ಕೋಟಿ ರುಪಾಯಿ ಧನಸಹಾಯ ಮಾಡುವ ಪ್ಲಾನ್ ಮಾಡಿದ್ದಾರೆ ಕೂಡ..ಸಾಂಕ್ರಾಮಿಕ ಕೊರೋನಾ ನಡುವೆಯೇ ಶ್ರೀಕೃಷ್ಣ ಜನ್ಮಾಷ್ಟಮಿ ಮುಗಿದಿದೆ. ಅದ್ದೂರಿ ಅಷ್ಟಮಿ ಆಚರಣೆಗೆ ಉಡುಪಿ ಜಿಲ್ಲಾಡಳಿತ ಅವಕಾಶ ಕೊಟ್ಟಿಲ್ಲ. ಅಂತರರಾಷ್ಟ್ರೀಯ ಮಟ್ಟದ ವೆಬ್ಸೈಟ್ಗಳಲ್ಲಿ ಬಂದ ಹಣದಲ್ಲಿ ಒಂದು ರೂಪಾಯಿಯನ್ನು ರವಿ ಇಟ್ಟುಕೊಂಡಿಲ್ಲ. ಕಳೆದ ಬಾರಿ ಕೊರೋನ ಸಾಂಕ್ರಾಮಿಕ ವಿಪರೀತ ಇದ್ದ ಕಾರಣ ರವಿ ಜನಜಾಗೃತಿಗಾಗಿ ವೇಷ ಹಾಕಿದ್ದರು, ಧನಸಂಗ್ರಹ ಮಾಡಿರಲಿಲ್ಲ. ಈ ಬಾರಿ ಜಿಲ್ಲಾಡಳಿತ ರವಿ ಕಟಪಾಡಿ ಅವರಿಗೆ ಸ್ಪೆಷಲ್ ಪರ್ಮಿಷನ್ ಕೊಟ್ಟಿತ್ತು.
ಅಷ್ಟಮಿ ದಿನ ಸಾವಿರಾರು ಜನ ವೇಷ ಧರಿಸುತ್ತಾರೆ ಆದರೆ ಈ ಬಾರಿಯೂ ಅದಕ್ಕೆ ಚಾನ್ಸ್ ಇರಲಿಲ್ಲ. ಸಮಾಜಸೇವಕ ಉಡುಪಿಯ ರವಿ ಕಟಪಾಡಿಗೆ ಸ್ಪೆಷಲ್ ಅವಕಾಶ ಕೊಡಲಾಗಿತ್ತು. ಹಾಲಿವುಡ್ ಸಿನಿಮಾದ ಫ್ಯಾಂಟಸಿ ವೇಷ ಡಾರ್ಕ್ ಎಲೈಟ್ ಮೂಲಕ ಎರಡು ದಿನ ರವಿ ಓಡಾಡಿ ಅಷ್ಟಮಿಗೆ ಹೊಸಕಳೆ ತಂದಿದ್ದಾರೆ. ಅಪರೂಪದಲ್ಲಿ ಅಪರೂಪದ ವೇಷ ಹಾಕಿ ಜನರನ್ನು ಆಕರ್ಷಿಸಿದ್ದಾರೆ. ಎರಡು ದಿನ ಉಪವಾಸವಿದ್ದು ದೇವರ ಸೇವೆ ಎಂಬಂತೆ ಓಡಾಡಿದ್ದಾರೆ.
ಸೆಂಟ್ರಿಂಗ್ ಕೆಲಸ ಮಾಡುವ ರವಿ ಕಟಪಾಡಿ ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೇಷಧರಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡುತ್ತಾರೆ. ಕಳೆದ ಆರು ವರ್ಷದಲ್ಲಿ ಬರೋಬ್ಬರಿ 72 ಲಕ್ಷ ರೂಪಾಯಿಯನ್ನು ಸುಮಾರು 33 ಮಕ್ಕಳಿಗೆ ನೀಡಿದ್ದಾರೆ. ಕೌನ್ ಬನೇಗಾ ಕರೋಡ್ ಪತಿಯಲ್ಲಿ ತಾನು ಗೆದ್ದು ಬಂದ ಎಂಟು ಲಕ್ಷ ರೂಪಾಯಿಯನ್ನು ಪೂರ್ತಿಯಾಗಿ ಕಷ್ಟದಲ್ಲಿರುವವರಿಗೆ ಕೊಟ್ಟಿದ್ದಾರೆ.
ಎರಡು ದಿನಗಳ ಕಾಲ ಉಡುಪಿಯ ಆಸುಪಾಸು ಸಂಚರಿಸಿ ಧನ ಸಂಗ್ರಹ ಮಾಡಿದ್ದಾರೆ. ರವಿ ಕಟಪಾಡಿ ಈ ಬಾರಿ ಆರು ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರ ಮಾಡಿದ್ದಾರೆ. ರವಿ ಕಟಪಾಡಿಯ ಜೀವನದ ಕಷ್ಟಗಳು, ಕಲಾಸಕ್ತಿ ಹಾಗೂ ಪಾರದರ್ಶಕವಾಗಿ ಸಹಾಯ ಮಾಡುವುದರಿಂದಲೇ ರವಿ ವಿಭಿನ್ನವಾಗಿದ್ದಾರೆ. ಹಾಗಾಗಿಯೇ ಜನ ಇವರು ಬಂದ ಕೂಡಲೇ ಕಣ್ಮುಚ್ಚಿ ಹಣ ನೀಡುತ್ತಾರೆ. ರವಿಗೆ ಕೊಟ್ಟ ಒಂದೊಂದು ರೂಪಾಯಿ ಕಷ್ಟದಲ್ಲಿರುವ ಕುಟುಂಬಗಳ ಕಂಬನಿ ಒರಿಸುತ್ತೆ ಅನ್ನೋದು ಸಹೃದಯಿಗಳ ವಿಶ್ವಾಸ. ರವಿಯ ಕಾರ್ಯ ಮತ್ತಷ್ಟು ಮಂದಿಗೆ ಪ್ರೇರೇಪಿಸುತ್ತಿರುವುದಂತು ಸತ್ಯ..