ತ್ರೇತಾಯುಗದಲ್ಲಿ ತಂದೆ ತಾಯಿ ಸೇವೆಗೈದ ಶ್ರವಣಕುಮಾರ ಹೆಸರು ನಿಮಗೆಲ್ಲ ಗೊತ್ತೆ ಇದೆ. ಆತ ತನ್ನ ವಯಸ್ಸಾದ ಹಾಗೂ ಅಂಧ ತಂದೆ ತಾಯಿಯನ್ನು ಎರಡು ತಕ್ಕಡಿಯಲ್ಲಿ ಕೂಡಿಸಿಕೊಂಡು ದೇಶದ ವಿವಿಧ ತೀರ್ಥಕ್ಷೇತ್ರಗಳನ್ನು ತೋರಿಸಿದ್ದ. ಇಂದು ಅದೇ ರೀತಿಯಲ್ಲಿ ಸಕ್ಕ ರೆನಾಡು ಮಂಡ್ಯದ ವ್ಯಕ್ತಿಯೊಬ್ಬರು ತನ್ನ ಬಳಿ ಇದ್ದ ಹಳೆಯ ಸ್ಕೂಟರ್ನಲ್ಲಿ ತನ್ನ ವಯಸ್ಸಾದ ತಾಯಿಗೆ ಇಡೀ ದೇಶವನ್ನೇ ತೋರಿಸಿಕೊಂಡು ಬಂದಿದ್ದಾರೆ.