ಅಂಜನಾದ್ರಿ ಬೆಟ್ಟದಲ್ಲಿ ಹೋಮ-ಹವನ ನಡೆಸಲಾಯಿತು. ಯುವ ಬ್ರಿಗೇಡ್ ನೇತೃತ್ವದಲ್ಲಿ ಹೋಮ ಮಾಡಲಾಯಿತು. ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ವಿಜಯನಗರ ಸಾಮ್ರಾಜ್ಯದ ವಂಶಸ್ಥ ಕೃಷ್ಣದೇವ ಮತ್ತಿತರರು ಯಜ್ಞದಲ್ಲಿ ಭಾಗಿಯಾಗಿದ್ದರು. ಎರಡು ತಾಸುಗಳ ಕಾಲ ಹೋಮ-ಹವನ ಸಾಂಗವಾಗಿ ನೆರವೇರಿತು. ಶ್ರೀರಾಮ ಮಂದಿರ ನಿರ್ಮಾಣ ಸಾಂಗವಾಗಿ ನೆರವೇರಲಿ. ಯಾವುದೇ ವಿಘ್ನಗಳು ಬಾರದಿರಲಿ ಎಂದು ಪ್ರಾರ್ಥಿಸಲಾಯಿತು.