕು ದಿನಗಳಿಂದ ಮಂಡ್ಯ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆಯಾಗುತ್ತಿತ್ತು. ಆದ್ರೆ ಕಳೆದ ರಾತ್ರಿ ವರುಣ ಆರ್ಭಟಿಸಿದ್ದು, ಜಿಲ್ಲೆಯ ಜನ ತತ್ತರಿಸಿದ್ದಾರೆ.
[/caption]
2/ 8
ನಿನ್ನೆ ಸಂಜೆಯಿಂದಲೇ ಶುರುವಾದ ಮಳೆ ಮುಂಜಾನೆ 4 ಗಂಟೆಯವರೆಗೂ ಸುರಿಯಿತು. ಪರಿಣಾಮ ಕರೆ ಕಟ್ಟೆಗಳು ಕೋಡಿ ಬಿದ್ದು ಹಳ್ಳಗಳು ಉಕ್ಕಿ ಹರಿಯುತ್ತಿವೆ. ಇನ್ನು ಪಾಂಡವಪುರ ತಾಲ್ಲೂಕಿನ ಲಿಂಗಾಪುರ ಗ್ರಾಮ ಸಂಪೂರ್ಣ ಜಲಾವೃತಗೊಂಡು ಗ್ರಾಮದ ಎಲ್ಲಾ ಮನೆಗಳಿಗೂ ನೀರು ನುಗ್ಗಿತ್ತು.
3/ 8
ಮನೆಯಲ್ಲಿದ್ದ ದಿನಸಿ ಸೇರಿದಂತೆ ಎಲ್ಲಾ ವಸ್ತುಗಳು ನೀರು ಪಾಲಾಗಿದ್ದು, ಗ್ರಾಮಸ್ಥರು ಮಳೆಯಲ್ಲೇ ರಾತ್ರಿ ಇಡೀ ಜಾಗರಣೆ ಮಾಡುವಂತಾಯಿತು. ಅಲ್ಲದೆ 8 ಮನೆಗಳು ಕುಸಿದು ಬಿದ್ದಿದ್ದು, ಮನೆಯಿಂದ ಹೊರ ಬಂದಿದ್ರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.
4/ 8
ಇನ್ನು ಮನೆ ಕಳೆದುಕೊಂಡ ಕುಟುಂಬಸ್ಥರು ಮುಂದೇನು ಮಾಡಬೇಕು ಎಂಬುದು ತಿಳಿಯದೇ ಕಣ್ಣೀರಿಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅನಿವಾರ್ಯವಾಗಿ ಸಂಬಂಧಿಕರ ಮನೆಗಳಿಗೆ ಅಳಿದುಳಿದ ವಸ್ತುಗಳನ್ನು ಸಾಗಿಸಿದ್ದಾರೆ.
5/ 8
ಪಾಂಡವಪುರ ಕೆನ್ನಾಳು ಗ್ರಾಮದ ಜವರೇಗೌಡ ಎಂಬುವರ ಮನೆ ಬೆಳಿಗ್ಗೆ ಕುಸಿದು ಬಿದ್ದಿದ್ದು, ಮನೆಯ ಪಕ್ಕದಲ್ಲೇ ಆಟವಾಡುತ್ತಿದ್ದ 10 ವರ್ಷದ ಗಗನ್ ಎಂಬಾತನ ಮೇಲೆ ಗೋಡೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಮೃತಪಟ್ಟಿದ್ದಾನೆ.
6/ 8
ಶಾಸಕ ಪುಟ್ಟರಾಜು ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಜೊತೆಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ರು.
7/ 8
ಕೆ.ಆರ್.ಪೇಟೆ ತಾಲ್ಲೂಕಿನ ಹುಣಸನಹಳ್ಳಿ ಸಮೀಪ ರಸ್ತೆ ಕೊಚ್ಚಿಹೋಗಿದ್ದು, ಅದೇ ವೇಳೆ ಚಲಿಸುತ್ತಿದ್ದ ಕಾರು ಸಿಲುಕಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
8/ 8
ಒಟ್ಟಾರೆ ಕಳೆದ ರಾತ್ರಿ ಮಳೆಯಿಂದ ಮಂಡ್ಯ ಜಿಲ್ಲೆಯಲ್ಲಿ ಓರ್ವ ಬಾಲಕನ ಬಲಿಯಾಗಿದ್ದು, ಲಕ್ಷಾಂತರ ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿದೆ.