ಮಳೆಗಾಲ ಆರಂಭವಾದರೆ ನರಚನಹಳ್ಳ ಉಕ್ಕಿ ಹರಿಯುತ್ತೆ. ಈ ವೇಳೆ ಗ್ರಾಮೀಣ ರಸ್ತೆಗಳು, ಹೊಲಕ್ಕೆ ತೆರಳುವ ಮಾರ್ಗಗಳು ಬಂದ್ ಆಗುತ್ತವೆ. ಪ್ರವಾಹದ ತೀವ್ರತೆ ಹೆಚ್ಚಿದರೆ ರೈತರು ಹೊಲಗಳಲ್ಲಿಯೇ ರಾತ್ರಿ ಕಳೆಯಬೇಕಾಗುತ್ತೆ. ಪ್ರವಾಹ ತಗ್ಗುವವರೆಗೆ ಇದ್ದಲ್ಲಿ ಕಾಯುತ್ತಿರಬೇಕಾಗುತ್ತೆ. ಮನೆಯಲ್ಲಿದ್ದವರು ಹೊಲಕ್ಕೆ ಮತ್ತು ಹೊಲದಲ್ಲಿ ಇದ್ದವರು ಮನೆಗೆ ಹೋಗುವಂತಿಲ್ಲ. ಕುಂದಗೋಳ ತಾಲ್ಲೂಕಿನ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಳ್ಳುತ್ತವೆ.
ಈ ಹಳ್ಳಕ್ಕೆ ಕಿರು ಸೇತುವೆ ನಿರ್ಮಿಸುವಂತೆ ಸ್ಥಳೀಯರ ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮಸ್ಥರ ದಶಕದ ಬೇಡಿಕೆಗೆ ಜನ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕಿವಿಗೊಟ್ಟಿಲ್ಲ. ಇನ್ನೊಂದೆಡೆ ನೆರೆ ಹಾವಳಿಗೆ ರೈತರು ಬೆಳೆದ ಬೆಳಗಳು ನಾಶವಾಗುತ್ತಿವೆ. ಶೇಂಗಾ, ಹೆಸರು ಬೆಳೆಗಳು ಮಳೆ ನೀರಲ್ಲಿ ಕೊಚ್ಚಿ ಹೋಗಿ ಅನ್ನದಾತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.