ಎಲ್ಲೆಂದರಲ್ಲಿ ಕೂತಿರುವ ಗುಬ್ಬಿಗಳು ಹಾಗೂ ಗಿಣಿಗಳು, ಸ್ವಚ್ಚಂದವಾಗಿ ಯಾರ ಭಯವಿಲ್ಲದೆ ಜೋಳ ತಿನ್ನುತ್ತಿರುವ ವಿವಿಧ ರೀತಿಯ ಗುಬ್ಬಿಗಳು. ಇದು ದಾವಣಗೆರೆಯ ಚಂದ್ರಶೇಖರ್ ಅವರ ಜೋಳದ ತೋಟದಲ್ಲಿ ಕಂಡು ಬಂದ ದೃಶ್ಯ. ಒಂದೊನಾಂದು ಕಾಲದಲ್ಲಿ ಗುಬ್ಬಿಗಳೆಂದರೆ ಎಲ್ಲಿ ನೋಡಿದರೂ ಕಾಣುತ್ತಿದ್ದವು. ಆದರೆ ಇತ್ತೀಚೆಗೆ ಗುಬ್ಬಿಗಳ ಸಂತತಿ ಕಡಿಮೆಯಾಗುತ್ತಿದೆ. ಹೀಗಾಗಿ ಗುಬ್ಬಿ ಸಂತತಿ ಉಳಿಸಲು ಪಣ ತೊಟ್ಟಿರುವ ಚಂದ್ರಶೇಖರ್ ತಮ್ಮ ಜೋಳದ ತೋಟವನ್ನೇ ಮೀಸಲಿಟ್ಟಿದ್ದಾರೆ.
ದಾವಣಗೆರೆ ತಾಲ್ಲೂಕಿನ ಶಾಮನೂರು ಬಳಿಯ ಚಂದ್ರಶೇಖರ್ ತಮ್ಮ ಜಮೀನಿನಲ್ಲಿ ಪಕ್ಷಿಗಳಿಗೋಸ್ಕರ ಜೋಳದ ಬೆಳೆಯನ್ನ ಮೀಸಲಿಟ್ಟಿದ್ದಾರೆ, ದಿನೇ ದಿನ ಸಾವಿರಾರು ಗುಬ್ಬಚ್ಚಿಗಳು ಹಾಗೂ ಗಿಣಿಗಳು ಇಲ್ಲಿಗೆ ಬಂದು ಜೋಳವನ್ನ ತಿಂದು ಇಲ್ಲಿಯೇ ಗೂಡು ಕಟ್ಟಿಕೊಂಡಿವೆ. ಗುಬ್ಬಿಗಳಲ್ಲಿ ಹಲವು ಪ್ರಭೇದಗಳಿವೆ, ಅದರಲ್ಲಿ ಗೀಜಗಳು, ಚುಕ್ಕೆ ಮುನಿಯಾ, ಕಪ್ಪು ತಲೆ ಮುನಿಯಾ, ಮಿಂಚುಳ್ಳಿ, ಸಿಲ್ವರ್ ಫಿಂಚ್ ಹಾಗೂ ಇನ್ನಿತರೆ ತರೇವಾರಿ ಪಕ್ಷಿಗಳು ಇಲ್ಲಿಗೆ ಬಂದು ತಮ್ಮ ಇಷ್ಟವಾದ ಜೋಳವನ್ನ ತಿಂದು ಸಂಭ್ರಮಿಸುತ್ತಿವೆ.