ಟೊಮೆಟೊ ವಹಿವಾಟಿನಲ್ಲಿ ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂಬ ಖ್ಯಾತಿ ಕೋಲಾರದ ಎಪಿಎಂಸಿಯದ್ದು. ಕೋಲಾರ ಜಿಲ್ಲೆಯಲ್ಲಿ ಬೆಳೆದ ಟೊಮೆಟೊವನ್ನು ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಆಂದ್ರ ಪ್ರದೇಶ, ಪಂಜಾಬ್, ತಮಿಳುನಾಡು, ಹರಿಯಾಣ ಸೇರಿದಂತೆ ದೇಶದ ಮೂಲೆಮೂಲೆಗೆ ಸರಬರಾಜು ಆಗುತ್ತಿದೆ. ಆದರೀಗ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಮಳೆ ಸೃಷ್ಟಿಸುತ್ತಿರುವ ಅನಾಹುತ, ಪ್ರವಾಹದ ಅತಿವೃಷ್ಠಿಯ ಬಿಸಿ ಕೋಲಾರ ಜಿಲ್ಲೆಯ ಟೊಮೆಟೊ ಬೆಳೆಗಾರರಿಗೂ ತಾಕಿದೆ.