ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮಡಿಕೇರಿ ವಿರಾಜಪೇಟೆ ನಡುವಿನ ಭೇತ್ರಿ ಗ್ರಾಮದ ಸೇತುವೆ ಮುಳುಗಡೆಯ ಆತಂಕದಲ್ಲಿದೆ. ನದಿಯಲ್ಲಿ ಇನ್ನೊಂದೇ ಅಡಿ ನೀರು ಹೆಚ್ಚಳವಾದರೂ ಭೇತ್ರಿ ಗ್ರಾಮಕ್ಕೆ ಪ್ರವಾಹದ ನೀರು ನುಗ್ಗಲಿದೆ. ಇದರಿಂದ ತೀವ್ರ ಈ ಗ್ರಾಮದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.